ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ 'ದಿ ಗರ್ಲ್‌ಫ್ರೆಂಡ್': ಫಸ್ಟ್ ಲುಕ್‌ನಲ್ಲಿ ನಾನಾ ಭಾವ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಎಂಬ ಥ್ರಿಲ್ಲರ್ ಪ್ರೇಮಕಥೆಯಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಇದು ಅವರ ಏಳು ವರ್ಷಗಳ ವೃತ್ತಿಜೀವನದ 24 ನೇ ಚಿತ್ರವಾಗಿದೆ. ಸಿನಿಮಾವನ್ನು ಅಲ್ಲು ಅರವಿಂದ್ ಅವರ ಗೀತಾ ಆರ್ಟ್ ಸಿರ್ಮಿಸಲಿದೆ.
ಮನ್ಮಥುಡು 2 ಖ್ಯಾತಿಯ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ 'ದಿ ಗರ್ಲ್‌ಫ್ರೆಂಡ್' ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದು ಅವರ 51 ನೇ ಸಿನಿಮಾ. 'ದಿ ಗರ್ಲ್‌ಫ್ರೆಂಡ್' ಮಹಿಳಾ ಪ್ರಧಾನ ಸಿನಿಮಾ ಎನ್ನಲಾಗಿದ್ದು, ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

'ದಿ ಗರ್ಲ್‌ಫ್ರೆಂಡ್' ಸಿನಿಮಾದ ಫಸ್ಟ್ ಲುಕ್ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಸಾಮಾಜಿಕ ಮಾಧ್ಯಮದಲ್ಲಿ ತನ್ನ 24 ನೇ ಸಿನಿಮಾವನ್ನು ಘೋಷಿಸಿರುವ ರಶ್ಮಿಕಾ ಮಂದಣ್ಣ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ, "ಜಗತ್ತು ಅದ್ಭುತ ಪ್ರೇಮಕಥೆಗಳಿಂದ ತುಂಬಿದೆ. ಆದರೆ ಇದುವರೆಗೆ ಕೇಳಿರದ ಅಥವಾ ನೋಡದ ಕೆಲವು ಪ್ರೇಮಕಥೆಗಳಿವೆ. ಮತ್ತು ಅಂತಹ ಸಿನಿಮಾಗಳಲ್ಲಿ 'ದಿ ಗರ್ಲ್‌ಫ್ರೆಂಡ್' ಕೂಡ ಒಂದು. ಆರ್‌ಎಂ 24" ಎಂದು ಶೀರ್ಷಿಕೆ ನೀಡಿದ್ದಾರೆ.
ಫಸ್ಟ್ ಲುಕ್ ನೋಡಿದರೆ ಚಿತ್ರ ಕುತೂಹಲ ಕೆರಳಿಸುವಂತಿದೆ. ಫಸ್ಟ್ ಲುಕ್ ಟೀಸರ್‌ನಲ್ಲಿ ಸೌಮ್ಯವಾದ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ವಾಯ್ಸ್‌ಓವರ್ ಕೇಳಿ ಬರುತ್ತದೆ. ನಂತರ ರಶ್ಮಿಕಾ ನೀರಿನಲ್ಲಿ ಮುಳುಗಿರುವ ದೃಶ್ಯ ಕಾಣಿಸುತ್ತದೆ. ನಗು ಮುಖದಲ್ಲಿರುವ ರಶ್ಮಿಕಾ ಮಂದಣ್ಣ ಬಳಿಕ ದುಃಖಿತಳಾಗಿ ಮತ್ತು ಉಸಿರುಗಟ್ಟಿದಂತೆ ಕಾಣಿಸುತ್ತಾರೆ.
ಟೀಸರ್ ಹಿಂದೆ ಬರುವ ಅಶರೀರವಾಣಿ, "ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಅವಳಿಗೆ ಸ್ನೇಹಿತರು, ಕುಟುಂಬ ಅಥವಾ ಬೇರೆಯವರ ಅಗತ್ಯವಿಲ್ಲ. ಅವಳಿಗೆ ಬೇಕಾಗಿರುವುದು ನಾನು. ಅವಳು ನನ್ನೊಂದಿಗೆ 24/7 ಇರಬೇಕೆಂದು ನಾನು ಬಯಸುತ್ತೇನೆ. ನಂದು ಎಂದು ಹೇಳಿಕೊಳ್ಳಲು ಒಬ್ಬ ಗರ್ಲ್‌ಫ್ರೆಂಡ್ ಇದ್ದರೇ ಆ ಕಿಕ್ ಬೇರೆನೇ" ಎಂದು ಹೇಳುತ್ತದೆ.

ನಟಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾಗಳು
ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಮುಂದೆ ಸಾಲು ಸಾಲು ಸಿನಿಮಾಗಳಿವೆ. ಸದ್ಯ 'ಅನಿಮಲ್, 'ರೇನ್ಬೋ, 'ಡಿ 51', 'ಛಾವಾ', 'ಪುಷ್ಪ: ದಿ ರೂಲ್' ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಮತ್ತೊಂದು ಸಿನಿಮಾದಲ್ಲಿ ಒಂದಾಗುತ್ತಾರೆ ಎಂದು ವದಂತಿಗಳಿವೆ. ಇನ್ನು, ಅನಿಮಲ್ ಮತ್ತು ಪುಷ್ಪ: ದಿ ರೂಲ್ ಬಿಡುಗಡೆಗೆ ಸಜ್ಜಾಗಿವೆ.


Click it and Unblock the Notifications