ಅದ್ಧೂರಿಯಾಗಿ ನಡೆದ ನಿಕ್ಕಿ-ಆದಿ ಅರತಕ್ಷತೆ: ಪೋಟೋಗಳು ವೈರಲ್
ಬಹುಭಾಷಾ ನಟಿ ನಿಕ್ಕಿ ಗಲ್ರಾನಿ ಮತ್ತು ಖ್ಯಾತ ನಟ ಆದಿ ಪಿನಿಸೆಟ್ಟಿ ಮದುವೆ ಮೇ 19 ರಂದು ಅದ್ಧೂರಿಯಾಗಿ ನೆರವೇರಿದೆ. ಇಬ್ಬರು ತಮ್ಮ ಬಹುಕಾಲದ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದು, ಸ್ಟಾರ್ ಜೋಡಿಯ ಮದುವೆ ಅದ್ಧೂರಿಯಾಗಿ ನೇರವೇರಿದೆ.
ಈ ಸ್ಟಾರ್ ಜೋಡಿಗಳು ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು 2015 ರಲ್ಲಿ ತೆರೆಕಂಡ 'ಯಾಗವರಾಯಿನುಮ್ ನಾ ಕಾಕ್ಕಾ' ಸಿನಿಮಾದಲ್ಲಿ ಮೊದಲ ಬಾರಿಗೆ ಆದಿ ಮತ್ತು ನಿಕ್ಕಿ ಒಟ್ಟಾಗಿ ನಟಿಸಿದ್ದರು. ಇದಾದ ಬಳಿಕ ಮತ್ತೊಂದು ಸಿನಿಮಾ 'ಮರಗಧ ನಾನಯಮ್' ಸಿನಿಮಾದಲ್ಲೂ ಈ ಜೋಡಿ ನಟಿಸಿ ಪ್ರೇಕ್ಷಕರನ್ನು ರಂಜಿಸಿತ್ತು. ಈ ಎರಡು ಸಿನಿಮಾಗಳ ಬಳಿಕ ಆದಿ-ನಿಕ್ಕಿ ನಡುವಿನ ಒಡನಾಟ ಹೆಚ್ಚಾಯಿತು.
ಕಳೆದ ಮಾರ್ಚ್ ತಿಂಗಳಲ್ಲಿ ಕ್ಯೂಟ್ ಕಪಲ್ ಅಧಿಕೃತವಾಗಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇದಾದ ಒಂದು ತಿಂಗಳ ಬಳಿಕ ಮೇ 19 ರಂದು ಈ ನವ ಜೋಡಿ ಹಸೆಮೆಣೆ ಏರಿದೆ. ಮದುವೆಯಲ್ಲಿ ಸಿನಿರಂಗದವರು ಬಂಧು ಬಾಂಧವರು ಭಾಗಿಯಾಗಿ ನವ ವಧು-ವರರಿಗೆ ಆಶೀರ್ವದಿಸಿದ್ದಾರೆ. ನಿನ್ನೆ (ಮೇ 24) ರಂದು ಈ ಸ್ಟಾರ್ ಜೋಡಿ ಅದ್ಧೂರಿಯಾಗಿ ಅರತಕ್ಷತೆ ಮಾಡಿಕೊಂಡಿದೆ. ಈ ಪೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

ಆದಿ-ನಿಕ್ಕಿ ಅರತಕ್ಷತೆಗೆ ಸಿನಿತಾರೆಯರ ದಂಡು
ತೆಲುಗಿನ ಸೂಪರ್ ಸ್ಟಾರ್ ಜೋಡಿಯಾದ ಆದಿ ಹಾಗೂ ನಿಕ್ಕಿ ಗಲ್ರಾನಿ ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಹೆಚ್ಚಿಸಿದ್ದಾರೆ. ಸದ್ಯ ಈ ನವ ವಧು ವರರು ಅದ್ಧೂರಿಯಾಗಿ ಅರತಕ್ಷತೆ ಮಾಡಿಕೊಂಡಿದ್ದು, ತೆಲುಗು ಚಿತ್ರರಂಗದ ಅನೇಕ ಸೆಲೆಬ್ರೆಟಿಗಳು ಈ ಅರತಕ್ಷತೆಯಲ್ಲಿ ಭಾಗಿಯಾಗಿದ್ದರು. ಹಿರಿಯ ನಟ ವಿಜಯ್ ಕುಮಾರ್ ಕುಟುಂಬ ಸಮೇತರಾಗಿ ಆಗಮಸಿ ನಿಕ್ಕಿ-ಆದಿಗೆ ಶುಭಾಶಯ ಕೋರಿದ್ದಾರೆ. ಇದಾದ ಬಳಿಕ ಸಂಗೀತ ಮಾಂತ್ರಿಕ ಇಳಯರಾಜ, ನಟ ಶಶಿಕುಮಾರ್, ಹಿರಿಯ ನಟಿ ರಾಧಿಕಾ ಶರತ್ ಕುಮಾರ್, ಹಿರಿಯ ನಟ ನಾಸಿರ್, ನಟ ಜೀವ ಮತ್ತು ಕುಟುಂಬ ಕೂಡ ಆಗಮಿಸಿ ಶುಭಾಶಯ ಕೋರಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ
ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಈ ಜೋಡಿ ಕೊನೆಗೂ ಮೇ 19 ರಂದು ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಅದ್ದೂರಿಯಾಗಿ ನಡೆದ ಈ ಮದುವೆಯಲ್ಲಿ ನಿಕ್ಕಿ ಹಾಗೂ ಆದಿ ವಿಶೇಷ ಉಡುಪು ಎಲ್ಲರ ಕಣ್ಮನ ಸೆಳೆದಿದೆ. ಮದುವೆಯಲ್ಲಿ ನಿಕ್ಕಿ ಗಲ್ರಾನಿ ಬಂಗಾರದ ಬಣ್ಣದ ಸೀರೆಯಲ್ಲಿ ಮದುಮಗಳಾಗಿ ಕಂಗೊಳಿಸಿದ್ರೆ, ಇತ್ತ ಆದಿ ಬಂಗಾರದ ಶರ್ಟ್ ಮತ್ತು ಪಂಚೆ ಧರಿಸಿ ಮಿಂಚಿದ್ದರು. ಈ ಪೋಟೋಗಳು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗಿತ್ತು. ಈ ಮುದ್ದಾದ ಜೋಡಿಗೆ ಅಭಿಮಾನಿಗಳು ಶುಭಾಶಯ ಕೋರಿದ್ದರು. ಈಗ ಅರತಕ್ಷತೆಯಲ್ಲೂ ಕೂಡ ಸಿಂಪಲ್ ಲುಕ್‌ನಲ್ಲಿ ಈ ಇಬ್ಬರು ಕಾಣಿಸಿಕೊಂಡಿದ್ದು, ಈ ಪೋಟೋಗಳು ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡ್ತಿದೆ.

ವಿವಾದಗಳಿಂದ ದೂರ ಇರುವ ನಟಿ ನಿಕ್ಕಿ
ಕನ್ನಡದ ನಟಿಯಾದರೂ ಸಹ ನಿಕ್ಕಿ ಗಲ್ರಾನಿ ತಮ್ಮ ಸಿನಿಮಾ ಪಯಣವನ್ನು ತೆಲುಗು ಹಾಗೂ ತಮಿಳಿನಲ್ಲಿ ಆರಂಭಿಸಿದ್ದರು. ಅಲ್ಲಿ ಸಕ್ಸಸ್ ಕೂಡ ಕಂಡಿದ್ದಾರೆ. ಕನ್ನಡದಲ್ಲೂ ಕೂಡ ನಟ ಚಿರಂಜೀವಿ ಜೊತೆ 'ಅಜಿತ್' ಸಿನಿಮಾ ಮಾಡಿರುವ ನಟಿ ಮತ್ತೆ ಕನ್ನಡದ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲೇ ಮಿಂಚುತ್ತಿರುವ ನಟಿ ನಿಕ್ಕಿ ಗಲ್ರಾನಿ 2014 ರಿಂದಲೂ ಚಿತ್ರರಂಗದಲ್ಲಿ ಇದ್ದಾರೆ. ಆದರೆ, ಈವರೆಗೂ ಯಾವುದೇ ರೀತಿಯ ಕಾಂಟ್ರವರ್ಸಿಗಳನ್ನು ಮಾಡಿಕೊಳ್ಳದೆ ಚಿತ್ರರಂಗದಲ್ಲಿ ಉತ್ತಮ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಕ್ಕ ಸಂಜನಾರಂತೆ ಗಾಸಿಪ್‌ಗಳಿಗೆ, ಕಾಂಟ್ರವರ್ಸಿಗಳಿಗೆ ಆಹಾರವಾಗದೇ ನಿಕ್ಕಿ ಗಲ್ರಾನಿ ತಮ್ಮ ಸಿನಿಮಾ ಕೆರಿಯನ್‌ನಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
Recommended Video


ಪತಿ ಆದಿ ಹಲವು ಸಿನಿಮಾಗಳಲ್ಲಿ ಬ್ಯುಸಿ
ನಟ ಆದಿ ಪಿನಿಸೆಟ್ಟಿ ಕೂಡ ತೆಲುಗು ಚಿತ್ರರಂಗದಲ್ಲಿ ಉತ್ತಮ ನಟರಾಗಿ ಹೆಸರು ಮಾಡಿಕೊಂಡಿದ್ದಾರೆ. ತೆಲುಗಿನ ಜೊತೆಗೆ ತಮಿಳು ಭಾಷೆಯಲ್ಲೂ ನಟಿಸಿರುವ ಆದಿ ಹೀರೊ ಆಗಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಮುಖ್ಯ ಪೋಷಕ ನಟನಾಗಿ ರಜನಿಕಾಂತ್ ನಟಿಸಿದ 'ಕೊಚಾಡಿಯನ್', ಕೀರ್ತಿ ಸುರೇಶ್ ನಟನೆಯ 'ಗುಡ್ ಲಕ್ ಸಖಿ', ರಾಮ್ ಚರಣ್ ತೇಜ ನಟನೆಯ 'ರಂಗಸ್ಥಳಂ' ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟಿ ನಿಕ್ಕಿ ಗಲ್ರಾನಿ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಪ್ರಸ್ತುತ ಮಲಯಾಳಂನ 'ವೀರುಣ್ಣು', ಹಾಗೂ 'ಮೇರಿ ಅವಾಜ್ ಸುನೊ', ತಮಿಳಿನ 'ಇಡಿಯಟ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











