ಶ್ರೀಯಾ ಕಾರಿನ ಗಾಜು ಪುಡಿಪುಡಿ ಮಾಡಿದ ಹುಡುಗರು
ತಮಿಳು ನಟಿ ಶ್ರೀಯಾ ಕಾರಿನ ಗಾಜು ಪುಡಿಪುಡಿಯಾಗಿದೆ. ಕಾರನ್ನು ಶ್ರೀಯಾ ಮರಕ್ಕೆ ಗುದ್ದಿಲ್ಲ. ಅಥವಾ ಕರೇನೂ ಅವರ ಮಾತು ಕೇಳದೇ ಬಿದ್ದಿಲ್ಲ. ತೆಲಂಗಾಣ ಚಳುವಳಿಗೆ ಸಂಬಂಧಪಟ್ಟ ಯುವಕರು ಶ್ರೀಯಾ ಕಾರನ್ನು ಈ ಸ್ಥಿತಿಗೆ ತಂದಿದ್ದಾರೆ. ರಾಜೇಂದ್ರ ನಗರದಲ್ಲಿ ಶ್ರೀಯಾ ಶೂಟಿಂಗ್ ನಲ್ಲಿದ್ದಾಗ ಈ ಘಟನೆ ನಡೆದಿದೆ.
ಅಲ್ಲರಿ ನರೇಶ್ ಹಾಗೂ ಶ್ರೀಯಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಆಗ ಬಂದ ಯುವಕರ ಗುಂಪು ತೆಲಂಗಾಣಕ್ಕೆ ಜೈ ಅನ್ನಿ ಅಂದಿದ್ದಾರಂತೆ. ನಿರ್ದೇಶಕರು ಹೇಳಿಕೊಟ್ಟ ಡೈಲಾಗ್ ಮಾತ್ರ ಹೇಳಿ ಅಭ್ಯಾಸವಿದ್ದ ಚಿತ್ರತಂಡ ಯಾವುದೇ ಉತ್ತರ ನೀಡಲಿಲ್ಲ. ಆಗ ಅಲ್ಲಿದ್ದ ಶ್ರೀಯಾ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ.
ಆಗ ಮೌನಕ್ಕೆ ಮೊರೆಹೋಗಿದ್ದ ಶ್ರೀಯಾ ಆಮೇಲೆ ಮಾತನಾಡಿ "ನಾನೊಬ್ಬ ಭಾರತೀಯಳು. ನಂಗೆ ಈ ದೇಶದಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ತಿರುಗಾಡುವ ಸ್ವಾತಂತ್ರ್ಯ ಇದೆ. ತೆಲಂಗಾಣವೋ ಆಂಧ್ರವೋ ನನಗದು ಬೇಕಾಗಿಲ್ಲ." ಎಂದಿದ್ದಾರೆ. ಶ್ರೀಯಾಳಷ್ಟು ಬುದ್ಧಿ ಇದ್ದಿದ್ದರೆ ಅವರು ಪುಂಡುಪೋಲರಿಗಳಾಗಿರುತ್ತಿರಲಿಲ್ಲ, ಇನ್ನೇನೋ ಆಗಿರುತ್ತಿದ್ದರು ಎಂಬುದನ್ನು ಶ್ರೀಯಾಗೆ ಹೇಳುವವರು ಯಾರು? (ಒನ್ ಇಂಡಿಯಾ ಕನ್ನಡ)


Click it and Unblock the Notifications











