ಹಳೆ ಹುಲಿಗಳ ಸಮಾಗಮ ;ಚಿರಂಜೀವಿ, ಸುಮಲತಾ ಅಂಬರೀಶ್- ಹೇಗಿತ್ತು 80ರ ದಶಕದ ಸೂಪರ್ ಸ್ಟಾರ್‌ಗಳ ಸ್ನೇಹ ಸಮ್ಮಿಲನ..?

ಖ್ಯಾತಿಯ ತುತ್ತ ತುದಿಯನ್ನೇರಿದವರು.. ಹಣ -ಅಂತಸ್ತು ಮತ್ತು ಕೀರ್ತಿಯನ್ನು ಸಂಪಾದಿಸಿದವರು.. ಯಾರೇ ಆದರೂ ಕೂಡ ಆಗಾಗ ರಿಫ್ರೆಶ್ ಆಗುತ್ತಿರಬೇಕು. ಬಹುತೇಕ ನಾಯಕ-ನಾಯಕಿಯರು ಈ ಕೆಲಸವನ್ನು ತುಂಬಾ ನಿಯತ್ತಾಗಿ ಮಾಡುತ್ತಿರುತ್ತಾರೆ. ಮನೆಯವರ ಜೊತೆ ಆಗಾಗ ಪ್ರವಾಸಕ್ಕೆ ತೆರಳುತ್ತಾರೆ. ಜಾಲಿ ಮೂಡಿನಲ್ಲಿ ಕಾಲ ಕಳೆಯುತ್ತಾರೆ. ಇದರ ನಡುವೆ ಇನ್ನೂ ಕೆಲವರು ದೂರದಲ್ಲಿರುವ ತಮ್ಮ ಸ್ನೇಹಿತರೊಂದಿಗೆ ತಮ್ಮ ಬಂಧವನ್ನು ಗಟ್ಟಿಯಾಗಿರಿಸುವ ಪ್ರಯತ್ನ ಮಾಡುತ್ತಾರೆ.

ಸ್ನೇಹವನ್ನು ಗೌರವಿಸುತ್ತಾ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಹೀಗೆ ನೆನಪಿನ ದೋಣಿಯನ್ನೇರುವ ಸ್ಟಾರ್‌ಗಳಲ್ಲಿ 80ರ ದಶಕದ ಈ ತಾರೆಯರು ಸದಾ ಮುಂದು. ಇದಕ್ಕೆ ಇವರು ಇಟ್ಟಿರುವ ಹೆಸರೇ 80's Stars Reunion.

80s Royalty Roars Back Chiranjeevi Jackie Shroff amp amp Stars Go Wild at Epic Reunion Bash

ಹೌದು, 80's Stars Reunion. 80ರ ದಶಕದ ಸ್ಟಾರ್‌ಗಳ ಸ್ನೇಹ ಸಮ್ಮಿಲನ. ಪ್ರತಿ ವರ್ಷ ತಪ್ಪದೇ ನಡೆಯುವ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ನಡೆದಿರಲಿಲ್ಲ. ಆದರೆ.. ಈ ಬಾರಿ ನಡೆದಿದೆ. ಹಲವರನ್ನು ಒಂದೇ ಸೂರಿನಡಿ ಒಗ್ಗೂಡಿಸಿದೆ.

ಚೆನ್ನೈನಲ್ಲಿ ತಮಿಳು ನಟ ರಾಜಕುಮಾರ್ ಸೇತುಪತಿ ಮತ್ತು ಅವರ ಪತ್ನಿ ಶ್ರೀಪ್ರಿಯಾ ಅವರ ನೇತೃತ್ವದಲ್ಲಿ ನಡೆದ ಈ ಬಾರಿಯ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ 31ಕ್ಕೂ ಅಧಿಕ ಸಿನಿಮಾ ತಾರೆಯರು ಭಾಗವಹಿಸಿದ್ದರು. ಹಳೆಯ ದಿನಗಳನ್ನು ನೆನೆಯುತ್ತಾ ಖುಷಿಯಾಗಿ ಕಾಲ ಕಳೆದರು.

ಮೆಗಾ ಸ್ಟಾರ್ ಚಿರಂಜೀವಿ.. ವಿಕ್ಟರಿ ವೆಂಕಟೇಶ್.. ಪವಿತ್ರಾ ಅವರ ವಿಚಾರಕ್ಕೆ ಸುದ್ದಿಯಾಗುವ ನರೇಶ್.. ಸ್ವಾತಿ ಮುತ್ತು ಮೀನಾ.. ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್.. ಶರತ್ ಕುಮಾರ್.. ನಾದಿಯಾ.. ರಾಧಾ.. ಸುಹಾಸಿನಿ.. ರಮ್ಯಾಕೃಷ್ಣ.. ಜಯಸುಧಾ.. ಖುಷ್ಭೂ.. ಶೋಭನಾ.. ಮೇನಕಾ.. ಲಿಸ್ಸಿ.. ಸುರೇಶ್.. ಜಯರಾಮ್.. ಅಶ್ವತಿ ಜಯರಾಮ್.. ಸರಿತಾ.. ಭಾನುಚಂದರ್.. ಲತಾ.. ಸ್ವಪ್ನಾ.. ಪ್ರಭು ರೆಹಮಾನ್.. ಮತ್ತು ಸುಮಲತಾ ಅಂಬರೀಶ್ ಹಲವು ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡರು. ಜೊತೆಯಾಗಿ ಫೋಟೊಗಳಿಗೆ ಫೋಸ್ ನೀಡಿದರು. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು. ಈ ಬಾರಿ ಈ ಸ್ಟಾರ್‌ಗಳ ಉಡುಗೆ ಚಿರತೆ ಥೀಮ್‌ನಲ್ಲಿ ಇದ್ದಿದ್ದು ವಿಶೇ‍ಷ.

ಅಂದ್ಹಾಗೇ 2009ರಲ್ಲಿ ಮಲಯಾಳಂ ನಟಿ ಲಿಸ್ಸಿ ಮತ್ತು ಬಹುಭಾಷಾ ಚೆಲುವೆ ಸುಹಾಸಿನಿ
ಈ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಅಲ್ಲಿಂದ ಪ್ರತಿ ವರ್ಷ ಈ ಸ್ನೇಹ-ಸಮ್ಮಿಲನ ಕಾರ್ಯಕ್ರಮ ನಡೆಯುತ್ತ ಬಂದಿದೆ. 2019ರಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಈ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿಯೇ ಅದ್ಧೂರಿಯಾಗಿ ಹಮ್ಮಿಕೊಂಡಿದ್ದರು. ಇದೇ ಸಮಯದಲ್ಲಿ ಅಗಲಿದ ಸ್ನೇಹಿತ ಕನ್ನಡದ ರೆಬಲ್ ಸ್ಟಾರ್ ಅಂಬರೀಷ್ ಅವರನ್ನು ಕೂಡ ಭಾಗಿಯಾಗಿದ್ದ 38 ಸ್ಟಾರ್‌ಗಳು ನೆನಪು ಮಾಡಿಕೊಂಡಿದ್ದರು. ಅಂಬಿ ಜೊತೆಗಿನ ಒಡನಾಟ ನೆನೆದು ಭಾವುಕರಾಗಿದ್ದರು.

80s Royalty Roars Back Chiranjeevi Jackie Shroff amp amp Stars Go Wild at Epic Reunion Bash

2022ರಲ್ಲಿ ಬಾಲಿವುಡ್‌ನ ಅಂದಕಾಲತ್ತಿಲ್‌ನ ಸ್ಟಾರ್ ಜಾಕಿ ಶ್ರಾಫ್ ಆತಿಥ್ಯ ವಹಿಸಿಕೊಂಡಿದ್ದರು. ತಮ್ಮ ಮನೆಯಲ್ಲಿ ಈ ರೀ ಯೂನಿಯನ್ ಪಾರ್ಟಿ ಹಮ್ಮಿಕೊಂಡಿದ್ದರು. 2023ರಲ್ಲಿ ಈ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿತ್ತು. ಇನ್ನು 2024ರಲ್ಲಿ ಚೆನ್ನೈನಲ್ಲಿ ಪ್ರವಾಹ ಬಂದ ಕಾರಣ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.

ಈಗ ಎರಡು ವರ್ಷಗಳ ನಂತರ ಈ ರೀಯೂನಿಯನ್ ಕಾರ್ಯಕ್ರಮ ಮತ್ತೆ ನಡೆದಿದೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖುಷಿಯಿಂದ ಬರೆದುಕೊಂಡಿದ್ದು 80ರ ದಶಕದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಹ ನಟ ನಟಿಯರನ್ನು ಮತ್ತೆ ಭೇಟಿಯಾಗಿ ಖುಷಿಯಾಯ್ತು ಎಂದು ಹೇಳಿದ್ದಾರೆ. ಇದು ನಮ್ಮ ಬಾಂಧವ್ಯ ಮತ್ತು ನಮ್ಮ ಸ್ನೇಹಕ್ಕೆ ಕೈಗನ್ನಡಿ ಎಂದು ಹೇಳಿದ್ದಾರೆ.

More from Filmibeat

English summary
Go back to the '80s! The annual star reunion was an epic night of tiger prints and throwback fashion, featuring Chiranjeevi, Jackie Shroff, and all your favorite legends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X