ಅಲ್ಲು ಅರ್ಜುನ್ ಜೊತೆ ನಲ್ಲ ಸುದೀಪ್‌ಗೆ ಬಂಪರ್ ಛಾನ್ಸ್
ಕನ್ನಡ ನಟ, ನಿರ್ದೇಶಕ ನಲ್ಲ ಸುದೀಪ್ ಅವರಿಗೆ ತೆಲುಗಿನಲ್ಲಿ ಮತ್ತೊಂದು ಬಂಪರ್ ಛಾನ್ಸ್ ಸಿಕ್ಕಿದೆ. ತೆಲುಗು ನಟ ಅಲ್ಲು ಅರ್ಜುನ್ ಜೊತೆ ಅಭಿನಯಿಸುವ ಅವಕಾಶ ಸುದೀಪ್ ಪಾಲಿಗೆ ಪಂಚಾಮೃತದಂತೆ ಒಲಿದಿದೆ. ಇನ್ನೂ ಹೆಸರಿಡ ಈ ಚಿತ್ರದ ನಾಯಕಿ ಇಲಿಯಾನಾ ಡಿ"ಕ್ರೂಜ್.
ಒಂದು ವಾರದ ಹಿಂದೆಯೇ ಸುದೀಪ್ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಣ್ಣ ಸುಳಿವು ನೀಡಿದ್ದರು. "ತ್ರಿವಿಕ್ರಮ್ ಜೊತೆ ಮಾತುಕತೆ ನಡೆಯುತ್ತಿದೆ. ಅವರೊಂದಿಗೆ ಮಾತನಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಬೇರೆ ಭಾಷೆಯ ನಿರ್ದೇಶಕರು ನನ್ನನ್ನು ಸಂಪರ್ಕಿಸಿದ್ದು ಏನೋ ಒಂಥರಾ ಆನಂದವಾಗುತ್ತಿದೆ" ಎಂದಿದ್ದರು ಸುದೀಪ್.
ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸುದೀಪ್ ಅವರದು ನಿರ್ಣಾಯಕ ಪಾತ್ರ ಎನ್ನಲಾಗಿದೆ. ಈಗಾಗಲೆ ತೆಲುಗಿನ 'ರಕ್ತ ಚರಿತ್ರ' ಚಿತ್ರದಲ್ಲಿ ಸುದೀಪ್ ಅಭಿನಯಿಸಿದ್ದರು. ಮತ್ತೊಬ್ಬ ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈಗ ಮತ್ತೊಂದು ಅದ್ಭುತ ಛಾನ್ಸ್ ಸಿಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











