ಬಾಲಿವುಡ್‌ಗೆ ನಟ ಸುದೀಪ್ ಉದ್ದಂಡ ನಮಸ್ಕಾರ

By Rajendra

ಇನ್ನೇನ್ನು ಕಿಚ್ಚ ಸುದೀಪ್ ಬಾಲಿವುಡ್‌ಗೆ ಜಂಪ್ ಆಗುವ ಎಲ್ಲ ಲಕ್ಷಣಗಳು ನಿಚ್ಚಳವಾಗಿ ಗೋಚರಿಸುತ್ತಿದ್ದವು. ಅದಕ್ಕೂ ಮೊದಲೆ ಸುದೀಪ್ ಬಾಲಿವುಡ್‌ಗೆ ಉದ್ದಂಡ ನಮಸ್ಕಾರ ಹಾಕಿದ್ದಾರೆ. 'ಫೂಂಕ್' ಹಾಗೂ 'ರನ್' ಎಂಬ ಎರಡು ಹಿಮ್ದಿ ಚಿತ್ರಗಳು ಸುದೀಪ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದವು.

ಈಗ ಯಾವ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೀರಿ ಎಂದರೆ, ಯಾವುದೂ ಇಲ್ಲ ಎಂಬ ಉತ್ತರ ಬರುತ್ತದೆ. ತಮಗೆ ಮತ್ತೊಂದು ಹಿಂದಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿತ್ತು. ಆದರೆ ತಾವೆ ಆಸಕ್ತಿ ತೋರಿಸಲಿಲ್ಲ ಎನ್ನುತ್ತಾರೆ ಸುದೀಪ್.

ಒಂದು ಹಿಂದಿ ಚಿತ್ರದಲ್ಲಿ ಅಭಿನಯಿಸಬೇಕಾದರೆ ಕನಿಷ್ಠಪಕ್ಷ ಆರರಿಂದ ಎಂಟು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಇದರಿಂದ ನನಗೆ ಹಲವಾರು ಕನ್ನಡ ಚಿತ್ರಗಳು ಕೈತಪ್ಪಿ ಹೋಗುವ ಸಾಧ್ಯತೆಗಳಿತ್ತು. ಕನ್ನಡ ಚಿತ್ರಗಳಿಂದ ದೂರವಾಗಿ ಉಳಿಯುವುದೆಂದರೆ ನೋವಿನ ಸಂಗತಿ ಎಂದಿದ್ದಾರೆ.

ಸದ್ಯಕ್ಕೆ ತೆಲುಗಿನಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಈ ಚಿತ್ರ ತಮಿಳು, ಹಿಂದಿ ಭಾಷೆಗಳಿಗೂ ಡಬ್ ಆಗಲಿದೆ. ಸುದೀಪ್‍‌ಗೆ ಹಿಂದಿ ಚಿತ್ರ ಒಂದಕ್ಕೆ ಆಕ್ಷನ್ ಕಟ್ ಹೇಳಬೇಕೆಂಬ ಮಹದಾಸೆಯೊಂದು ಇದೆಯಂತೆ.

ಆದರೆ ಒಂದು ಹಿಂದಿ ಚಿತ್ರದ ಚಿತ್ರೀಕರಣಕ್ಕೆ ಏನಿಲ್ಲವೆಂದರೂ ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ತಾನು ಇನ್ನೂ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿಲ್ಲ. ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ವರದನಾಯಕ' ಚಿತ್ರೀಕರಣ ಭರದಿಂದ ಸಾಗಿದೆ. 'ಕಿಕ್' ಚಿತ್ರ ಶೀಘ್ರದಲ್ಲೆ ಚಿತ್ರೀಕರಣ ಆರಂಭಿಸಲಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Actor-turned-director Sudeep is saying goodbye to bollywood films. Because of Hindi films he is not much concentrating on Kannada movies. So he decided to involve more and more in Kannada films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X