ಅದೃಷ್ಟ ಪರೀಕ್ಷೆಗೆ ತೆಲುಗು ನಟ ನವದೀಪ್ ಕನ್ನಡಕ್ಕೆ ಜಂಪ್
ಈಗಾಗಲೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಒಂದಷ್ಟು ಹೆಸರು ಮಾಡಿರುವ ನವದೀಪ್ ಕನ್ನಡಕ್ಕೆ ಜಂಪ್ ಆಗಿದ್ದಾರೆ. ತೆಲುಗಿನಲ್ಲಿ ಅವರು ಅಭಿನಯಿಸಿದ ಚಿತ್ರಗಳು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ತಮಿಳಿನಲ್ಲೂ ಒಂದಷ್ಟು ದಿನ ಸರ್ಕಸ್ ಮಾಡಿದರು. ಮಲಯಾಳಂ ಚಿತ್ರರಂಗದಲ್ಲೂ ಒಂದು ಕೈಯಾಡಿಸಿ ಬಂದಿದ್ದಾರೆ.
ಕಟ್ಟಕಡೆಗೆ ಕನ್ನಡದಲ್ಲೂ ಒಂದು ಕೈ ನೋಡೇ ಬಿಡೋಣ ಎಂದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರು ಅಭಿನಯಿಸುತ್ತಿರುವ ಚಿತ್ರದ ಹೆಸರು 'ದಿಲ್‌ಖುಷ್'. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಲವ್ ಗುರು' ಖ್ಯಾತಿಯ ಪ್ರಶಾಂತ್ ರಾಜ್.
ಈ ಚಿತ್ರಕ್ಕೆ ನಾಯಕಿ ಕಣ್ಣಲ್ಲೆ ಕೊಲ್ಲುವ ಮಂಜರಿ ಫದ್ನಿಸ್. ಇತ್ತೀಚೆಗೆ ಸೆಟ್ಟೇರಿದ ಈ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ. ಉತ್ತಮ ಚಿತ್ರ ಕೊಟ್ಟರೆ ಕನ್ನಡ ಪ್ರೇಕ್ಷಕರು ನವದೀಪ್‌ರನ್ನು ನಡುನೀರಲ್ಲಿ ಕೈಬಿಡಲ್ಲ. ಕಾದುನೋಡೋಣ ನವದೀಪ್ ಕನ್ನಡ ಇನ್ನಿಂಗ್ಸ್ ಏನಾಗುತ್ತದೋ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Tollywood star Navdeep debuts in Kannada film Dilkush. The film is being directed by Prashanth Raj and Navdeep would be pairing up with the gorgeous beauty Manjari Phadnis in the lead.


Click it and Unblock the Notifications











