ಸ್ಟಾರ್ ವಾರ್ ನಲ್ಲಿ ಸೋತು ಗೆದ್ದ ಕನ್ನಡಿಗ ಸುಮನ್

ತೆಲುಗು ಚಿತ್ರರಂಗದಲ್ಲಿ ಮಿಂಚಿದ ಕನ್ನಡಿಗ ಸುಮನ್ ಮಂಗಳೂರಿನ ಮುಲ್ಕಿ-ಹೆಜಮಾಡಿಯವರು. ತೆಲುಗು, ತಮಿಳು, ಮಲೆಯಾಳಂ ಹಾಗೂ ಇಂಗ್ಲೀಷ್ ಚಿತ್ರ ಸೇರಿದಂತೆ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕೀರ್ತಿ ಈ ಸುಮನ್ ರದು. ಜೊತೆಗೆ ಅವರು ಕ್ಲಿಯರ್ ವಾಟರ್ ನಿರ್ಮಾಣದ, ಕೆವಿನ್ ಮುಖರ್ಜಿ ನಿರ್ದೇಶನದ "ಡೆತ್ ಅಂಡ್ ಟ್ಯಾಕ್ಸಿಸ್" ಇಂಗ್ಲಿಷ್ ಚಿತ್ರದಲ್ಲೂ ನಟಿಸಿದ್ದಾರೆ.

ಸುಮನ್ ಒಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದವರು. ಮೆಗಾಸ್ಟಾರ್ ಚಿರಂಜೀವಿಗೇ ಸಡ್ಡುಹೊಡೆದು ನಿಂತವರು. ಆದರೆ ತೆಲುಗು ಚಿತ್ರರಂಗದ ಒಳರಾಜಕೀಯದಿಂದ ಸುಮನ್ ನೇಪಥ್ಯಕ್ಕೆ ಸರಿಯಬೇಕಾಯಿತು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ಮಾನಸಿಕ ವೇದನೆಯಿಂದ ನರಳಬೇಕಾಯಿತು. ಆದರೂ ಈಗ ಮತ್ತೆ '50 ಪ್ಲಸ್' ವಯಸ್ಸಿನಲ್ಲಿ ಹೀರೋ ಆಗಿ ಚಿತ್ರರಂಗದ ಪಯಣ ಮುಂದವರಿಸುತ್ತಿದ್ದಾರೆ.

ಆದರೆ ಈ ಸುಮನ್ ಎಂದೂ ಮದುರಿ ಕುಳಿತವರಲ್ಲ. ಸಿಕ್ಕ ಅವಕಾಶವನ್ನು ಬಾಚಿಕೊಂಡು ಬೆಳದವರು. ಸುದೀರ್ಘ ಅವಧಿಯ ನಂತರ ತಮಿಳಿನ 'ಶಿವಾಜಿ' ಚಿತ್ರದ ವಿಲನ್ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸುಮನ್, ಇದೀಗ ಮತ್ತೆ ಹೀರೋ ಆಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಅದಕ್ಕೆ ಅವಕಾಶ ನೀಡಿದ್ದಾರೆ ತೆಲುಗು ಚಿತ್ರ ನಿರ್ದೇಶಕಿಯೊಬ್ಬರು. (ಒನ್ ಇಂಡಿಯಾ ಕನ್ನಡ )

More from Filmibeat

English summary
Actor Suman relaunching as hero in Telugu movie. After a long gap in his career, he acts as hero in Telugu film industry.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X