For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ನಾನು ನಟಿಸುತ್ತಿಲ್ಲ ಎಂದ ಸಮೀರಾ ರೆಡ್ಡಿ

  By Rajendra
  |

  ಅರ್ಧ ಕನ್ನಡತಿ ಇನ್ನರ್ಧ ತೆಲುಗು ಭಾಮಾ ಸಮೀರಾ ರೆಡ್ಡಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗೋತಾ ಹೊಡೆದಿದೆ. ತಾವು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ಸ್ವತಃ ಸಮೀರಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದು ಯಾರೋ ಹಾರಿಸಿದ ಗಾಳಿಪಟ ಎಂಬುದು ಆಕೆಯ ಉತ್ತರ.

  ಕನ್ನಡ ಚಿತ್ರವೊಂದರಲ್ಲಿ ನಟಿಸಲು ನನಗೆ ಆಫರ್ ಬಂದಿತ್ತು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಕನ್ನಡಕ್ಕೆ ಸಹಿ ಹಾಕಿದ್ದಾಗಿ ಪ್ರಕಟಿಸಿದ್ದಾರೆ. ಆದರೆ ನಾನು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದಿದ್ದಾರೆ.

  ಈ ಹಿಂದೊಮ್ಮೆ ಸಮೀರಾ ರೆಡ್ಡಿ ಕನ್ನಡದಲ್ಲಿ ಅಭಿನಯಿಸಬೇಕೆಂಬ ತಮ್ಮ ತೀರದ ಬಯಕೆಯನ್ನು ತೋಡಿಕೊಂಡಿದ್ದರು. ಆದರೆ ಇತ್ತೀಚೆಗೆ ಮಾಧವನ್ ಜೊತೆಗಿನ ತಮಿಳು ಚಿತ್ರ ಬಾಕ್ಸಾಫೀಸಲ್ಲಿ ಝಣ ಝಣ ಸದ್ದು ಮಾಡಿದೆ. ಇನ್ನು ಕನ್ನಡಕ್ಕೆ ಬರುವ ಮಾತೆಲ್ಲಿ ಎಂಬುದು ಆಕೆಯ ಮಾತಿನ ಸಾರಾಂಶ. (ಏಜೆನ್ಸೀಸ್)

  English summary
  Actress Sameera Reddy denies reports that she has signed a film in Kannada. I haven’t signed any Kannada film. I was misquoted. I was approached for a film, but nothing was signed said the actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X