ಡೈಲಾಂಗ್ ಕಿಂಗ್ ಸಾಯಿಕುಮಾರ್ ಅಂಡ್ ಬ್ರದರ್ಸ್

Saikumar
ಒಂದಾನೊಂದು ಕಾಲದಲ್ಲಿ ಸಾಯಿಕುಮಾರ್ ಡೈಲಾಗ್ ನಿಂದಲೇ ಚಿತ್ರ ಓಡುತ್ತಿತ್ತು. ಅಥವಾ ಓಡಿದ ಚಿತ್ರದಲ್ಲೆಲ್ಲಾ ಅವರ ಡೈಲಾಗ್ ಜನಮೆಚ್ಚುಗೆ ಗಳಿಸಿತ್ತು ಎನ್ನಬಹುದು. ಸಾಯಿಕುಮಾರ್ ಕನ್ನಡ, ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದೇ ತಡ, ಅವರ ತಮ್ಮಂದಿರಾದ ರವಿಶಂಕರ್ ಹಾಗೂ ಅಯ್ಯಪ್ಪ ಸಿನಿಮಾ ಕ್ಷೇತ್ರಕ್ಕೆ ಪ್ರತ್ಯಕ್ಷ!

ಈ ಮೂವರು ಸಹೋದರರ ಸಂಗಮದ ಸಿನಿಮಾ ನೋಡುವ ಭಾಗ್ಯ ಕನ್ನಡಿಗರಿಗೆ ಸದ್ಯದಲ್ಲಿಯೇ ಲಭಿಸಲಿದೆ. ಸುದೀಪ್ ನಾಯಕರಾಗಿರುವ 'ವರದನಾಯಕ' ಚಿತ್ರದಲ್ಲಿ ಈ ತ್ರಿಮೂರ್ತಿಗಳ ಅಭಿನಯವಿದೆ. ಇದರಲ್ಲಿ ನಾಯಕಿ ನಿಕಿಶಾ ಪಟೇಲ್. ಪ್ರಮುಖ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಕೂಡ ಇದ್ದಾರೆ.

ತೆಲುಗಿನಲ್ಲಿ ಜಗಪತಿ ಬಾಬು ಮತ್ತು ಗೋಪಿಚಂದ್ ಅಭಿನಯದ 'ಲಕ್ಷ್ಯಂ' ಚಿತ್ರದ ರೀಮೇಕ್ ಈ ಕನ್ನಡದ ವರದನಾಯಕ. ಕನ್ನಡದ ಅಣ್ಣಾವ್ರ ಕುಟುಂಬದ ಕುಡಿಗಳಾದ ಶಿವಣ್ಣ, ರಾಘಣ್ಣ ಮತ್ತು ಪುನೀತ್ ಒಟ್ಟಿಗೆ ನಟಿಸುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಆದರೆ ಸಾಯಿಕುಮಾರ್ ಬ್ರದರ್ಸ್ ಅಂಡ್ ಕಂಪನಿ ಪ್ರತ್ಯಕ್ಷವಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Dialogue King Saikumar and his brothers are acting together in a kannada Movie Varadanayaka. Its the Remake of Telugu 'Lakshyam'.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X