ರಶ್ಮಿಕಾಗೆ ಮ್ಯಾನೇಜರ್‌ನಿಂದ 80 ಲಕ್ಷ ರೂ. ದೋಖಾ? ಪ್ರೆಸ್‌ನೋಟ್ ರಿಲೀಸ್ ಮಾಡಿದ ಕಿರಿಕ್ ಬೆಡಗಿ

ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ರಶ್ಮಿಕಾ ಮಂದಣ್ಣ ಸಂಚಲನ ಸೃಷ್ಟಿಸಿದ್ದಾರೆ. ಸದ್ಯ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗದಷ್ಟು ದೂರಕ್ಕೆ ಕಿರಿಕ್ ಬೆಡಗಿ ಹೋಗಿಬಿಟ್ಟಿದ್ದಾರೆ. ಇದೆಲ್ಲದರ ನಡುವೆ ರಶ್ಮಿಕಾಗೆ ಸ್ವತಃ ಮ್ಯಾನೇಜರ್ 80 ಲಕ್ಷ ರೂ. ಮೋಸ ಮಾಡಿದ್ದಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಆಕೆಯೇ ಈಗ ಪ್ರತಿಕ್ರಿಯೆ ನೀಡಿದ್ದಾರೆ.

ಸೆಲೆಬ್ರೆಟಿಗಳು ತಮ್ಮ ವ್ಯಾಪಾರ ವ್ಯವಹಾರ, ಕಾಲ್‌ಶೀಟ್, ಸಂಭಾವನೆ ವಿಚಾರಗಳನ್ನು ನೋಡಿಕೊಳ್ಳಲು ಮ್ಯಾನೇಜರ್‌ಗಳನ್ನು ನೇಮಿಸಿಕೊಂಡಿರುತ್ತಾರೆ. ಅದರಲ್ಲೂ ಕರ್ನಾಟಕ ಬಿಟ್ಟು ಹೈದರಾಬಾದ್, ಮುಂಬೈ, ಚೆನ್ನೈ ಅಂತೆಲ್ಲಾ ಸುತ್ತಾಡುತ್ತಿರುವ ರಶ್ಮಿಕಾ ಜೊತೆ ಕೆಲ ವರ್ಷಗಳಿಂದ ನಂಬಿಕಸ್ಥ ಮ್ಯಾನೇಜರ್ ಒಬ್ಬರು ಇದ್ದರು. ಇದೀಗ ಆತ ಕೆಲಸ ಬಿಟ್ಟು ಹೊರಟ್ಟಿದ್ದಾನೆ. ಇದನ್ನು ಸ್ವತಃ ಅವರಿಬ್ಬರು ಖಚಿತಪಡಿಸಿದ್ದಾರೆ. ಆತ ರಶ್ಮಿಕಾಗೆ 80 ಲಕ್ಷ ರೂ. ಮೋಸ ಮಾಡಿದ್ದಾನೆ ಎನ್ನುವ ವದಂತಿ ಹರಡಿತ್ತು. ಇದೇ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದಿದ್ದಾರೆ ಎನ್ನಲಾಗಿತ್ತು.

80 lakhs cheat rumors, Official note from Rashmika and her Manager

ಸದ್ಯ ಹರಿದಾಡುತ್ತಿರುವ ವದಂತಿ ಬಗ್ಗೆ ಇಬ್ಬರು ಜಂಟಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. 80 ಲಕ್ಷ ರೂ. ಮೋಸದ ಬಗ್ಗೆ ಗುಸುಗುಸು ಹೆಚ್ಚಾದಂತೆ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನೇರವಾಗಿ ಆ ವಿಚಾರವನ್ನು ಪ್ರಸ್ತಾಪಿಸಿಲ್ಲ. ಆದರೆ ನಾವಿಬ್ಬರು ದೂರವಾಗುತ್ತಿರುವ ವಿಚಾರದಲ್ಲಿ ಕೇಳಿಬರುತ್ತಿರುವ ವದಂತಿಗಳೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ಜೋರಾಗಿ ಸದ್ದು ಮಾಡ್ತಿದೆ.

ಯಾವುದೇ ಕಲಹ ಇಲ್ಲ

ಪತ್ರಿಕಾ ಪ್ರಕಟನೆಯಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ "ನಮ್ಮ ನಡುವೆ ಯಾವುದೇ ಕಲಹ ಇಲ್ಲ. ನಾವು ಸ್ನೇಹಪೂರ್ವಕವಾಗಿಯೇ ಯಾರ ದಾರಿಯಲ್ಲಿ ಅವರು ನಡೆಯಬೇಕು ಎಂದು ನಿರ್ಧರಿಸಿದ್ದೇವೆ. ಇಬ್ಬರು ದೂರಾ ಆಗುತ್ತಿರುವುದರ ಹಿನ್ನಲೆಯಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ಆದರೆ ಇದರಲ್ಲಿ ಸತ್ಯ ಇಲ್ಲ. ಇನ್ನು ಮುಂದೆ ನಾವು ಸ್ವತಂತ್ರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ತಾವು ಸ್ವತಂತ್ರವಾಗಿ ಕೆಲಸ ಮಾಡಲು ನಿರ್ಣಯಿಸಿರುವುದರ ಹಿಂದೆ ಯಾವುದೇ ಕಲಹ ಇಲ್ಲ."

ಎಲ್ಲಾ ವದಂತಿಗೂ ತೆರೆ

"ಆರೋಗ್ಯಕರ ವಾತಾವರಣದಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದ್ದೆವು. ಆದರೆ ಈಗ ಪರಸ್ಪರ ಒಪ್ಪಿ ಬೇರೆ ಬೇರೆಯಾಗಿ ಕರಿಯರ್ ಮುಂದುವರೆಸಲು ನಿರ್ಧರಿಸಿದ್ದೇವೆ. ಇಬ್ಬರು ವೃತ್ತಿಪರರಾಗಿದ್ದರಿಂದ ಒಟ್ಟಿಗೆ ಸೇರಿ ಕೆಲಸ ಮಾಡಿದೆವು. ಈಗ ಅಷ್ಟೇ ಸಮಚಿತ್ತರಾಗಿ ಬೇರೆ ಬೇರೆಯಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ದೇವೆ. ಎಲ್ಲಾ ವಂದತಿಗೆ ಇದು ತೆರೆ ಎಳೆಯುತ್ತದೆ ಎಂದುಕೊಂಡಿದ್ದೇವೆ" ಎಂದು ರಶ್ಮಿಕಾ ಹಾಗೂ ಮ್ಯಾನೇಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

80 lakhs cheat rumors, Official note from Rashmika and her Manager

'ಅನಿಮಲ್' ಶೂಟಿಂಗ್ ಕಂಪ್ಲೀಟ್

ರಶ್ಮಿಕಾ ನಟನೆಯ 'ಅನಿಮಲ್' ಹಾಗೂ 'ಪುಷ್ಪ'- 2 ಚಿತ್ರಗಳು ಭಾರೀ ನಿರೀಕ್ಷೆ ಹುಟ್ಟಾಕ್ಕಿವೆ. ಇತ್ತೀಚೆಗೆ 'ಅನಿಮಲ್' ಚಿತ್ರದ ಪ್ರೀ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. 'ಅರ್ಜುನ್ ರೆಡ್ಡಿ' ಖ್ಯಾತಿಯ ಸಂದೀಪ್ ರೆಡ್ಡಿವಂಗಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಗುಡ್‌ಬೈ' ಹಾಗೂ 'ಮಿಷನ್ ಮಜ್ನು' ನಂತರ ರಶ್ಮಿಕಾ ನಟಿಸುತ್ತಿರುವ 3ನೇ ಬಾಲಿವುಡ್ ಸಿನಿಮಾ ಇದು. ಇತ್ತೀಚೆಗೆ ಕೊಡಗಿನ ಕುವರಿ ಈ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದರು.

ಮತ್ತೆರಡು ಸಿನಿಮಾಗಳಲ್ಲಿ ರಶ್ಮಿಕಾ

'ಅನಿಮಲ್' ಮತ್ತು 'ಪುಷ್ಪ'- 2 ಬಿಟ್ಟರೆ 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾ ಕೂಡ ರಶ್ಮಿಕಾ ಕೈಯಲ್ಲಿದೆ. ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗುತ್ತಿದೆ. ಸಮಂತಾ ಮಾಡಬೇಕಿದ್ದ ಈ ಸಿನಿಮಾ ಕಾರಣಾಂತರಗಳಿಂದ ರೋಶ್ ಪಾಲಾಗಿತ್ತು. ಇನ್ನು ನಿತಿನ್ ಜೋಡಿಯಾಗಿ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಭೀಷ್ಮ' ಸಿನಿಮಾ ಬಂದಿತ್ತು. ಅದೇ ತಂಡ ಹೊಸ ಚಿತ್ರಕ್ಕೆ ಕೈ ಜೋಡಿಸಿದೆ.

More from Filmibeat

English summary
80 lakhs cheat rumors, Official note from Rashmika and her Manager. they both clarify on rumors. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X