For Quick Alerts
  ALLOW NOTIFICATIONS  
  For Daily Alerts

  ಮೆಚ್ಚಿನ ನಟನನ್ನು ಭೇಟಿಯಾಗಲು ಸೇತುವೆಯಿಂದ ನದಿಗೆ ಹಾರಿದ ಅಭಿಮಾನಿ

  |

  ನಟನೊಬ್ಬ ಸ್ಟಾರ್ ಆಗುವುದು ಅಭಿಮಾನಿಗಳಿಂದಲೇ. ನಟರು ತಮ್ಮ ಅಭಿಮಾನಿಗಳನ್ನು ಸಾಧ್ಯವಾದಷ್ಟು ಪ್ರೀತಿಯಿಂದ ಗೌರವದಿಂದ ಕಾಣುತ್ತಾರೆ. ಆದರೆ ಕೆಲವರದ್ದು ಅತಿರೇಕದ ಅಭಿಮಾನ.

  ದಕ್ಷಿಣ ಭಾರತದಲ್ಲಿ ಸಿನಿಮಾ ನಟರ ಬಗ್ಗೆ ಅಭಿಮಾನ ಹೆಚ್ಚು. ಬಾಲಿವುಡ್‌ ಗೆ ಹೋಲಿಸಿಕೊಂಡರೆ ದಕ್ಷಿಣದ ನಟರಿಗೆ ಅಭಿಮಾನಿಗಳಿಗೆ ಅತಿ ಹೆಚ್ಚು. ಕೆಲವೊಮ್ಮೆ ಅತಿರೇಕ ಎನಿಸುವಂಥಹಾ ಅಭಿಮಾನವನ್ನೂ ಪ್ರದರ್ಶಿಸುವುದುಂಟು.

  ಕನ್ನಡಕ್ಕೆ ಹೋಲಿಸಿದರೆ ಹುಚ್ಚು ಅಭಿಮಾನಿಗಳು ತೆಲುಗು-ತಮಿಳಿನಲ್ಲಿ ತುಸು ಹೆಚ್ಚಾಗಿಯೇ ಇದ್ದಾರೆ. ಸಿನಿಮಾ ನಟರಿಗಾಗಿ ಕೊಲೆಯೇ ನಡೆದಿವೆ ತೆಲುಗು ರಾಜ್ಯದಲ್ಲಿ. ಇದೀಗ ಅಂಥಹುದೇ ಒಂದು ಹುಚ್ಚುತನವನ್ನು ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟನಿಗಾಗಿ ಪ್ರದರ್ಶಿಸಿದ್ದಾನೆ.

  ನಾಗ್ ಚೈತನ್ಯಗಾಗಿ ಅಭಿಮಾನಿಯ ಹುಚ್ಚು ಸಾಹಸ

  ನಾಗ್ ಚೈತನ್ಯಗಾಗಿ ಅಭಿಮಾನಿಯ ಹುಚ್ಚು ಸಾಹಸ

  ತೆಲುಗಿನ ಖ್ಯಾತ ನಟ ನಾಗ್ ಚೈತನ್ಯ, ಗೋದಾವರಿ ಜಿಲ್ಲೆಯ ಬಳಿ ಗೋದಾವರಿ ನದಿಯಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಈ ಸಮಯ ಒಬ್ಬ ಹುಚ್ಚು ಅಭಿಮಾನಿ ತಮ್ಮ ಮೆಚ್ಚಿನ ಅಭಿಮಾನಿಯನ್ನು ಭೇಟಿಯಾಗಲು ಸೇತುವೆ ಮೇಲಿಂದ ನದಿಗೆ ಧುಮುಕಿದ್ದಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

  ಸೇತುವೆಯಿಂದ ನದಿಗೆ ಹಾರಿದ ಅಭಿಮಾನಿ

  ಸೇತುವೆಯಿಂದ ನದಿಗೆ ಹಾರಿದ ಅಭಿಮಾನಿ

  'ಥ್ಯಾಂಕ್ಯು' ಸಿನಿಮಾಕ್ಕಾಗಿ ಗೋದಾವರಿ ನದಿಯಲ್ಲಿ ಚಿತ್ರೀಕರಣ ಸಾಗಿತ್ತು. ನಟ ನಾಗ್ ಚೈತನ್ಯ ಬೋಟ್‌ನಲ್ಲಿ ಒಬ್ಬರೇ ಕೂತು ನಟಿಸುತ್ತಿದ್ದರು. ಹಿಂದೆ ಕೆಲವು ಬೋಟ್‌ಗಳಲ್ಲಿ ಕ್ಯಾಮೆರಾ, ಸಿನಿಮಾ ಸಿಬ್ಬಂದಿ ಇದ್ದರು. ಆಗ ಮೇಲಿನ ಸೇತುವೆ ಮೇಲೆ ನಿಂತಿದ್ದ ಅಭಿಮಾನಿ ನಾಗ್ ಚೈತನ್ಯ ಗೆ ಹಲವು ಬಾರಿ ಕೈ ಬೀಸಿದ್ದಾನೆ. ಹೆಸರು ಕರೆದಿದ್ದಾನೆ. ನಟನೆಯಲ್ಲಿ ಮಗ್ನರಾಗಿದ್ದ ನಾಗ್ ಚೈತನ್ಯ ಅಭಿಮಾನಿ ಕಡೆ ನೋಡಿಲ್ಲ. ಕೂಡಲೇ ಆ ಹುಚ್ಚು ಅಭಿಮಾನಿ, ಸೇತುವೆಯಿಂದ ನದಿಗೆ ಧುಮುಕಿಬಿಟ್ಟಿದ್ದಾನೆ.

  ನೀರಿನ ಬಿದ್ದ ಅಭಿಮಾನಿಯೊಂದಿಗೆ ಚಿತ್ರ ತೆಗೆಸಿಕೊಂಡ ನಾಗ್ ಚೈತನ್ಯ

  ನೀರಿನ ಬಿದ್ದ ಅಭಿಮಾನಿಯೊಂದಿಗೆ ಚಿತ್ರ ತೆಗೆಸಿಕೊಂಡ ನಾಗ್ ಚೈತನ್ಯ

  ನೀರಿಗೆ ಬಿದ್ದ ಅಭಿಮಾನಿ ನಾಗ್ ಚೈತನ್ಯ ಇದ್ದ ಬೋಟ್‌ ಕಡೆ ಹೋಗಿ ಕೈ ಕುಲಿಕಿದ್ದಾನೆ. ನಾಗ್ ಚೈತನ್ಯ ಹಾಗೂ ಇತರೆ ಸಿನಿಮಾ ಸಿಬ್ಬಂದಿ ಆತನನ್ನು ಎಳೆದು ಬೋಟ್‌ ಒಳಗೆ ಹಾಕಿಕೊಂಡಿದ್ದಾರೆ. ಆ ನಂತರ ನಾಗ್ ಚೈತನ್ಯ ಆತನನ್ನು ತನ್ನ ಕ್ಯಾರಾವ್ಯಾನ್‌ಗೆ ಕರೆದುಕೊಂಡು ಹೋಗಿ ಆತನೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಜೊತೆಗೆ ಇನ್ನೊಮ್ಮೆ ಹೀಗೆ ಮಾಡದಂತೆ ಬುದ್ಧಿ ಸಹ ಹೇಳಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada
  ಮಹೇಶ್ ಬಾಬು ಅಭಿಮಾನಿ ಪಾತ್ರದಲ್ಲಿ ನಾಗ್ ಚೈತನ್ಯ

  ಮಹೇಶ್ ಬಾಬು ಅಭಿಮಾನಿ ಪಾತ್ರದಲ್ಲಿ ನಾಗ್ ಚೈತನ್ಯ

  ನಾಗ್ ಚೈತನ್ಯ 'ಥ್ಯಾಂಕ್ ಯೂ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಗ್ ಚೈತನ್ಯ ಕ್ರೀಡಾಪಟುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಸಿನಿಮಾದಲ್ಲಿ ನಾಗ್ ಚೈತನ್ಯ ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿ. ಸಿನಿಮಾದಲ್ಲಿ ನಾಗ್ ಚೈತನ್ಯ ಪತ್ನಿ ಸಮಂತಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಚೈತನ್ಯ ನಟನೆಯ 'ಲವ್ ಸ್ಟೋರಿ' ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

  English summary
  A fan jumps into the river from bridge to meet his favorite actor Nag Chaithanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X