ರಾಮ್ ಚರಣ್ ತೇಜಾ ಅದ್ದೂರಿ ಚಿತ್ರದ ಮುಹೂರ್ತ

By Super

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಪುತ್ರ, ಖ್ಯಾತ ನಟ ರಾಮ್ ಚರಣ್ ತೇಜಾ ಹೊಸ ಸಿನಿಮಾ ಮುಹೂರ್ತವೊಂದನ್ನು ಎಂಜಾಯ್ ಮಾಡಿದ್ದಾರೆ. ಬೇರೆ ಯಾರದೋ ಅಲ್ಲ, ಅದು ವಿವಿ ವಿನಾಯಕ ನಿರ್ದೇಶನದಲ್ಲಿ ಮೂಡಿಬರಲಿರುವ ಅವರದ್ದೇ ಚಿತ್ರ.

ಅವರಮ್ಮ ಕ್ಲಾಪ್ ಮಾಡಿದ ಈ ಚಿತ್ರ ಇಂದು (ನವೆಂಬರ್ 9) ರಂದು ಮುಹೂರ್ತ ಕಂಡಿತು. ತಂದೆ-ಮಗನ ಬಾಂಧವ್ಯದ ಸುತ್ತ ಸುತ್ತುವ ಈ ಚಿತ್ರಕಥೆ ಲವ್, ಆಕ್ಷನ್ ಹಾಗೂ ಹಾಸ್ಯದ ಮಿಶ್ರಣವಾಗಿದೆ. ರಾಮ್ ಚರಣ್ ಜೊತೆ ಕೆಲಸ ಮಾಡುವುದ ಖುಷಿಯ ವಿಚಾರ ಅಂದಿದ್ದಾರೆ ನಿರ್ದೇಶಕ ವಿವಿ ವಿನಾಯಕ. ನಾಯಕಿಯಾಗಿ ಕಾಜಲ್ ಅಗರವಾಲ್ ಆಯ್ಕೆಯಾಗಿದ್ದಾರೆ.

ಯುನಿವರ್ಸಲ್ ಮೀಡಿಯಾ ಅಡಿಯಲ್ಲಿ ಡಿವಿವಿ ದಾನಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇನ್ನೊಬ್ಬಳು ನಾಯಕಿಯಾಗಿ ಸಮಂತಾ ಹೆಸರು ಕೇಳಿ ಬರುತ್ತಿದೆ. ಆದರೆ ನಿರ್ಧಾರವಾಗಿಲ್ಲ. ಸಾಕಷ್ಟು ಶ್ರೀಮಂತವಾಗಿ ಮೂಡಿಬರಲಿರುವ ಈ ಚಿತ್ರ ಚಿರಂಜೀವಿಯ ಮಗನನ್ನು ಸ್ಟಾರ್ ವಾರ್ ನಲ್ಲಿ ಅದೆಷ್ಟು ಮೇಲಕ್ಕೇರಿಸಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ. (ಒನ್ ಇಂಡಿಯಾ ಕನ್ನಡ )

More from Filmibeat

English summary
Ram Charan Teja starrer latest movie was launched today morning at Annapurna Studios. The actors mom Surekha tapped the clap for the first shot for VV Vinayak directorial forthcoming Telugu movie.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X