ನಮ್ಮನ್ನಗಲಿದ ನಕ್ಷತ್ರ 'ಸೌಂದರ್ಯ' ನೆನಪಿಗೆ ಸೊಸೆ

ಸೌಂದರ್ಯ ನೆನಪಿನಲ್ಲಿ ಅವರದೇ ಹೆಸರಿನಲ್ಲಿ 'ಡಾಕ್ಯುಮೆಂಟರಿ' ನಿರ್ಮಿಸುವ ಯೋಚನೆಯೂ ರಘು ಅವರಿಗಿದೆಯಂತೆ. ಈಗಾಗಲೇ ಸೌಂದರ್ಯಾ ನಟಿಸಿರುವ ಎಲ್ಲಾ ಚಿತ್ರಗಳ ವೀಡಿಯೋ ತುಣುಕುಗಳನ್ನು ಸಂಗ್ರಹಿಸಿರುವ ರಘು, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸೌಂದರ್ಯ ಮಾಡಿರುವ ಸೇವೆಯನ್ನು ಪ್ರಮುಖವಾಗಿ ಅದರಲ್ಲಿ ತೋರಿಸಿಲಿದ್ದಾರಂತೆ. ಡಿವಿಡಿ ರೂಪದಲ್ಲಿ ಇದು ಹೊರಬರಲಿದೆ.
ಅಗಲಿದ ಪತ್ನಿಯ ನೆನಪಿನಲ್ಲಿ ಬರೋಬ್ಬರಿ ಆರು ವರ್ಷ ಕಳೆದ ನಂತರ ಸುಮಾರು ಒಂದೂವರೆ ವರ್ಷದ ಹಿಂದೆ ಡಾ. ಅರ್ಪಿತಾ ಎಂಬವರನ್ನು ಮದುವೆಯಾಗಿರುವ ರಘು, ಸಾಫ್ಟ್‌ವೇರ್ ಇಂಜಿನಿಯರ್. ಇದೀಗ ಸೌಂದರ್ಯಾರನ್ನು ಸೊಸೆ ಧಾರಾವಾಹಿಯ ಮೂಲಕ ಮತ್ತೆ ಅವರ ಅಭಿಮಾನಿಗಳ ಮುಂದೆ ತರಲಿದ್ದಾರೆ. ಮಾರ್ಚ್ ಐದರಿಂದ ರಾತ್ರಿ 8.30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿದೆ ಸೊಸೆ ಧಾರಾವಾಹಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
Late Actress Soundarya's Husband GS Raghu produsing 'Sose' Serial. It will telecasts in Zee Kannada Serial, from March 5, 2012. Raghu told that it is for the memory of Soundarya.


Click it and Unblock the Notifications











