twitter
    For Quick Alerts
    ALLOW NOTIFICATIONS  
    For Daily Alerts

    ಆಂಧ್ರ ಪ್ರದೇಶದ 400 ಥಿಯೇಟರ್‌ಗಳು ಕ್ಲೋಸ್! ಕನ್ನಡ ಸಿನಿಮಾಗಳ ಮೇಲೂ ಪರಿಣಾಮ?

    By Bhagya.s
    |

    ಸದ್ಯ ಆಂಧ್ರ ಪ್ರದೇಶದಲ್ಲಿ ಬಿಸಿ ಬಿಸಿ ಸುದ್ದಿಯೊಂದು ಓಡಾಡುತ್ತಿದೆ. ಅಲ್ಲಿನ ವರದಿಯ ಪ್ರಕಾರ ಆಂಧ್ರದಾದ್ಯಂತ ಇರುವ ಥಿಯೇಟರ್‌ಗಳಲ್ಲಿ ಬಹುತೇಕ ಥಿಯೇಟರುಗಳು ಮುಚ್ಚುತ್ತಿವೆ. ಹೆಚ್ಚಿನ ಟರ್ನ್ ಓವರ್ ಇಲ್ಲ ಎಂದು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಗೆ ಬೀಗ ಹಾಕಲಾಗುತ್ತಿದೆ.

    ಆಂಧ್ರದಲ್ಲಿ ಈ ರೀತಿ ಬೆಳವಣಿಗೆಗಳು ನಡೆದರೆ ಅದು ಅಕ್ಕ-ಪಕ್ಕದ ರಾಜ್ಯಗಳಿಗೂ ತಗುಲುತ್ತದೆ. ಕನ್ನಡದ ಸಿನಿಮಾಗಳು ಆಂಧ್ರದಲ್ಲೂ ತೆರೆಕಂಡು ಉತ್ತಮ ಗಳಿಕೆ ಕಾಣುತ್ತವೆ. ಅದರಲ್ಲೂ ಪ್ಯಾನ್ ಇಂಡಿಯಾದ ಮಟ್ಟದ ಕನ್ನಡದ ಸಿನಿಮಾಗಳಿಗೆ ಉತ್ತಮ ಬೇಡಿಕೆ ಇದ್ದೇ ಇದೆ. ಕನ್ನಡ, ತಮಿಳು, ಮಲೆಯಾಳಂಗೂ ಕೂಡ ಇದು ಎಫೆಕ್ಟ್ ಆಗುತ್ತದೆ.

    ಆದರೀಗ ಇದ್ದಕ್ಕಿದ್ದ ಹಾಗೆ ಸರಿ ಸುಮಾರು 400 ಥಿಯೇಟರ್‌ಗಳು ಬಾಗಿಲು ಮುಚ್ಚುತ್ತಿವೆಯಂತೆ. ಈ ಬಗ್ಗೆ ಆಂಧ್ರದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ ಅಷ್ಟಕ್ಕೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಥಿಯೇಟರ್ ಬಾಗಿಲು ಹಾಕಲು ಕಾರಣವೇನು? ಮತ್ತೆ ಮುಚ್ಚಿದ ಬಾಗಿಲು ತೆರೆಯುವುದಿಲ್ಲ ಎನ್ನುವುದನ್ನು ಮುಂದೆ ಓದಿ.

     400 ಚಿತ್ರಮಂದಿರಗಳಿಗೆ ಬೀಗ!

    400 ಚಿತ್ರಮಂದಿರಗಳಿಗೆ ಬೀಗ!

    ಇನ್ನು ವರದಿಯ ಪ್ರಕಾರ ಆಂಧ್ರ ಪ್ರದೇಶದಾದ್ಯಂತ 400 ಚಿತ್ರಮಂದಿರಗಳ ಬಾಗಿಲು ಮುಚ್ಚಲು ನಿರ್ಧಾರ ಮಾಡಲಾಗಿದೆ. ಹಾಗಂತ ಈ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚುವುದಿಲ್ಲ, ತಾತ್ಕಾಲಿಕವಾಗಿ ಸಿನಿಮಾ ಮಂದಿರವನ್ನು ಮುಚ್ಚಲು ಪ್ರದರ್ಶಕರ ವಲಯದಿಂದ ನಿರ್ಧಾರ ಮಾಡಲಾಗಿದೆ. ಉತ್ತಮ ಮಟ್ಟದಲ್ಲಿ ಟರ್ನ್ ಓವರ್ ಆಗದೇ ಇರುವ ಕಾರಣಕ್ಕೆ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

    1 ಶೋಗೆ 5000 ಲಾಸ್!

    1 ಶೋಗೆ 5000 ಲಾಸ್!

    ಹೀಗೆ ಏಕಾಏಕಿ ಎಷ್ಟು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳ ಬಾಗಿಲನ್ನು ಮುಚ್ಚುವುದಕ್ಕೆ ಕಾರಣ ಸಿನಿಮಾ ಮಂದಿರಕ್ಕೆ ಜನ ಬಾರದೆ ಇರುವುದು. ಹೌದು ಇತ್ತೀಚಿಗೆ ರಿಲೀಸ್ ಆದ ತೆಲುಗಿನ ಯಾವ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರದ ಕಡೆಗೆ ಕರೆತರಲು ವಿಫಲವಾಗುತ್ತಿವೆ. ಹಾಗಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದು ತೀರಾ ವಿರಳವಾಗಿದೆ. ಶೋಗೆ ಕೇವಲ ಹತ್ತು ಜನ ಅಥವಾ ಹತ್ತು ಜನಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಜನರು ಬರ್ತಾರಂತೆ. ಇದು ಪ್ರದರ್ಶಕರಿಗೆ ದೊಡ್ಡ ಮಟ್ಟದ ಹೊಡೆತವೇ.

    ಪ್ರೇಕ್ಷಕರಿಲ್ಲದೇ ಶೋ ನಡೆಸುವುದು ನಷ್ಟ!

    ಪ್ರೇಕ್ಷಕರಿಲ್ಲದೇ ಶೋ ನಡೆಸುವುದು ನಷ್ಟ!

    ಇನ್ನು ಮತ್ತೊಂದು ಕಾರಣ ಎಂದರೆ ಥಿಯೇಟರ್ ಮೆಂಟೇನೆನ್ಸ್. ಚಿತ್ರ ಮಂದಿರಗಳ ಬಾಗಿಲು ತೆರೆದರೆ ಒಂದಷ್ಟು ಮೈಂಟೆನೆನ್ಸ್ ಖಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಹಾಗಾಗಿ ಜನರೇ ಇಲ್ಲ ಎಂದ ಮೇಲೆ ಈ ರೀತಿಯಾಗಿ ಸಿನಿಮಾ ಪ್ರದರ್ಶನ ಮಾಡುವುದರಿಂದ ಪ್ರದರ್ಶಕರಿಗೆ ಹೆಚ್ಚಿನ ನಷ್ಟವಾಗುತ್ತದೆ. ಅಲ್ಲಿನ ವರದಿಯ ಪ್ರಕಾರ ಎಸಿ ಚಿತ್ರಮಂದಿರಗಳಲ್ಲಿ ಒಂದು ಶೋಗೆ ಕನಿಷ್ಟ 5000 ರೂ ಖರ್ಚು ಬರುತ್ತದೆ. ಅಂತೆಯೇ ಏಸಿ ಇಲ್ಲದ ಚಿತ್ರಮಂದಿರಗಳಲ್ಲಿ ಕನಿಷ್ಠ 2000 ರೂ. ಖರ್ಚು ಬರುತ್ತದೆ. ಪ್ರೇಕ್ಷಕರು ಅತಿ ಕಡಿಮೆ ಸಂಖ್ಯೆಯಲ್ಲಿ ಬರುವ ಕಾರಣಕ್ಕೆ

    ದೊಡ್ಡ ಚಿತ್ರದಿಂದ ರೀ ಓಪನ್!

    ದೊಡ್ಡ ಚಿತ್ರದಿಂದ ರೀ ಓಪನ್!

    ಇನ್ನು ಈ ರೀತಿಯಾಗಿ ಚಿತ್ರಮಂದಿರಗಳ ಬಾಗಿಲು ಹಾಕುವ ನಿರ್ಧಾರ ತಾತ್ಕಾಲಿಕ. ಈ ಬೀಗ ಹಾಕಿಕೊಳ್ಳುತ್ತಿರುವ 400 ಥಿಯೇಟಗಳು ಸಂಪೂರ್ಣವಾಗಿ ಮುಚ್ಚುವುದಿಲ್ಲ. ದೊಡ್ಡ ಸಿನಿಮಾ ರಿಲೀಸ್ ಜೊತೆಗೆ ಮತ್ತೆ ಚಿತ್ರಮಂದಿರಗಳ ಬಾಗಿಲನ್ನು ತೆರೆಯಲಾಗುತ್ತದೆ. ಇನ್ನು ಅಲ್ಲಿನ ಮುಖ್ಯಮಂತ್ರಿ ಜಗನ್ ಸರ್ಕಾರ ಬಂದ ಮೇಲೆ ಚಿತ್ರರಂಗ ಮತ್ತು ಚಿತ್ರಮಂದಿರಗಳ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಹೊಸ ನಿಯಮಗಳನ್ನು ತರಲು ಪ್ರಯತ್ನ ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಸಿನಿಮಾ ಟಿಕೆಟ್ ಆನ್‌ಲೈನ್‌ನಲ್ಲಿ ಕಡ್ಡಾಯ ಮಾಡಲಾಗಿದೆ, ಆದರೆ ಇದಕ್ಕೆ ಹೈ ಕೋರ್ಟ್ ಸ್ಟೇ ತಂದಿದೆ. ಹಾಗಾಗಿ ಆನ್‌ಲೈನ್‌ ಬುಕಿಂಗ್‌ಗೂ ಕೂಡ ಹೊಡೆತ ಬಿದ್ದಂತಾಗಿದೆ.

    English summary
    400 Theatres Closed In Andhra Pradesh Because Of No Audience, Know More
    Saturday, July 16, 2022, 14:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X