ಕನ್ನಡದ ಡೆಡ್ಲಿ ಸೋಮ ತೆಲುಗಿನಲ್ಲಿ ನಂದೀಶ್ವರುಡು

ತನ್ನ ನಿರ್ದೆಶನದ ಚಿತ್ರ ತೆಲುಗಿಗೆ ರೀಮೇಕ್ ಆಗಿರುವ ಖುಷಿಯನ್ನೂ ಅನುಭವಿಸುವ ಮೂಡ್ ನಲ್ಲಿಲ್ಲ ರವಿ ಶ್ರೀವತ್ಸ. ಕಾರಣ ತೆಲುಗು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಅವರಿಗೆ ಕಥೆಯ ಕ್ರೆಡಿಟ್ ಕೊಟ್ಟಿಲ್ಲ. ಹಾಗಾಗಿ ನಿರ್ಮಾಪಕ ಮತ್ತು ನಿರ್ದೇಶಕರ ಸಂಘಕ್ಕೆ ತಮಗಾದ ಅನ್ಯಾಯದ ಬಗ್ಗೆ ದೂರು ಕೊಟ್ಟಿದ್ದಾರೆ ರವಿ.
ಆದರೆ ಡೆಡ್ಲಿ ಸೋಮ ನಿರ್ಮಾಪಕ ಮಂಜು ಹೇಳುವುದೇ ಬೇರೆ. "ಮೊದಲಾದ ಮಾತುಕತೆಯಂತೆ ರೀಮೇಕ್ ಹಕ್ಕಿನ ಹಣ ಅವರಿಗೆ ದೊರೆತಿಲ್ಲ. ಆದರೆ ಅವರ ಹೆಸರನ್ನು ಯಾಕೆ ತೆಲುಗು ಚಿತ್ರತಂಡ ಹಾಕಿಲ್ಲ ಎಂಬುದು ತಮಗೆ ಗೊತ್ತಿಲ್ಲ. ದೂರು ಕೊಡುವ ಮೊದಲೇ ತಮಗೆ ತಿಳಿಸಿದ್ದರೆ ತೆಲುಗು ತಂಡದ ಜೊತೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು". ರವಿಯ ಕಡೆಯಿಂದ ಇದಕ್ಕೆ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Deadly Soma director Ravi Srivatsa Complaints that Telugu movie Nandishwarudu is Remake of kannada ovie Deadly Soma. But that team didn't give any credit to him for his story.


Click it and Unblock the Notifications











