ಗನ್ ತೋರಿಸಿ ನಟಿ ರಶ್ಮಿಕಾ ಮಂದಣ್ಣಗೆ ಬೆದರಿಕೆ!; ವೀಡಿಯೋ ಫುಲ್ ವೈರಲ್
ನಟಿ ರಶ್ಮಿಕಾ ಮಂದಣ್ಣ ಮತ್ತೆ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸಲ್ಮಾನ್ ಖಾನ್ ಜೋಡಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ರೋಶ್ ಸದ್ದು ಮಾಡುತ್ತಿದ್ದಾರೆ. 'ಅನಿಮಲ್' ಸಿನಿಮಾ ಸಕ್ಸಸ್ ಚೆಲುವೆಗೆ ಭಾರೀ ಕ್ರೇಜ್ ತಂದುಕೊಟ್ಟಿದೆ.
ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಜೊತೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಪುಷ್ಪ'-2 ಚಿತ್ರದಲ್ಲಿ ಕೊಡಗಿನ ಕುವರಿ ನಟಿಸುತ್ತಿರುವುದು ಗೊತ್ತೇಯಿದೆ. ತಮಿಳಿನಲ್ಲಿ ಧನುಷ್ ಜೋಡಿಯಾಗಿ 'ಕುಬೇರ' ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಕೂಡ ಬಣ್ಣ ಹಚ್ಚಿದ್ದಾರೆ.

ಸದ್ಯಕ್ಕೆ ರಶ್ಮಿಕಾ ಕ್ರೇಜ್‌ಗೆ ಬ್ರೇಕ್ ಹಾಕುವವರಿಲ್ಲ ಎನ್ನಬಹುದು. ಪೂಜಾ ಹೆಗ್ಡೆ ಕೂಡ ಸೈಲೆಂಟ್ ಆಗಿಬಿಟ್ಟರು. ಶ್ರೀಲೀಲಾ ಟಾಲಿವುಡ್ ಬಿಟ್ಟು ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. ಸದ್ಯ ಬಾಲಿವುಡ್‌ಗೂ ಇತ್ತ ಕಾಲಿವುಡ್, ಟಾಲಿವುಡ್‌ಗೂ ರಶ್ಮಿಕಾನೇ ಬೇಕು ಎನ್ನುವಂತಾಗಿದೆ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಚೆಲುವೆ ಮಿಂಚುತ್ತಿದ್ದಾರೆ. ಅಂದಹಾಗೆ ರಶ್ಮಿಕಾಗೆ ನಟ ನಾನಿ ಗನ್ ತೋರಿಸಿ ಬೆದರಿಸಿರುವ ಫನ್ನಿ ವಿಡಿಯೋ ವೈರಲ್ ಆಗ್ತಿದೆ.
ನಾನಿ ಹಾಗೂ ರಶ್ಮಿಕಾ ಮಂದಣ್ಣ ಈ ಹಿಂದೆ 'ದೇವದಾಸ್' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಈ ಕಾಮಿಡಿ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಾಗಾರ್ಜುನಾ ಕೂಡ ಕಾಣಿಸಿಕೊಂಡಿದ್ದರು. ಆ ಚಿತ್ರದ ಪ್ರಮೋಷನ್ ವೇಳೆ ಮೂರು ಜನ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದರು. ಈ ಸಂದರ್ಶನದಲ್ಲಿ ಒಂದು ಫನ್ನಿ ಸೀನ್ ನಡೆದಿತ್ತು. ನಾನಿ ಕೇಳಿದ ಪ್ರಶ್ನೆಗಳಿಗೆ ರಶ್ಮಿಕಾ ಉತ್ತರಿಸುತ್ತಿದ್ದರು.
ಈ ವೇಳೆ ರಶ್ಮಿಕಾ ನೀವು 3 ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೀರಾ? ಈ ಮೂವರಲ್ಲಿ ನಿಮ್ಮ ಫೇವರಿಟ್ ನಟ ಯಾರು ಎಂದು ನಾಗಶೌರ್ಯ, ವಿಜಯ್ ದೇವರಕೊಂಡ ಹಾಗೂ ತಮ್ಮ ಹೆಸರು ತೆಗೆದುಕೊಂಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲು ಕೊಡಗಿನ ಕುವರಿ ಹಿಂದು ಮುಂದು ನೋಡಿದ್ದಾರೆ. ಎಂಥಹ ಕಾಂಟ್ರವರ್ಷಿಯಲ್ ಪ್ರಶ್ನೆ ಇದು? ಹೇಗೆ ಉತ್ತರಿಸುವುದು ಎಂದು ಚಡಪಡಿಸಿದ್ದಾರೆ. ಕೂಡಲೇ ಪಕ್ಕದಲ್ಲೇ ಇದ್ದ ನಾಗ್ ಕೂಡ ಇದೇ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಮೂವರು ಸಹ ನಟರಲ್ಲಿ ನಿಮಗೆ ಯಾರು ಫೇವರಿಟ್ ಎಂದು ಕೇಳಿದ್ದಾರೆ.
ರಶ್ಮಿಕಾ ಉತ್ತರಿಸಲು ತಡ ಮಾಡುತ್ತಿದ್ದಂತೆ ಟೇಬಲ್ ಮೇಲಿದ್ದ ಡಮ್ಮಿ ಗನ್ ತೆಗೆದು ನಟ ನಾನಿ ಬೆದರಿಸಿದ್ದಾರೆ. ಕೊನೆಗೆ ನಾನಿ ಎಂದು ರಶ್ಮಿಕಾ ಹೇಳಿ ನಕ್ಕಿದ್ದಾರೆ. ಈ ಫನ್ನಿ ವಿಡಿಯೋವನ್ನು ನಾನಿ ಅಭಿಮಾನಿಗಳು ಈಗ ವೈರಲ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಸ್ ಮಾಡುತ್ತಿದ್ದಾರೆ.
2018ರಲ್ಲಿ 'ದೇವದಾಸ್' ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಶ್ರೀರಾಮ್ ಆದಿತ್ಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕನ್ನಡದ ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದ ಆಕಾಂಕ್ಷಾ ಸಿಂಗ್ ಮತ್ತೊಬ್ಬ ನಾಯಕಿಯಾಗಿ ಮಿಂಚಿದ್ದರು.
'ಪುಷ್ಪ'-2 ಬಿಟ್ಟು ರಶ್ಮಿಕಾ ಕೈಯಲ್ಲಿ 5 ಸಿನಿಮಾಗಳಿವೆ. ಎ. ಆರ್ ಮುರುಗದಾಸ್ ನಿರ್ದೇಶನಲ್ಲಿ ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಚಿತ್ರಕ್ಕೂ ಆಕೆ ನಾಯಕಿ ಎನ್ನಲಾಗ್ತಿದೆ. 'ರೈನ್‌ಬೋ' ಹಾಗೂ 'ದಿ ಗರ್ಲ್‌ಫ್ರೆಂಡ್' ಎನ್ನುವ 2 ಮಹಿಳಾ ಪ್ರಧಾನ ಸಿನಿಮಾಗಳು ಆಕೆಯ ಕೈಯಲ್ಲಿವೆ. 'ರೈನ್‌ಬೋ' ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಆ ಅವಕಾಶ ರೋಶ್ ಪಾಲಾಗಿತ್ತು. ವಿಜಯ್ ದೇವರಕೊಂಡ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











