ಜೂ.ಎನ್‌ಟಿಆರ್ 31ನೇ ಚಿತ್ರದ ಫಸ್ಟ್‌ಲುಕ್‌ಗೆ ಬಳಸಿದ್ದು 32 ಕ್ಯಾಮರಾ!
ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತದೆ ಎನ್ನುವ ಸುದ್ದಿ ಈಗ ಅಧಿಕೃತವಾಗಿದೆ. ಜೂನಿಯರ್ ಎನ್‌ಟಿಆರ್ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಫಸ್ಟ್ ಲುಕ್‌ನಲ್ಲಿ ರೋಷ ತುಂಬಿದ ಜೂನಿಯರ್ ಎನ್‌ಟಿಆರ್ ಮುಖ ಕಾಣುತ್ತದೆ. ಈ ಒಂದು ಪೋಸ್ಟರ್ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಸಿನಿಮಾ ಕಥೆ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರದ ಬಗ್ಗೆ ಈ ಪೋಸ್ಟರ್ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿಸಿದೆ. ಜೂನಿಯರ್ ಎನ್‌ಟಿಆರ್ ಲುಕ್ ಕೂಡ ವಿಭಿನ್ನವಾಗಿದೆ.
ಈ ಫಸ್ಟ್ ಲುಕ್ ಪೋಸ್ಟರ್ ಸಾಕಷ್ಟು ವೈರಲ್ ಆಗಿದೆ. ಜೂನಿಯರ್ ಎನ್‌ಟಿಆರ್ ಅರ್ಧ ಮುಖ ಇರುವ ಈ ಪೋಸ್ಟರ್ ಶೂಟಿಂಗ್ ಹಿಂದೆ ಒಂದು ರೋಚಕ ಕಥೆ ಇದೆ. ಇದೊಂದು ಪೋಸ್ಟರ್‌ಗಾಗಿ ಸಿನಿಮಾ ತಂಡ 32 ಕ್ಯಾಮರಾಗಳನ್ನು ಬಳಕೆ ಮಾಡಿದೆಯಂತೆ. ಸದ್ಯ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಮುಂದೆ ಇದೇ ಲುಕ್‌ನಲ್ಲಿ ಜೂನಿಯರ್ ಎನ್‌ಟಿಆರ್ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಲಿದೆ.

ಪ್ರಶಾಂತ್ ನೀಲ್ 'ಎನ್‌ಟಿಆರ್ 31' ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು, ಜೂ ಎನ್‌ಟಿಆರ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಜೂ ಎನ್‌ಟಿಆರ್ ಕಾಂಬಿನೇಷನ್‌ನ ಹೊಸ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಇದು ಜೂ ಎನ್‌ಟಿಆರ್ ನಟನೆಯ 31ನೇ ಸಿನಿಮಾ.
''ರಕ್ತದಲ್ಲಿ ತೋಯ್ದ ನೆಲವಷ್ಟೆ ನೆನಪಿನಲ್ಲಿಟ್ಟುಕೊಳ್ಳಲು ಯೋಗ್ಯವಾಗಿರುತ್ತದೆ. ಅವನ ನೆಲ, ಅವನ ಗಡಿ ರಕ್ತದಲ್ಲಿ ತೊಯ್ದಿದೆ. ಆದರೆ ಅವನ ರಕ್ತವಲ್ಲ.'' ಎಂದು ಬರೆದಿದ್ದಾರೆ ಪ್ರಶಾಂತ್ ನೀಲ್. ಪವರ್‌ಫುಲ್ ಪದಗಳ ಮೂಲಕ ಪವರ್‌ಫುಲ್ ಕಥೆಯೊಂದನ್ನು ಕಟ್ಟಿಕೊಡುವ ಮುನ್ಸೂಚನೆ ನೀಡಿದ್ದಾರೆ ಪ್ರಶಾಂತ್ ನೀಲ್.


Click it and Unblock the Notifications











