ಕನ್ನಡ ಚಿತ್ರದಲ್ಲಿ ಮಿಂಚಲಿರುವ ಸಮೀರಾ ರೆಡ್ಡಿ
ಬಾಲಿವುಡ್ ನಲ್ಲೂ ಮಿಂಚುತ್ತಿರುವ ದಕ್ಷಿಣ ಭಾರತದ ಸುಂದರಿ 'ಸಮೀರಾ ರೆಡ್ಡಿ', ಇದೀಗ ಕನ್ನಡ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಸಮೀರಾ ಸಿಸಿಎಲ್ ಫೈನಲ್ ಪಂದ್ಯದ ವೇಳೆ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕೆ ಅರ್ಧ ಕನ್ನಡಿಗಳು ಎಂಬುದನ್ನೂ ಕೂಡ ಹೇಳಿದ್ದಾರೆ ಸಮೀರಾ.
ಆಕೆ ಹೇಳುವಂತೆ "ನನ್ನ ಅಮ್ಮ ಕರ್ನಾಟಕದವರು. ಹಾಗಾಗಿ ನಾನು ಅರ್ಧ ಕನ್ನಡಿಗಳು. ನನ್ನ ಅಮ್ಮ ಯಾವಾಗಲೂ ನೀನು ಕನ್ನಡ ಬಿಟ್ಟು ಉಳಿದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿದ್ದೀಯಾ, ಕನ್ನಡದಲ್ಲೂ ಅಭಿನಯಿಸು ಎಂದು ಹೇಳುತ್ತಿರುತ್ತಾರೆ. ಆದರೆ ಡೇಟ್ಸ್ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಕನ್ನಡ ಚಿತ್ರವೊಂದಕ್ಕೆ ಸಹಿ ಮಾಡಲು ನಿರ್ಧರಿಸಿದ್ದೇನೆ. ಅದು ನನ್ನ ಅಮ್ಮನ ಆಸೆ ಪೂರೈಸಲೂ ಕೂಡ" ಎಂದಿದ್ದಾರೆ.
ಅಲ್ಲಿಗೆ ಸಮೀರಾ ಕನ್ನಡದಲ್ಲಿ ನಟಿಸುವುದು ಖಾತ್ರಿಯಾಗಿದೆ. ಉಳಿದ ವಿವರಗಳನ್ನು ಆಕೆ ಬಾಯಿಬಿಟ್ಟಿಲ್ಲ, ಹಾಗಾಗಿ ಸದ್ಯಕ್ಕೆ ಇವಿಷ್ಟೇ ವಿವರ. ಸಮೀರಾ ಬ್ರಾಂಡ್ ಅಂಬಾಸಡರ್ ಆಗಿರುವ 'ಚೆನ್ನೈ ರೈನೋಸ್' ಟೀಮ್ ಸಿಸಿಎಲ್ ಗೆದ್ದುಕೊಂಡಿದೆ. ಹಾಗಾಗಿ ಸಮೀರಾಗೆ ಖುಷಿ. ಆಕೆ ಕನ್ನಡದಲ್ಲಿ ನಟಿಸುತ್ತಿದ್ದಾರೆ ಎಂಬ ಸಂಗತಿ ಅವರ ಅಭಿಮಾನಿ ಕನ್ನಡ ಪ್ರೇಕ್ಷಕರಿಗೆ ಸಂತೋಷದ ಸಮಾಚಾರ. (ಒನ್ ಇಂಡಿಯಾ ಕನ್ನಡ)


Click it and Unblock the Notifications











