RRR ಸಿನಿಮಾ ವೀಕ್ಷಣೆ ವೇಳೆ ಚಿತ್ರಮಂದಿರದಲ್ಲೇ ಅಭಿಮಾನಿ ಸಾವು
ಕಳೆದ ಮೂರು ವರ್ಷಗಳಿಂದ ಭಾರಿ ಹೈಪ್ ಹುಟ್ಟಿಸಿದ್ದ ತೆಲುಗು ಸಿನಿಮಾ 'RRR' ಇಂದು ಬಿಡುಗಡೆ ಆಗಿದೆ. ಜೂ ಎನ್‌ಟಿಆರ್-ರಾಮ್ ಚರಣ್ ನಟನೆಯ ಈ ಸಿನಿಮಾವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ.
ಆಂಧ್ರ-ತೆಲಂಗಾಣ ಮಾತ್ರವೇ ಅಲ್ಲದೆ ಕರ್ನಾಟಕ, ಮುಂಬೈಗಳಲ್ಲಿಯೂ 'RRR' ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆ, ಡ್ಯಾನ್ಸ್ ಮಾಡುತ್ತಾ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ.
ಆದರೆ ಆಂಧ್ರದಲ್ಲಿ ವಿಷಾdಕರ ಘಟನೆಯೊಂದು 'RRR' ಸಿನಿಮಾ ಬಿಡುಗಡೆ ದಿನ ನಡೆದಿದೆ. ಆಂಧ್ರದ ಅನಂತಪುರಂ ಜಿಲ್ಲೆಯಲ್ಲಿ ಅಭಿಮಾನಿಯೊಬ್ಬ ಸಿನಿಮಾ ಚಿತ್ರಮಂದಿರದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಅನಂತಪುರಂನಲ್ಲಿ ಎಸ್‌ವಿ ಮ್ಯಾಕ್ಸ್ ಹೆಸರಿನ ಚಿತ್ರಮಂದಿರದಲ್ಲಿ ಬೆಳಗಿನ ಜಾವದ ಶೋ ನೋಡುತ್ತಿದ್ದ ಅಭಿಮಾನಿಯೊಬ್ಬ, ಸಿನಿಮಾ ನೋಡುತ್ತ-ನೋಡುತ್ತ ಚಿತ್ರಮಂದಿರದಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.
ಎಲ್ಲರೊಟ್ಟಿಗೆ ಶಿಳ್ಳೆ-ಚಪ್ಪಾಳೆ ಹಾಕುತ್ತ ಸಿನಿಮಾ ನೋಡುತ್ತಿದ್ದ ಅಭಿಮಾನಿ ಕುಸಿದು ಬಿದ್ದ ಕೂಡಲೇ ಆತನ ಗೆಳೆಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಮೃತನಾಗಿರುವುದಾಗಿ ವೈದ್ಯರು ಘೋಷಿಸಿದ್ದು, ಹೃದಯಾಘಾತದಿಂದ ವ್ಯಕ್ತಿ ಸಾವಾಗಿರುವ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಜೂ ಎನ್‌ಟಿಆರ್-ರಾಮ್ ಚರಣ್ ತೇಜ ನಟಿಸಿ, ರಾಜಮೌಳಿ ನಿರ್ದೇಶನ ಮಾಡಿರುವ 'RRR' ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದ್ದು, ದೇಶದಾದ್ಯಂತ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಭಾರಿ ಜೋಶ್‌ನಲ್ಲಿ ಬಂದು ಅಭಿಮಾನಿಗಳು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ಮಾತುಗಳು ಸಿನಿ ಪಂಡಿತರಿಂದ ಕೇಳಿ ಬರುತ್ತಿದೆ.


Click it and Unblock the Notifications











