For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗಕ್ಕೆ ಪ್ಯಾರ್‌ಗೆ ಆಗ್ಬಿಟ್ಟ ಬೆಡಗಿ ಪಾರುಲ್

  By Rajendra
  |

  ಕನ್ನಡದಲ್ಲಿ "ಪ್ಯಾರ್‌ಗೆ ಆಗ್ಬಿಟ್ಟೈತೆ..." ಎಂದು ಕೋಮಲ್ ಜೊತೆ ಸೊಂಟ ಬಳುಕಿಸಿದ ಮುಂಬೈ ಬೆಡಗಿ ಪಾರುಲ್ ಯಾದವ್‌ಗೆ ತೆಲುಗಿನಲ್ಲಿ ಬಂಪರ್ ಅವಕಾಶ ಸಿಕ್ಕಿದೆ. ತೆಲುಗಿನಲ್ಲಿ ಮಾಸ್ ಮಹಾರಾಜ ಎಂದೇ ಬಿರುದಾಂಕಿತನಾಗಿರುವ ರವಿತೇಜ ಜೊತೆ ಅಭಿನಯಿಸುವ ಚಾನ್ಸ್ ಸಿಕ್ಕಿದೆ.

  ಈ ಹಿಂದೆ ಪಾರುಲ್ ಯಾದವ್ ಮಲಯಾಳಂನಲ್ಲಿ ಅಭಿನಯಿಸಿದ್ದರಾದರೂ ಆಕೆಗೆ ಪೂರ್ಣಪ್ರಮಾಣದಲ್ಲಿ ಹೆಸರು ತಂದುಕೊಟ್ಟಂತಹ ಚಿತ್ರ ನಿಸ್ಸಂದೇಹವಾಗಿ ಕನ್ನಡದ 'ಗೋವಿಂದಾಯ ನಮಃ'. ಅಭಿನಯದಲ್ಲಿ ಇನ್ನೂ ಅಷ್ಟಾಗಿ ಪಳಗಿಲ್ಲದಿದ್ದರೂ ನೋಟದಲ್ಲೇ ಕೊಲ್ಲುವ ಆಕರ್ಷಣೆ ಪಾರುಲ್ ಅವರಿಗಿದೆ.

  'ಗೋವಿಂದಾಯ ನಮಃ' ಚಿತ್ರದಲ್ಲಿ ಮುಮ್ತಾಜ್ ಆಗಿ ಗಮನಾರ್ಹ ಪಾತ್ರವನ್ನು ಪಾರುಲ್ ಪೋಷಿಸಿದ್ದರು. ಏತನ್ಮಧ್ಯೆ ಪಾರುಲ್‌ಗೆ ಕನ್ನಡದಲ್ಲೂ ಮತ್ತಷ್ಟು ಅವಕಾಶಗಳು ಬರುತ್ತಿವೆ. ಕಿಚ್ಚ ಸುದೀಪ್ ಹಾಗೂ 'ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ಜೊತೆ ಅಭಿನಯಿಸುವ ಚಾನ್ಸ್ ಸಿಕ್ಕಿರುವ ಬಗ್ಗೆಯೂ ಸುದ್ದಿ ಇದೆ. (ಒನ್‌ಇಂಡಿಯಾ ಕನ್ನಡ)

  English summary
  Kannada film Govindayana Namaha fame actress Parul Yadav forays into Telugu films. She is going to play the female lead role opposite Raviteja in Sir Osthara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X