Don't Miss!
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುನೀತ್, ಉಪೇಂದ್ರರಿಗೆ ದಮ್ಮು, ರಚ್ಚಗಳಿಂದ ಪೈಪೋಟಿ
ಕನ್ನಡ ಚಿತ್ರಗಳು ಮಾತ್ರ ಆ ದಿನ ಬಿಡುಗಡೆಯಾಗುತ್ತಿಲ್ಲ. ಕಾಲಿವುಡ್ ಬಹುನಿರೀಕ್ಷಿತ ಚಿತ್ರಗಳಾದ ಜೂನಿಯರ್ ಎನ್ ಟಿಆರ್ ಚಿತ್ರ 'ದಮ್ಮು' ಹಾಗೂ ಮಗಧೀರ ಸ್ಟಾರ್ ರಾಮ್ ಚರಣ್ ತೇಜಾರ ಚಿತ್ರ 'ರಚ್ಚ' ಕೂಡ ಅದೇ ದಿನ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ರಾಮ್ ಚರಣ್ ತೇಜಾ ಹಾಗೂ ಜೂ. ಎನ್ ಟಿಆರ್ ಈ ಇಬ್ಬರಿಗೂ ಗುರುಗಳಾದ ರಾಜಮೌಳಿಯ ಬಹುನಿರೀಕ್ಷಿತ ಚಿತ್ರ 'ಈಗ' ಚಿತ್ರವೂ ಅದೇ ದಿನ ಸ್ಪರ್ಧೆ ನೀಡುವ ಸಂಭವವಿದೆ.
ಕನ್ನಡ ಚಿತ್ರಗಳಿಗೆ ಕನ್ನಡಚಿತ್ರಗಳಿಗಿಂತಲೂ ಈ ತೆಲುಗು ಚಿತ್ರಗಳು ಪೈಪೋಟಿ ನೀಡಲಾರವು. ಆದರೂ ಸ್ವಲ್ಪಮಟ್ಟಿಗೆ ಹೊಡೆತ ತಪ್ಪಿದ್ದಲ್ಲ. ತೆಲುಗು ಚಿತ್ರಗಳು ಅದೇ ದಿನ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿವೆ. ಆದರೆ ಅಣ್ಣಾಬಾಂಡ್ ಆಂಧ್ರದಲ್ಲಿ ಬಿಡುಗಡೆ ಆಗುತ್ತಿಲ್ಲ. ಏನೇ ಆಗಲಿ ತೆಲುಗು ಚಿತ್ರಗಳು ಕನ್ನಡಚಿತ್ರಗಳನ್ನು ನುಂಗಿಹಾಕುವ ಕಾಲವಂತೂ ಸದ್ಯಕ್ಕೆ ನಿರ್ಮಾಣವಾಗಿಲ್ಲ.
ಪರೀಕ್ಷೆಗಳು ಮುಗಿದು ವಿದ್ಯಾರ್ಥಿಗಳು ಚಿತ್ರಮಂದಿರದತ್ತ ಬರುವ ಕಾಲ ಏಪ್ರಿಲ್ ಆಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳು ಸ್ಟಾರ್ ಚಿತ್ರಗಳಿಗೆ ಫೇವರೆಟ್. ಹಾಗಾಗಿಯೇ ಚಿಕ್ಕಪುಟ್ಟ ನಟರ ಚಿತ್ರಗಳು ಅದಕ್ಕೂ ಮೊದಲು ಅಥವಾ ನಂತರ ಬಿಡುಗಡೆ ಕಂಡು ಬಚಾವಾಗಲು ಯತ್ನಿಸುತ್ತವೆ. ಏಪ್ರಿಲ್ ನಲ್ಲಿ ಏನೇನಾಗುತ್ತದೆ ಎಂಬುದನ್ನು ಕಾದು ನೋಡೋಣ (ಒನ್ ಇಂಡಿಯಾ ಕನ್ನಡ)