'ಪೊಕಿರಿ' ಚಿತ್ರಕ್ಕೆ 20 ವರ್ಷ; ನಾಯಕನ ಪಾತ್ರಕ್ಕೆ ಮಹೇಶ್ ಬಾಬು ಮೊದಲ ಆಯ್ಕೆ ಆಗಿರಲಿಲ್ಲ

ಪೂರಿ ಜಗನ್ನಾಥ್ ನಿರ್ದೇಶನದ ಬ್ಲಾಕ್‌ಬಸ್ಟರ್ ಸಿನಿಮಾ 'ಪೊಕಿರಿ'. ಮಹೇಶ್ ಬಾಬು ಹೀರೊ ಆಗಿ ನಟಿಸಿದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ 2 ದಶಕಗಳ ಹಿಂದೆ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಕನ್ನಡ, ಹಿಂದಿ, ತಮಿಳು ಭಾಷೆಗಳಿಗೂ ಸಿನಿಮಾ ರೀಮೆಕ್ ಆಗಿ ಸಿನಿಮಾ ಗೆದ್ದಿತ್ತು.

ಮಹೇಶ್ ಬಾಬು ಸಿನಿಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸಿನಿಮಾ ಇದು. ಅಲ್ಲಿಯವರೆಗೆ ಎಲ್ಲಾ ತೆಲುಗು ಸಿನಿಮಾಗಳ ದಾಖಲೆ ಮುರಿದು 'ಪೊಕಿರಿ' ಸಿನಿಮಾ ಹೊಸ ಇತಿಹಾಸ ನಿರ್ಮಿಸಿತ್ತು. 75 ವರ್ಷಗಳ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಕಂಡು ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಆದರೆ ಇದು ಮಹೇಶ್‌ ಬಾಬುಗಾಗಿ ಪೂರಿ ಜಗನ್ನಾಥ್ ಬರೆದಿದ್ದ ಕಥೆ ಅಲ್ಲ. ಇಂತಾದೊಂದು ಅವಕಾಶ ಮಿಸ್ ಮಾಡಿಕೊಂಡ ನಟ ಯಾರು ಗೊತ್ತಾ?

20 years of Pokiri Mahesh Babu Wasn t Puri Jagannadh s First Choice for this Blockbuster

ಸ್ವತಃ ಪೂರಿ ಜಗನ್ನಾಥ್ ಹಾಗೂ ಮಹೇಶ್ ಬಾಬು ಸಹೋದರಿ ಸಂಗೀತಾ 'ಪೊಕಿರಿ' ಸಿನಿಮಾ ನಿರ್ಮಾಣ ಮಾಡಿದ್ದರು. ಅವತ್ತಿನ ಕಾಲಕ್ಕೆ 10-12 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ತೆಲುಗು ಚಿತ್ರರಂಗದಲ್ಲಿ ಎಂದೂ ಮರೆಯದ ಸಿನಿಮಾ ಎನಿಸಿಕೊಂಡಿತ್ತು. ಮಣಿಶರ್ಮ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಸಿಂಪಲ್ ಕಥೆಯನ್ನು ವಿಭಿನ್ನವಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು.

ಐಪಿಎಸ್ ಅಧಿಕಾರಿ ಕೃಷ್ಣ ಮನೋಹರ್ ತನ್ನ ಹೆಸರನ್ನು ಪಂಡು ಎಂದು ಬದಲಿಸಿಕೊಂಡು ಗ್ಯಾಂಗ್‌ಸ್ಟರ್‌ಗಳ ಜೊತೆ ಸೇರಿ ದುಷ್ಕರ್ಮಿಗಳನ್ನು ಮಟ್ಟಹಾಕುವ ಕಥೆ ಚಿತ್ರದಲ್ಲಿದೆ. ಕಥೆ ಸಿಂಪಲ್ ಅನ್ನಿಸಿದರೂ ನಿರ್ದೇಶಕ ಪೂರಿ ಜಗನ್ನಾಥ್ ಟ್ರೀಟ್‌ಮೆಂಟ್ ಹೊಸದಾಗಿತ್ತು. ಕೊನೆಯವರೆಗೂ ಪಂಡು ಹಾಗೂ ಕೃಷ್ಣ ಮನೋಹರ್ ಒಬ್ನೆ ಎನ್ನುವ ಸೀಕ್ರೆಟ್ ಬಿಟ್ಟುಕೊಡದೇ ಕಥೆ ಹೇಳಿದ್ದರು. ಇತ್ತ ಗ್ಯಾಂಗ್‌ಸ್ಟರ್‌ಗಳ ಜೊತೆ ಸೇರಿ ಕ್ರಿಮಿನಲ್ ರೀತಿ ಕಾಣುವ ಪಂಡು ನಾಯಕಿಯ ಕಣ್ಣಲ್ಲೂ ಪೊಕಿರಿ ಆಗಿರುತ್ತಾನೆ.

ತಮಿಳಿನಲ್ಲಿ ದಳಪತಿ ವಿಜಯ್ ಈ ಸಿನಿಮಾ ರೀಮೆಕ್ ಮಾಡಿ ಗೆದ್ದಿದ್ದರು. ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಸಲ್ಮಾನ್ ಖಾನ್ ಸಿನಿಮಾ ನೋಡಿ ನಟಿಸೋಕೆ ಮನಸ್ಸು ಮಾಡಿದ್ದರು. ಆಗ ನಿರ್ದೇಶನದ ಜವಾಬ್ದಾರಿ ಪ್ರಭುದೇವಾಗೆ ವಹಿಸಿದ್ದರು. ಅಲ್ಲಿ ಕೂಡ ಸಿನಿಮಾ ಹಿಟ್ ಆಗಿತ್ತು. ಆ ಬಳಿಕ ಕನ್ನಡದಲ್ಲಿ ದರ್ಶನ್ 'ಪೊರ್ಕಿ' ಆಗಿ ನಟಿಸಿದರು. ಎಂ. ಡಿ ಶ್ರೀಧರ್ ಚಿತ್ರವನ್ನು ಕಟ್ಟಿಕೊಟ್ಟಿದ್ದರು.

ಅಂದಹಾಗೆ 'ಪೊಕಿರಿ' ಚಿತ್ರದ ಕಥೆಯನ್ನು ಪವನ್ ಕಲ್ಯಾಣ್‌ ಅವರಿಗಾಗಿ ಪೂರಿ ಜಗನ್ನಾಥ್ ಬರೆದಿದ್ದರು.
'ಬದ್ರಿ' ಚಿತ್ರದಲ್ಲಿ ಪೂರಿಗೆ ಪವನ್ ನಿರ್ದೇಶಕನ ಅವಕಾಶ ಕೊಟ್ಟಿದ್ದರು. ಆ ಬಳಿಕ ಪವನ್‌ಗಾಗಿಯೇ ಕನ್ನಡದ 'ಅಪ್ಪು' ಕಥೆ ಬರೆದಿದ್ದರು. ಬಳಿಕ ಅದು 'ಈಡಿಯಟ್' ಹೆಸರಿನಲ್ಲಿ ತೆಲುಗಿಗೆ ರೀಮೆಕ್ ಆಗಿತ್ತು. ರವಿತೇಜ ಹೀರೊ ಆಗಿ ನಟಿಸಿದ್ದರು. ಬಳಿಕ 'ಅಮ್ಮ ನಾನ್ನ ಓ ತಮಿಳು ಅಮ್ಮಾಯಿ' ಚಿತ್ರದ ಕಥೆಯನ್ನು ಕೂಡ ಪವನ್ ಕಲ್ಯಾಣ್‌ಗಾಗಿಯೇ ಬರೆದಿದ್ದರು. ಕನ್ನಡದಲ್ಲಿ 'ಮೌರ್ಯ' ಹೆಸರಿನಲ್ಲಿ ರೀಮೆಕ್ ಆಗಿತ್ತು.

ಹೀಗೆ ಪವನ್ ಕಲ್ಯಾಣ್‌ಗಾಗಿ ಬರೆದಿ 3 ಕಥೆಗಳಲ್ಲಿ ಬೇರೆ ನಟರು ನಟಿಸಿ ಗೆದ್ದರು. ಪವನ್‌ಗೆ ಪೂರಿ ಕಥೆ ಕೂಡ ಹೇಳಿದ್ದರು. ಚೆನ್ನಾಗಿದೆ ಎಂದರೂ ಯಾಕೋ ಅವರು ನಟಿಸೋಕೆ ಸಾಧ್ಯವಾಗಲಿಲ್ಲ. ಹಾಗಾಗಿ 3 ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಪವನ್ ಮಿಸ್ ಮಾಡಿಕೊಂಡಿದ್ದರು.

ಸದ್ಯ 'ಪೊಕಿರಿ' ಸಿನಿಮಾ 20 ವರ್ಷ ಪೂರೈಸಿದೆ. ಛೇ, ಈ ಚಿತ್ರವನ್ನು ನಮ್ ಹೀರೊ ನಟಿಸಿದ್ದರೆ ಹೇಗಿರ್ತಿತ್ತು, ಮಿಸ್ ಮಾಡ್ಕೊಂಡ್ರು ಎಂದು ಪವನ್ ಕಲ್ಯಾಣ್ ಅಭಿಮಾನಿಗಳು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಒಂದ್ಕಾಲದಲ್ಲಿ ಹೀಗೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟ ಪೂರಿ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ. 'ಸ್ಲಂಡಾಗ್: 33 ಟೆಂಪಲ್ ರೋಡ್' ಎಂದು ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X