ಪ್ರಿನ್ಸ್ ಮಹೇಶ್ ಜೊತೆ ತಮನ್ನಾ ಇಲ್ಲ; ಮತ್ತೆ ಕಾಜಲ್
ಮಹೇಶ್ ಬಾಬು, ಕಾಜಲ್ ಅಗರವಾಲ್ ಜೋಡಿ ಇತ್ತೀಚಿನ ಸೂಪರ್ ಹಿಟ್ ಚಿತ್ರ 'ಬಿಸಿನೆಸ್ ಮನ್ 'ನಲ್ಲಿ ಒಂದಾಗಿತ್ತು. ಇದೀಗ ಮತ್ತೊಂದು ಚಿತ್ರದಲ್ಲೂ ಅವರಿಬ್ಬರನ್ನೂ ಒಟ್ಟಿಗೆ ನೋಡುವ ಭಾಗ್ಯ ಪ್ರೇಕ್ಷಕರಿಗೆ ಲಭಿಸಲಿದೆ. ಸುಕುಮಾರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಮಹೇಶ್ ಜೊತೆ ಕಾಜಲ್ ನಟಿಸುವ ಸಂದರ್ಭ ಸೃಷ್ಟಿಯಾಗಿದೆ.
ಸಿಕ್ಕಿರುವ ಸುದ್ದಿಯ ಪ್ರಕಾರ, ಮಹೇಶ್ ಅಭಿನಯ, ಸುಕುಮಾರ್ ನಿರ್ದೇಶನದ ಚಿತ್ರಕ್ಕೆ ಈ ಮೊದಲು ಆಯ್ಕೆಯಾಗಿದ್ದು 'ತಮನ್ನಾ ಭಾಟಿಯಾ. ಆದರೆ ಆಕೆಯ ಡೇಟ್ಸ್ ಸಮಸ್ಯೆ ಎಷ್ಟಾಯಿತೆಂದರೆ ತೆಲುಗು ಪ್ರಿನ್ಸ್ ಜೊತೆ ನಟಿಸಲು ವೇಳೆಯೇ ಇಲ್ಲದಷ್ಟು. ಆಗ ಚಿತ್ರತಂಡ ಹೊಸ ಮುಖಗಳತ್ತ ಹೊರಳಿದೆಯಾದರೂ ಯಾರೂ ಸೆಲೆಕ್ಟ್ ಆಗಿಲ್ಲ. ಮತ್ತೆ ಕಾಜಲ್ ಗೇ ಮಣೆಹಾಕಲು ನಿರ್ಧರಿಸಿದ ಸುಕುಮಾರ್, ಆಕೆಗೆ ಬುಲಾವ್ ಕೊಟ್ಟಿದ್ದಾರೆ.
ಆದರೆ ಕಾಜಲ್ ಕೂಡ ಡೇಟ್ಸ್ ಇಟ್ಟುಕೊಂಡು ಕೆಲಸವಿಲ್ಲದೇ ಮನೆಯಲ್ಲೇನೂ ಕುಳಿತಿಲ್ಲ. ಆದರೂ ಹೊಂದಾಣಿಕೆ ಮಾಡಿಕೊಂಡು ನಟಿಸಲು ನಿರ್ಧರಿಸಿದ್ದಾರೆ. ಇನ್ನಷ್ಟೇ ಚಿತ್ರಕ್ಕೆ ಸಂಬಂಧಿಸಿದ ಫಾರ್ಮಾಲಿಟೀಸ್ ಗೆ ಒಪ್ಪಿ ಸಹಿ ಹಾಕಬೇಕಷ್ಟೇ. ಆದರೆ ಕಾಜಲ್ ಒಪ್ಪಿರುವುದರಿಂದ ಹೆಚ್ಚು-ಕಡಿಮೆ ಇದೇ ಜೋಡಿ ಎಂಬುದು ಖಾತ್ರಿಯಾದಂತಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











