ತೆಲುಗು ಸಿನಿಮಾಕ್ಕೆ ಶುಭ ಕೋರಲು ಬಂದ ಅಮೀರ್ ಖಾನ್

ಅಮೀರ್ ಖಾನ್ ಬಹಳ ಶಿಸ್ತಿನ ಮನುಷ್ಯ. ತಾವಾಯಿತು ತಮ್ಮ ಕೆಲಸವಾಯ್ತು ಎಂದಷ್ಟೆ ಇರುವವರು. ಅಮೀರ್ ಖಾನ್ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಬೇರೊಬ್ಬರ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದಿಲ್ಲ. ಇಂಥಹಾ ಕೆಲವು ಶಿಸ್ತುಗಳನ್ನು ತಮ್ಮ ಮೇಲೆ ತಾವೇ ಹೇರಿಕೊಂಡಿದ್ದಾರೆ.

ಆದರೆ ಅಮೀರ್ ಖಾನ್ ತೆಲುಗು ಸಿನಿಮಾ ಒಂದಕ್ಕಾಗಿ ತಮ್ಮದೇ ನಿಯಮವನ್ನು ಮೀರಿ ಹೈದರಾಬಾದ್‌ಗೆ ಬಂದಿದ್ದಾರೆ. ಇತರರ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಅಮೀರ್ ಖಾನ್ ತೆಲುಗು ಸಿನಿಮಾ ಒಂದರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿನಿಮಾಕ್ಕೆ ಶುಭ ಕೋರಿದ್ದಾರೆ. ಅದುವೇ 'ಲವ್ ಸ್ಟೋರಿ' ಸಿನಿಮಾ.

ನಾಗ ಚೈತನ್ಯ, ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಜೊತೆಗೆ ಚಿರಂಜೀವಿ ಸಹ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಹೈದರಾಬಾದ್‌ನಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಭಾಗಿ

ಹೈದರಾಬಾದ್‌ನಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಭಾಗಿ

ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದೊಡನೆ ತೆಲುಗು ಸಿನಿ ಪ್ರೇಕ್ಷಕರಿಂದ ಅದ್ಭುತ ಸ್ವಾಗತ ಪಡೆದುಕೊಂಡ ಅಮೀರ್ ಖಾನ್, ನಾಗಚೈತನ್ಯ ಹಾಗೂ ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಶ್ ಕುಮಾರ್ ಜೊತೆ ಸೇರಿ ಗ್ರೀನ್ ಇಂಡಿಯಾ ಚಾಲೆಂಜ್‌ನ ಭಾಗವಾಗಿ ಸಸಿಯೊಂದನ್ನು ನೆಟ್ಟರು. ಜೊತೆಗೆ ಜೋಗಿನಪಲ್ಲಿಯಿಂದ ಅವರ ಗ್ರೀನ್ ಇಂಡಿಯಾ ಚಾಲೆಂಜ್‌ ಕುರಿತಾಗಿ ಸಾಕಷ್ಟು ಮಾಹಿತಿ ಪಡೆದುಕೊಂಡರು.

ಚಿತ್ರದ ಟ್ರೇಲರ್ ನೋಡಿ ಖುಷಿಪಟ್ಟ ಅಮೀರ್

ಚಿತ್ರದ ಟ್ರೇಲರ್ ನೋಡಿ ಖುಷಿಪಟ್ಟ ಅಮೀರ್

ಆ ನಂತರ 'ಲವ್ ಸ್ಟೋರಿ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಅಮೀರ್ ಖಾನ್, ಚಿತ್ರದ ಟ್ರೇಲರ್ ನೋಡಿ ಬಹಳ ಖುಷಿ ಪಟ್ಟಿದ್ದಾಗಿಯೂ ಸಿನಿಮಾಕ್ಕೆ ಶುಭಾಶಯಗಳನ್ನು ಹೇಳಬೇಕೆಂದು ಇಷ್ಟು ದೂರ ಬಂದಿದ್ದಾಗ್ಯೂ ಹೇಳಿದರು. ನಾಗಚೈತನ್ಯ, ಸಾಯಿ ಪಲ್ಲವಿ ನಟನೆಯನ್ನು ಬಹುವಾಗಿ ಹೊಗಳಿದರು ಅಮೀರ್ ಖಾನ್.

ಅಮೀರ್ ಖಾನ್‌ ಬಗ್ಗೆ ನಾಗ ಚೈತನ್ಯ ಮಾತು

ಅಮೀರ್ ಖಾನ್‌ ಬಗ್ಗೆ ನಾಗ ಚೈತನ್ಯ ಮಾತು

ಅಮೀರ್ ಖಾನ್ ಬಗ್ಗೆ ಮಾತನಾಡಿದ ನಟ ನಾಗ ಚೈತನ್ಯ, ''ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಮೀರ್ ಖಾನ್‌ ಜೊತೆಗೆ ನನ್ನ ಗೆಳೆತನ ಗಾಢವಾಯ್ತು. ಸಿನಿಮಾದ ಟ್ರೇಲರ್ ಅನ್ನು ಅಮೀರ್ ಖಾನ್‌ಗೆ ತೋರಿಸಿದೆ ಅವರಿಗೆ ಟ್ರೇಲರ್ ಬಹುವಾಗಿ ಇಷ್ಟವಾಯ್ತು. ಹೀಗೆ ಮಾತನಾಡುತ್ತಾ, ಭಾನುವಾರ ನಮ್ಮ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇದೆ ಎಂದು ಹೇಳಿದೆ ಕೂಡಲೇ ಅವರೇ ಸ್ವಯಂ ಪ್ರೇರಿತವಾಗಿ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದರು. ಅಂತೆಯೇ ಈಗ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದಾರೆ ಎಂದರು ನಾಗಚೈತನ್ಯ.

'ಲಾಲ್‌ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಒಟ್ಟಿಗೆ ನಟನೆ

'ಲಾಲ್‌ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಒಟ್ಟಿಗೆ ನಟನೆ

ನಾಗ ಚೈತನ್ಯ ಹಾಗೂ ಅಮಿರ್ ಖಾನ್ ಒಟ್ಟಿಗೆ 'ಲಾಲ್ ಸಿಂಗ್ ಚಡ್ಡಾ' ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. 'ಲಾಲ್ ಸಿಂಗ್ ಚಡ್ಡಾ' ಸಿನಿಮಾವು ಇಂಗ್ಲೀಷ್‌ನ 'ಫಾರೆಸ್ಟ್ ಗಂಪ್' ಪುಸ್ತಕದ ಸಿನಿಮಾ ರೂಪವಾಗಿದೆ. 'ಫಾರೆಸ್ಟ್ ಗಂಪ್' ಹೆಸರಿನಲ್ಲಿ ಈಗಾಗಲೇ ಹಾಲಿವುಡ್‌ನಲ್ಲಿ ಸಿನಿಮಾ ಬಂದಿದ್ದು, ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಹಲವು ಆಸ್ಕರ್ ಪ್ರಶಸ್ತಿಗಳನ್ನು ಸಹ ದೋಚಿದೆ. 'ಲಾಲ್ ಸಿಂಗ್ ಚಡ್ಡಾ' ಸಿನಿಮಾವು ಡಿಸೆಂಬರ್ 25 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ನಾಗ ಚೈತನ್ಯ, ಅಮೀರ್ ಖಾನ್‌ರ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ.

ಶೇಖರ್ ಕಮ್ಮುಲ ನಿರ್ದೇಶನದ ಒಂಬತ್ತನೇ ಸಿನಿಮಾ

ಶೇಖರ್ ಕಮ್ಮುಲ ನಿರ್ದೇಶನದ ಒಂಬತ್ತನೇ ಸಿನಿಮಾ

ಸಾಯಿ ಪಲ್ಲವಿ, ನಾಗ ಚೈತನ್ಯ ನಟಿಸಿರುವ 'ಲವ್ ಸ್ಟೋರಿ' ಸಿನಿಮಾವು ಸೆಪ್ಟೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಶೇಖರ್ ಕಮ್ಮುಲ ಜೊತೆಗೆ ನಾಗ ಚೈತನ್ಯಗೆ ಇದು ಮೊದಲ ಸಿನಿಮಾ, ಸಾಯಿ ಪಲ್ಲವಿಗೆ ಇದು ಎರಡನೇ ಸಿನಿಮಾ. 'ಆನಂದ್', 'ಹ್ಯಾಪಿ ಡೇಸ್', 'ಗೋದಾವರಿ', 'ಲೀಡರ್', 'ಫಿದಾ' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Actor Aamir Khan attended Telugu movie 'Love Story' pre-release event in Hyderabad. He usually did not attend movie functions but he came to Hyderabad for Telugu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X