For Quick Alerts
  ALLOW NOTIFICATIONS  
  For Daily Alerts

  ಮತ್ತೆ ತೆರೆಯ ಮೇಲೆ ರಾಘವೇಂದ್ರ ಸ್ವಾಮಿ ಮಹಾತ್ಮೆ

  |
  ರಾಘವೇಂದ್ರ ಸ್ವಾಮಿ ಭಕ್ತರೊಬ್ಬರು ತೆರೆಯ ಮೇಲೆ ಸಾಹಸ ಮಾಡಲು ಹೊರಟಿದ್ದಾರೆ. ಬಾಲ್ಯದಿಂದಲೂ ರಾಗವೇಂದ್ರ ಸ್ವಾಮಿಯ ಭಕ್ತರಾದ ರವೀಂದ್ರ ಗೋಪಾಲ, ರಾಘವೇಂದ್ರರ ಕುರಿತಾಗಿ ಚಿತ್ರವೊಂದನ್ನು ನಿರ್ಮಿಸಿ ತೆಲುಗಿನಲ್ಲಿ ತಾವೇ ನಾಯಕರಾಗಿಯೂ ನಟಿಸಲಿದ್ದಾರೆ. ಚಿತ್ರದ ಹೆಸರು "ರಾಘವೇಂದ್ರ ಮಹಿಮೆ".

  ರಾಘವೇಂದ್ರರ ಕುರಿತಾಗಿ ಈಗಾಗಲೇ ಸಾಕಷ್ಟು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಡಾ. ರಾಜ್ ಕುಮಾರ್, ರಜನಿಕಾಂತ್ ಮುಂತಾದವರು ಈಗಾಗಲೇ ತೆರೆಯ ಮೇಲೆ ರಾಘವಂದ್ರ ಸ್ವಾಮಿಗಳಾಗಿ ಮಿಂಚಿದ್ದಾರೆ. ಇದೀಗ ರವೀಂದ್ರ ಗೋಪಾಲ್ ಸರದಿ. ಮತ್ತೇನಕ್ಕೆ ರಾಘವೇಂದ್ರಸ್ವಾಮಿಗಳನ್ನೇ ತೆರೆಯ ಮೇಲೆ ತರುವ ಪ್ರಯತ್ನ?

  ಅದಕ್ಕೂ ಗೋಪಾಲ್ ಅವರಲ್ಲಿ ಉತ್ತರವಿದೆ. ಈ ಮೊದಲು ಬಂದ ರಾಘವೇಂದ್ರರ ಚಿತ್ರಗಳಲ್ಲಿ ಸನ್ಯಾಸದ ಬಗ್ಗೆ ಹೇಳಲಾಗಿದೆ. ಆದರೆ ಈ ಚಿತ್ರದಲ್ಲಿ ಅವರು ಸನ್ಯಾಸ ಸ್ವೀಕರಿಸುವದಕ್ಕಿಂತ ಮೊದಲಿನ ಸಂಸಾರದ ಬಗ್ಗೆ ಹೇಳಲಾಗುತ್ತದೆ" ಎಂದಿದ್ದಾರೆ. ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ.

  ಕನ್ನಡದಲ್ಲಿ ಧರ್ಮ ನಾಯಕರಾಗಲಿದ್ದಾರೆ. ನಾಯಕಿಯಾಗಿ ಅಶ್ವಿನಿ ಜೊತೆಗಿರುತ್ತಾರೆ. ವಿನೋದ್ ಆಳ್ವ, ಶ್ರೀಧರ್, ರೇಖಾ ಮುಂತಾದವರೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಮೋದ್ ಕುಮಾರ್ ಸಂಗೀತವಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಮಂತ್ರಾಲಯದಲ್ಲಿ ಚಿತ್ರೀಕರಣವಾಲಿದೆ. (ಒನ್ ಇಂಡಿಯಾ ಕನ್ನಡ)

  English summary
  Movie Raghavendra Mahatme is again coming to the screen. This time Ravindra Gopal Produces the movie. He is actor for telugu also. In Kannada, Dharma will be the Hero and Ashvini will be the Heroine. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X