ಅದ್ಧೂರಿಯಾಗಿ ನಡೆದ ನಿಕ್ಕಿ ಗಲ್ರಾನಿ, ಆದಿ ಪಿನಿಶೆಟ್ಟಿ ಮದುವೆ!
ತೆಲುಗು ನಟ ಆದಿ ಪಿನಿಸೆಟ್ಟಿ ಮತ್ತು ನಿಕ್ಕಿ ಗಲ್ರಾನಿ ಮದುವೆ (ಮೇ 18) ಚೆನ್ನೈನಲ್ಲಿ ನೆರವೇರಿದೆ. ಕೆಲವು ವರ್ಷಗಳ ಕಾಲ ಪ್ರೀತಿ ಮಾಡಿದ ಈ ಜೋಡಿ ಈಗ ಮದುವೆ ಆಗಿದೆ. ಈ ವರ್ಷ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇನ್ನು ಮದುವೆಯಲ್ಲಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಶೆಟ್ಟಿ ಆಪ್ತರು ಮಾತ್ರ ಹಾಜರಿದ್ದರು. ಹಳದಿ, ಮೆಹೆಂದಿ ಸಮಾರಂಭಗಳು ಜೋರಾಗೆ ನಡೆದಿವೆ. ಮದುವೆಯನ್ನು ಬಹಿರಂಗಪಡಿಸದೇ, ಆದಷ್ಟು ಗುಟ್ಟಾಗೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ನಟಿ ಸಂಜನಾ ಗಲ್ರಾನಿಯ ಸಹೋದರಿ ನಿಕ್ಕಿ ಗಲ್ರಾನಿ ಇತ್ತೀಚೆಗೆ ತಮ್ಮ ಮದುವೆ ವಿಚಾರವಾಗಿಹೆಚ್ಚು ಸುದ್ದಿಯಲ್ಲಿದ್ದರು. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಿಕ್ಕಿ ಗಲ್ರಾನಿ, ಪರಭಾಷೆಗಳಲ್ಲಿಯೇ ಹೆಚ್ಚು ಸಿನಿಮಾ ಮಾಡಿದ್ದಾರೆ. ಮಾರ್ಚ್‌ನಲ್ಲಿ ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಇಬ್ಬರು ಉಂಗುರು ಬದಲಿಸಿಕೊಂಡ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈ ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ನಡೆಸಿದ್ದು, ಪರಸ್ಪರ ಪ್ರೀತಿಸಿ, ಮದುವೆ ಆಗುತ್ತಿದ್ದಾರೆ. ಇವರ ನಿಶ್ಚಿತಾರ್ಥದ ಬಳಿಕ ಮದುವೆ ಯಾವಾಗ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿದ್ದವು. ಈಗ ಅದಕ್ಕೆಲ್ಲಾ ತೆರೆ ಬಿದ್ದಿದ್ದು, ಇಂದು ಮದುವೆ ನೆರವೇರಿದೆ.
ಆದಿ ಪಿನಿಶೆಟ್ಟಿ ಮತ್ತು ನಿಕ್ಕಿ ಗಲ್ರಾನಿ ಇಬ್ಬರು ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮರಗದ ನಾನಯಮ್' ಹಾಗೂ 'ಯಗವರಯಿನುಮ್ ನಾ ಕಾಕ' ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ. ಆದಿ ಪಿನಿಶೆಟ್ಟಿ ಹಲವು ಹಿಟ್‌ಗಳನ್ನು ನೀಡಿ ಉತ್ತಮ ನಟ ಎನಿಸಿಕೊಂಡಿದ್ದಾರೆ.
ಆದಿ ತೆಲುಗು, ತಮಿಳು ಎರಡೂ ಭಾಷೆಗಳಲ್ಲಿ ನಟಿಸಿದ್ದಾರೆ. ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್‌ರ 'ಕೊಚಾಡಿಯನ್', ಕೀರ್ತಿ ಸುರೇಶ್ ನಟನೆಯ 'ಗುಡ್ ಲಕ್ ಸಖಿ', ರಾಮ್ ಚರಣ್ ತೇಜ ನಟನೆಯ 'ರಂಗಸ್ಥಳಂ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಿಕ್ಕಿ ಗಲ್ರಾನಿ ಕನ್ನಡದಲ್ಲೂ ನಟಿಸಿದ್ದಾರೆ. ಆದರೆ ತಮಿಳು, ತೆಲುಗಿನಲ್ಲಿ ಹೆಚ್ಚು ಜನಪ್ರಿಯ.


Click it and Unblock the Notifications











