ನಿಕ್ಕಿ ಗಲ್ರಾನಿ, ಆದಿ ಪಿನಿಶೆಟ್ಟಿ ಮದುವೆ ದಿನಾಂಕ ಫಿಕ್ಸ್!

ನಟಿ ಸಂಜನಾ ಗಲ್ರಾನಿಯ ಸಹೋದರಿ ನಿಕ್ಕಿ ಗಲ್ರಾನಿ ಇತ್ತೀಚೆಗೆ ತಮ್ಮ ಮದುವೆ ಸುದ್ದಿಯ ಮೂಲಕ ಹೆಚ್ಚು ಸುದ್ದಿ ಆಗಿದ್ದರು. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಿಕ್ಕಿ ಗಲ್ರಾನಿ, ಪರಭಾಷೆಗಳಲ್ಲಿಯೇ ಹೆಚ್ಚು ಸಿನಿಮಾ ಮಾಡಿದ್ದಾರೆ. ಮಾರ್ಚ್‌ನಲ್ಲಿ ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು. ಇಬ್ಬರು ಉಂಗುರು ಬದಲಿಸಿಕೊಂಡ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈ ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ನಡೆಸಿದ್ದರು, ಈಗ ಮದುವೆ ಆಗುತ್ತಿದ್ದಾರೆ. ಇವರ ನಿಶ್ಚಿತಾರ್ಥದ ಬಳಿಕ ಮದುವೆ ಯಾವಾಗ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮುಡಿದ್ದವು. ಈಗ ಈ ಜೋಡಿಯ ಮದುವೆ ದಿನಾಂಕದ ಬಗ್ಗೆಯೂ ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಾ ಇದೆ.

ಇದೇ ಮೇ 18ಕ್ಕೆ ನಿಕ್ಕಿ ಮತ್ತು ಆದಿ ಪಿನಿಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಈಗ ಅದ್ದೂರಿಯಾಗಿ ಮದುವೆ ಮಡಿಕೊಳ್ಳಲು ಸಿದ್ದತೆ ನಡೆಸಿದೆ. ಎಂಗೇಜ್‌ಮೆಂಟ್ ಬಳೀಕ ಹೆಚ್ಚಿನ ಗ್ಯಾಪ್ ತೆಗೆದುಕೊಳ್ಳದೆ, ಇದೇ ವರ್ಷ ಮದುವೆ ಆಗುತ್ತಿದ್ದಾರೆ.

ಎಂಗೇಜ್‌ಮೆಂಟ್ ಫೊಟೋವನ್ನು ಹಂಚಿಕೊಂಡಿದ್ದ ಈ ಜೋಡಿ. ತಮ್ಮ ಪ್ರೀತಿಯ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿತ್ತು. ''ಕೆಲವು ವರ್ಷಗಳ ಹಿಂದೆ ನಾವಿಬ್ಬರು ಪರಚಿತರಾದೆವು. ಪರಸ್ಪರ ಇಷ್ಟಪಟ್ಟೆವು, ಮಾರ್ಚ್ 23 ನಮ್ಮಿಬ್ಬರ ಪಾಲಿಗೂ ಮರೆಯಲಾಗದ ದಿನ. ಆ ದಿನ ನಾವು ಕುಟುಂಬದವರು, ಹಿರಿಯರು, ಸ್ನೇಹಿತರ ಮುಂದೆ ಎಂಗೇಜ್ ಆದೆವು'' ಎಂದು ಬರೆದು, ಎಂಗೇಜ್‌ಮೆಂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Aadhi Pinisetty & Nikki Galrani wedding date fixed On May 18th

ಆದಿ ಪಿನಿಶೆಟ್ಟಿ ಮತ್ತು ನಿಕ್ಕಿ ಗಲ್ರಾನಿ ಇಬ್ಬರು ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮರಗದ ನಾನಯಮ್' ಹಾಗೂ 'ಯಗವರಯಿನುಮ್ ನಾ ಕಾಕ' ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ. ಆದಿ ಪಿನಿಶೆಟ್ಟಿ ಹಲವು ಹಿಟ್‌ಗಳನ್ನು ನೀಡಿ ಉತ್ತಮ ನಟ ಎನಿಸಿಕೊಂಡಿದ್ದಾರೆ.

ಆದಿ ತೆಲುಗು, ತಮಿಳು ಎರಡೂ ಭಾಷೆಗಳಲ್ಲಿ ನಟಿಸಿದ್ದಾರೆ. ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಹಲವು ಸಿನಿಮಾಗಳಲ್ಲಿ ಮುಖ್ಯ ಪೋಷಕ ನಟನಾಗಿ ನಟಿಸಿದ್ದಾರೆ. ರಜನೀಕಾಂತ್‌ರ 'ಕೊಚಾಡಿಯನ್', ಕೀರ್ತಿ ಸುರೇಶ್ ನಟನೆಯ 'ಗುಡ್ ಲಕ್ ಸಖಿ', ರಾಮ್ ಚರಣ್ ತೇಜ ನಟನೆಯ 'ರಂಗಸ್ಥಳಂ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಿಕ್ಕಿ ಗಲ್ರಾನಿ ಕನ್ನಡದಲ್ಲೂ ನಟಿಸಿದ್ದಾರೆ. ಅದರೆ ತಮಿಳು, ತೆಲುಗಿನಲ್ಲಿ ಹೆಚ್ಚು ಜನಪ್ರಿಯ.

More from Filmibeat

English summary
Aadhi Pinisetty & Nikki Galrani wedding date fixed On May 18th This Years,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X