RRR ನೋಡಲು ಬಂದೂಕು ತಂದ ಅಭಿಮಾನಿ: ಚಿತ್ರಮಂದಿರದಲ್ಲಿ ಕೋಲಾಹಲ

'RRR' ಸಿನಿಮಾವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಚಿತ್ರಮಂದಿರದ ಮುಂದೆ ಕಟೌಟ್‌ಗಳಿಗೆ ಹಾಲಿನಾಭಿಷೇಕ, ಚಿತ್ರಮಂದಿರಗಳ ಒಳಗೆ ಹೂ ಚೆಲ್ಲುವುದು, ನಾಣ್ಯ ಚೆಲ್ಲುವುದು, ಡ್ಯಾನ್ಸ್ ಮಾಡುವುದು ನಡೆದೇ ಇದೆ.

Recommended Video

RRR | ಅಭಿಮಾನಿ ಕೈಯಲ್ಲಿ ಗನ್ ನೋಡಿ ಪ್ರೇಕ್ಷಕರು ಫುಲ್ ಗಾಬರಿ | Ram Charan | Jr NTR

ಆದರೆ ಕೆಲವು RRR ಅಭಿಮಾನಿಗಳು, ಕೆಲವೆಡೆ ಅತಿರೇಕದ ಅಭಿಮಾನ ಪ್ರದರ್ಶಿಸಿ, ಚಿತ್ರಮಂದಿರದಲ್ಲಿರುವ ಇತರೆ ವೀಕ್ಷಕರಿಗೆ ಸಮಸ್ಯೆ ನೀಡುವ ಜೊತೆಗೆ ತಾವೂ ಸಮಸ್ಯೆಗೆ ಸಿಲುಕಿದ್ದಾರೆ.

ಆಂಧ್ರದ ಚಿತ್ರಮಂದಿರ ಒಂದಕ್ಕೆ 'RRR' ಅಭಿಮಾನಿಯೊಬ್ಬ ಬಂದೂಕು ತಂದು ಸಿನಿಮಾ ಪ್ರದರ್ಶನ ಕಾಣಬೇಕಾದರೆ ಪರದೆಯ ಮುಂಭಾಗ ಹೋಗಿ ಗನ್ ತೋರಿಸಿದ್ದಾನೆ. ಇದರಿಂದ ಚಿತ್ರಮಂದಿರದಲ್ಲಿ ಕೆಲ ಕಾಲ ಕೋಲಾಹಲ ಎದ್ದಿದೆ.

A Fan Brings Gun To RRR Movie Show In Andhra Pradesh

ಆಂಧ್ರ ಪ್ರದೇಶದ ಈಸ್ಟ್ ಗೋಧಾವರಿ ಜಿಲ್ಲೆಯ ಪೀಟಾಪುರಂನ ಅನ್ನಪೂರ್ಣ ಚಿತ್ರಮಂದಿರಕ್ಕೆ ವ್ಯಕ್ತಿಯೊಬ್ಬ ಗನ್ ತಂದಿದ್ದ. ಚಿತ್ರಮಂದಿರದ ಒಳಗೆ ಹೋಗುವ ಮುನ್ನ ಹೊರಗೆ ಮಾಧ್ಯಮದವರ ಮುಂದೆ ಗನ್ ತೆಗೆದು ಫೋಸ್ ಕೊಟ್ಟು ಅದನ್ನು ಟಿವಿಗಳಲ್ಲಿ ಪ್ರದರ್ಶಿಸುವಂತೆ ಹೇಳಿದ್ದ.

ಬಳಿಕ ಚಿತ್ರಮಂದಿರದ ಒಳಗೆ ಹೋಗಿ ಸಿನಿಮಾ ಪ್ರದರ್ಶನ ಆಗುವ ವೇಳೆ ಪರದೆಯ ಮುಂದೆ ಹೋಗಿ ನಿಂತು ಕೈಯಲ್ಲಿ ಗನ್ ಹಿಡಿದು ಫೋಸು ನೀಡಿದ್ದ. ಬಾಲಾಜಿ ಎಂಬ ಈ ಹುಚ್ಚು ಅಭಿಮಾನಿ ಗನ್ ಹಿಡಿದು ನಿಂತಿರುವ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಟಿವಿಗಳಲ್ಲಿ ಸುದ್ದಿಗಳು ಬರಲಾರಂಭಿಸಿದವು.

ಸುದ್ದಿ ತಿಳಿದ ಕೂಡಲೇ ಚಿತ್ರಮಂದಿರಕ್ಕೆ ಭೇಟಿ ನೀಡಿದ ಪೀತಾಪುರಂ ಪೊಲೀಸರು, ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ''ಪೀತಾಪುರಂನಲ್ಲಿ ಸ್ಟೀಲ್ ಅಂಗಡಿ ಹೊಂದಿರುವ ಬಾಲಾಜಿ ಎಂಬಾತ ಫ್ರೀಕ್ ಬಂದೂಕನ್ನು ಚಿತ್ರಮಂದಿರಕ್ಕೆ ತಂದಿದ್ದ. ಇದರಿಂದ ಚಿತ್ರಮಂದಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಹಾಗಾಗಿ ಆತನನ್ನು ವಶಕ್ಕೆ ಪಡೆದಿದ್ದೇವೆ'' ಎಂದಿದ್ದಾರೆ.

''ಬಾಲಾಜಿ ತಂದಿದ್ದಿದ್ದು ಫ್ರೀಕ್ ಪಿಸ್ತೂಲಾಗಿದೆ. ಅದರಲ್ಲಿ ಸಣ್ಣ ಗಾತ್ರದ ಬುಲೆಟ್‌ಗಳನ್ನಷ್ಟೆ ಬಳಸಬಹುದು ಅವನ್ನು ಪಕ್ಷಿಗಳನ್ನು ಹೊಡೆಯಲು ಬಳಸುತ್ತಾರೆ. ಹತ್ತಿರದಿಂದ ಶೂಟ್ ಮಾಡಿದರೆ ಮಾತ್ರವೇ ಅದು ಅಪಾಯಕಾರಿಯಾಗಬಲ್ಲದು. ಜಾತ್ರೆಗಳಲ್ಲಿ ಬಲೂನ್ ಹೊಡೆಯಲು ಸಹ ಅದನ್ನು ಬಳಸುತ್ತಾರೆ. ಒಮ್ಮೆಗೆ ಒಂದು ಬುಲೆಟ್ ಮಾತ್ರವೇ ಬಳಸಬಹುದು'' ಎಂದು ಬಾಲಾಜಿ ತಂದಿದ್ದ ಬಂದೂಕಿನ ಬಗ್ಗೆ ಮಾಹಿತಿ ನೀಡಿದ್ದಾರೆ.

''ವ್ಯಕ್ತಿಯ ಬಳಿ ಬಂದೂಕು ವಶಪಡಿಸಿಕೊಂಡಿದ್ದೇವೆ. ಬಂದೂಕಿನ ಪಾಕೆಟ್‌ನಲ್ಲಿ ಕೆಲವು ಸಣ್ಣ ಗುಂಡುಗಳು ಇದ್ದವು. ಅವನ್ನು ನಾವು ವಶಪಡಿಸಿಕೊಂಡಿದ್ದೇವೆ. ಬಂದೂಕು ಹಾಗೂ ಗುಂಡುಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಆ ಬಂದೂಕು ಎಷ್ಟರ ಮಟ್ಟಿಗೆ ವ್ಯಕ್ತಿಗಳಿಗೆ ಹಾನಿ ಮಾಡಲು ಸಾಧ್ಯ. ಈ ಮೊದಲು ಬಂದೂಕನ್ನು ಉಪಯೋಗಿಸಲಾಗಿದೆಯೆ? ಎಂಬಿತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳಲಿದ್ದೇವೆ'' ಎಂದಿದ್ದಾರೆ.

''ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಹಾಗೂ ಬಂದೂಕು ತೋರಿಸಿ ಜನರಲ್ಲಿ ಭೀತಿ ಮೂಡಿಸಿದ ಹಾಗೂ ಶಾಂತಿ ಕದಡುವ ಯತ್ನದ ಅಡಿಯಲ್ಲಿ ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ'' ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

More from Filmibeat

English summary
A fan brings a gun to theater while showing RRR movie. He showed the gun while the movie screening. Police arrested the man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X