twitter
    For Quick Alerts
    ALLOW NOTIFICATIONS  
    For Daily Alerts

    ಇತಿಹಾಸ ಬರೆದ 'ಬಾಹುಬಲಿ'ಗೆ 7 ವರ್ಷ: ಹಲವು ಸ್ವಾರಸ್ಯಕರ ಸಂಗತಿ ಇಲ್ಲಿವೆ!

    |

    ಬಾಹುಬಲಿ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಇತಿಹಾಸ ಹುಟ್ಟುಹಾಕಿದ ಸಿನಿಮಾ. ಭಾರತೀಯ ಚಿತ್ರರಂಗದ ತಾಕತ್ತು ತೋರಿಸಿದ ಸಿನಿಮಾ ಬಾಹುಬಲಿ ಎಂದರೆ ತಪ್ಪಾಗಲಾರದು. ಬಾಹುಬಲಿ ಒಂದೇ ಒಂದು ಸಿನಿಮಾ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು. ರಾಜಮೌಳಿ ಸಾರಥ್ಯದಲ್ಲಿ ಬಂದ ಬಾಹುಬಲಿ ರಿಲೀಸ್ ಅಗಿ ಇಂದಿಗೆ (ಜುಲೈ 10) ಏಳು ವರ್ಷ ಆಯ್ತು.

    ಬಾಹುಬಲಿ ಸಿನಿಮಾ ತೆರೆಕಂಡು ಏಳು ವರ್ಷ ಆಗಿದೆ. ಈ ಸಂಭ್ರಮ ಚಿತ್ರತಂಡದಲ್ಲಿ ಮನೆಮಾಡಿದೆ. ಇನ್ನು ಸಿನಿಮಾವನ್ನು ಪ್ರೇಕ್ಷಕರು ಕೂಡಾ ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳು ಮೂಲಕ ಬಾಹುಬಲಿ ಯಶಸ್ಸನ್ನು ಮೆಲುಕು ಹಾಕುತ್ತಿದ್ದಾರೆ.

    'ಬಾಹುಬಲಿ' ತಂಡ ಸೇರಿಕೊಂಡ ನಟಿ ನಯನತಾರಾ'ಬಾಹುಬಲಿ' ತಂಡ ಸೇರಿಕೊಂಡ ನಟಿ ನಯನತಾರಾ

    ಬಾಹುಬಲಿ ಸಿನಿಮಾದ ಮೂಲಕ ನಟ ಪ್ರಭಾಸ್ ಭಾರತೀಯ ಚಿತ್ರರಂಗದ ನಂಬರ್ ಒನ್ ನಟ ಎನಿಸಿಕೊಂಡಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಾಹುಬಲಿ ಸಿನಿಮಾದ ಕೆಲವೊಂದು ಕುತೂಹಲಕಾರಿ ಮಾಹಿತಿ ಇಲ್ಲಿದೆ ಮುಂದೆ ಓದಿ...

    ಬಾಕ್ಸಾಫಿಸ್ ದಾಖಲೆ!

    ಬಾಕ್ಸಾಫಿಸ್ ದಾಖಲೆ!

    ಬಾಹುಬಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯಿತು. ಏಳು ವರ್ಷಗಳ ಹಿಂದೆಯೇ, ಹಾಕಿದ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚಿನ ಲಾಭವನ್ನು ಗಳಿಸಿಕೊಂಡಿತು. ಈ ಚಿತ್ರಕ್ಕೆ ಹಾಕಿರುವ ಬಜೆಟ್ 180 ಕೋಟಿ ರೂ. ಆದರೆ ಬಂದಿದ್ದು 600 ರಿಂದ 650 ಕೋಟಿ ರೂ. ಎಂದು ಅಧಿಕೃತವಾಗಿ ವರದಿಯಗಿದೆ. ಹೀಗೆ ಮೂರು ಪಟ್ಟು ಹೆಚ್ಚಿನ ಲಾಭಗಳಿಸಿ, ಬಾಕ್ಸಾಫಸ್‌ನಲ್ಲಿ ಹೊಸ ಇತಿಹಾಸ ಬರೆಯಿತು. ಮೂರು ಪಟ್ಟು ಲಾಭದಾಯಕವಾದ ಕಲೆಕ್ಷನ್ ಗಳಿಸಿಕೊಂಡ ಹೆಗ್ಗಳಿಕೆಗೂ ಅಂದು ಪಾತ್ರವಾಗಿತ್ತು.

    ಕಿಲಿಕಿ ಭಾಷೆ ಸೃಷ್ಟಿ!

    ಕಿಲಿಕಿ ಭಾಷೆ ಸೃಷ್ಟಿ!

    ಬಾಹುಬಲಿಯ ಚಿತ್ರದ ಮತ್ತೊಂದು ಮುಖ್ಯ ಆಕರ್ಷಣೆ ಎಂದರೆ ಕಾಲಕೇಯ. ಕಾಲಕೇಯ ಬಳಗಕ್ಕಾಗಿ ಚಿತ್ರತಂಡ ಹೊಸ ಭಾಷೆಯನ್ನೇ ಹುಟ್ಟು ಹಾಕಿತು. ಇದಕ್ಕಾಗಿ ಕಾಲ್ಪನಿಕ ಭಾಷೆಯನ್ನು ರಚಿಸಲಾತು. ಇದು ಭಾರತೀಯ ಮೊದಲ ಕಾಲ್ಪನಿಕ ಭಾಷೆಯಾಗಿ ಹೊರ ಹೊಮ್ಮಿದೆ. ಕಾಲ್ಪನಿಕ ಭಾಷೆಯಲ್ಲಿ 748 ಪದಗಳು ಮತ್ತು 40 ವ್ಯಾಕರಣ ನಿಯಮಗಳು ಇದ್ದು, ಇದನ್ನು "ಕಿಲಿಕಿ" ಎಂದು ಕರೆಯಲಾಯಿತು. ಮತ್ತು ಬಾಹುಬಲಿ ಎಲ್ಲಾ ಭಾಷೆಯ ಅವತರಣಿಕೆಗಳಲ್ಲೂ ಒಂದೆ ರೀತಿಯಾಗಿದೆ.

    ಶ್ರೀದೇವಿ ಬಾಹುಬಲಿ ತಿರಸ್ಕರಿಸಲು ಕಾರಣ!

    ಶ್ರೀದೇವಿ ಬಾಹುಬಲಿ ತಿರಸ್ಕರಿಸಲು ಕಾರಣ!

    ಬಾಹುಬಲಿಯಲ್ಲಿ ರಾಮ್ಯ ಕೃಷ್ಣನ್‌ ಮಾಡಿರುವ ಶಿವಗಾಮಿ ಪಾತ್ರ ಬಹಳ ಮುಖ್ಯವಾದದ್ದು. ಇವರಿಗಿಂದ ಮೊದಲು ಶಿವಗಾಮಿ ಪಾತ್ರಕ್ಕೆ ನಟಿ ಶ್ರೀದೇವಿ ಅವರನ್ನು ಸಂಪರ್ಕಿಸಲಾಯಿತು ಎನ್ನುವುದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ಶ್ರೀದೇವಿ ಈ ಚಿತ್ರವನ್ನು ತಿರಸ್ಕರಿಸಲು ಮುಖ್ಯ ಕಾರಣ ಸಂಭಾವನೆಯಂತೆ. ಶಿವಗಾಮಿ ಪಾತ್ರಕ್ಕೆ 6 ಕೋಟಿ ರೂ. ಸಂಭಾವನೆ ಕೇಳಿದ್ದರು ಎನ್ನಲಾಗಿದೆ. ಇದನ್ನು ಕೇಳಿದ ಚಿತ್ರತಂಡಕ್ಕೆ ಶಾಕ್ ಆಗಿದ್ದಮತೆ.

    ಬಾಹುಬಲಿಗಾಗಿ ಪ್ರಭಾಸ್ ಕಸರತ್ತು!

    ಬಾಹುಬಲಿಗಾಗಿ ಪ್ರಭಾಸ್ ಕಸರತ್ತು!

    ಬಾಹುಬಲಿ ಸರಣಿಗಾಗಿ ಪ್ರಭಾಸ್ ಐದು ವರ್ಷಗಳನ್ನು ಮೀಸಲಿಟ್ಟಿದ್ದರು. ಬಾಹುಬಲಿ ಮೊದಲ ಭಾಗದ ಚಿತ್ರೀಕರಣ ಆರಂಭಿಸಿದ ನಂತರ, ಅವರು ಐದು ವರ್ಷಗಳ ಕಾಲ ಮತ್ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಉಳಿದ ಪ್ರಮುಖ ತಾರಾಗಳದಲ್ಲಿದ್ದ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ ಮತ್ತು ಅನುಷ್ಕಾ ಶೆಟ್ಟಿ ಸೇರಿದಂತೆ ಹಲವರು ಬಾಹುಬಲಿ ನಂತರ ನಾನಾ ಸಿನಿಮಾಗಳಲ್ಲಿ ನಟಿಸಿದರು. ಆದರೆ ಪ್ರಭಾಸ್ ಮಾತ್ರ ಸಿನಿಮಾ ಸಂಪೂರ್ಣವಾಗಿ ಮುಗಿದು, ರಿಲೀಸ್ ಆಗುವ ತನಕ ಯಾವ ಚಿತ್ರವನ್ನು ಕೈಗೆತ್ತಿ ಕೊಂಡಿಲಿಲ್ಲ.

    ಪ್ಯಾನ್ ಇಂಡಿಯಾ ಚಿತ್ರಕ್ಕೆ ಬಾಹುಬಲಿ ಬುನಾದಿ!

    ಪ್ಯಾನ್ ಇಂಡಿಯಾ ಚಿತ್ರಕ್ಕೆ ಬಾಹುಬಲಿ ಬುನಾದಿ!

    ಇನ್ನು ಅಂದು ಬಾಹುಬಲಿ ಸಿನಿಮಾ ತೆಲುಗಿನಲ್ಲಿ ಪ್ರಮುಖವಾಗಿ ನಿರ್ಮಾಣವಾದರೂ, ಹಿಂದಿ ತಮಿಳು ಮತ್ತು ಮಲಯಾಳಂಗೆ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು ಬಾಹುಬಲಿ. ಬಳಿಕ ಬಂದ ಬಾಹುಬಲಿ 2 ಸಿನಿಮಾ ಕೂಡ ಬಹು ಭಾಷೆಗಳಲ್ಲಿ ತೆರೆಗೆ ಬಂದು, ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಸಾವಿರ ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರಗಳ ಬಳಿಕ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚಾಯ್ತು, ನಂತರ ಕನ್ನಡದಲ್ಲಿ ಬಂದ ಕೆಜಿಎಫ್ ಕೂಡ ಇದೇ ದಾರಿಯನ್ನು ಹಿಡಿಯಿತು.

    English summary
    7 Years For Baahubali The Beginning, Know The Intresting Facts bout The Movie, Know More,
    Monday, July 11, 2022, 9:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X