ತೆಲುಗು ನಿರ್ದೇಶಕ ರಾಜಮೌಳಿ ಕರ್ನಾಟಕದವರು

ಸುದೀಪ್ ಅಭಿನಯದ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ ಚಿತ್ರ 'ವಿಷ್ಣುವರ್ಧನ'ವನ್ನು ನೋಡಿದ್ದಾರೆ ರಾಜಮೌಳಿ. "ಅದರಲ್ಲಿ ಶೇ. 80ರಷ್ಟು ಸಂಭಾಷಣೆಗಳು ಅರ್ಥವಾಗಿವೆ" ಎಂದಿದ್ದಾರೆ. ಆ ಚಿತ್ರದ ಬಗ್ಗೆ ಸುದೀಪ್ ಅಭಿನಯದ ಬಗ್ಗೆಯೂ ಮೆಚ್ಚಿ ಮಾತನಾಡಿದ್ದಾರೆ ತೆಲುಗಿನ ಈ ಖ್ಯಾತ ನಿರ್ದೇಶಕರು.
ಯಾವುದೇ ಚಿತ್ರ ಗೆಲ್ಲಲು ಸ್ಟಾರ್ ಗಳು ಅನಿವಾರ್ಯವಲ್ಲ. ಕನ್ನಡ ಚಿತ್ರ ಮುಂಗಾರು ಮಳೆಯಲ್ಲಿ ಯಾವ ಸ್ಟಾರ್ ಗಳಿದ್ದರು ಎಂದು ಪ್ರಶ್ನಿಸಿದ್ದಾರೆ. ಸುದೀಪ್ ಅವರಿಗೆ ತೆಲುಗು, ತಮಿಳು ಭಾಷೆ ಕೂಡ ಗೊತ್ತು. 'ಈಗ' ಚಿತ್ರದ ತಮಿಳು ಮತ್ತು ತೆಲುಗು ಆವೃತ್ತಿಗಳಿಗೆ ಸ್ವತಃ ಸುದೀಪ್ ಡಬ್ ಮಾಡಿದ್ದಾರೆ. ತೆಲುಗಿನಲ್ಲಿ ಒಂದು ಹಾಡನ್ನೂ ಹಾಡಿದ್ದಾರೆ ಎಂಬ ಗುಟ್ಟನ್ನು ಕನ್ನಡಿಗರಿಗೆ ಹೇಳಿದ್ದಾರೆ ರಾಜಮೌಳಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
Telugu director SS Rajamouli told that Sudeep is exact selection for his movie Eega. He is the star, who gave dubbing exact what he says.


Click it and Unblock the Notifications











