ಆಮೀರ್ ಖಾನ್ ಫೋನ್ ಮಾಡಿ ನಾಗ ಚೈತನ್ಯಗೆ ಹೇಳಿದ್ದೇನು?, 'ಲಾಲ್ ಸಿಂಗ್ ಚಡ್ಡಾ' ಬಗ್ಗೆ ಚೈ ಮಾತು

ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಇತ್ತೀಚಿಗೆ ವೈಯಕ್ತಿಕ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪತ್ನಿ ಸಮಂತಾ ಅವರಿಂದ ದೂರ ಆಗಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಆದರೂ ನಾಗ ಚೈತನ್ಯ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ ಸದ್ಯ ಬಹುನಿರೀಕ್ಷೆಯ ಎರಡು ಸಿನಿಮಾಗಳ ಬಿಡುಗಡೆಗೆ ಕಾಯುತ್ತಿದ್ದಾರೆ. ಒಂದು ತೆಲುಗು ಸಿನಿಮಾವಾದರೆ ಮತ್ತೊಂದು ಚೊಚ್ಚಲ ಬಾಲಿವುಡ್ ಚಿತ್ರ.

ನಾಗ ಚೈತನ್ಯ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತನ್ನ ಚೊಚ್ಚಲ ಬಾಲಿವುಡ್ ಸಿನಿಮಾವನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಜೊತೆ ಪ್ರಾರಂಭಿಸಿದ್ದಾರೆ. ಹೌದು, ನಾಗ ಚೈತನ್ಯ ಆಮೀರ್ ಕಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಭಾಗಿಯಾದ ಬಗ್ಗೆ ನಟ ನಾಗ ಚೈತನ್ಯ ಬಹಿರಂಗ ಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಾಗ ಚೈತನ್ಯ ಚಿತ್ರದಲ್ಲಿ ನಟಿಸುವಂತೆ ಕೇಳಲು ಸ್ವತಃ ಆಮೀರ್ ಖಾನ್ ಅವರೇ ಕರೆ ಮಾಡಿದ್ದರು ಎಂದು ಹೇಳಿದ್ದಾರೆ. ಆಮೀರ್ ಖಾನ್ ಜೊತೆ ಸಿನಿಮಾ ಮಾಡುವ ಯಾವುದೇ ಪ್ಲಾನ್ ಇರಲಿಲ್ಲ, ಆದರೆ ಲಾಲ್ ಸಿಂಗ್ ಚಡ್ಡಾ ಮೂಲಕ ಸಾಧ್ಯವಾಯಿತು ಎಂದು ಹೇಳಿದ್ದಾರೆ.

Aamir Khan personally called Naga Chaitanya For offer to Laal Singh Chaddha

ಆಮೀರ್ ಖಾನ್ ಅವರಿಂದ ಕರೆ ಬಂದು ಮತ್ತು ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡಿದೆವು. ಅಂತಿಮ ಸುತ್ತಿನ ಮಾತುಕತೆ ಮುಂಬೈಗೆ ಹೋದೆ. ಸದ್ಯದಲ್ಲೇ ಲಾಲ್ ಸಿಂಗ್ ಚಡ್ಡಾ ಮೂಲಕ ಬರ್ತಿದ್ದೀನಿ" ಎಂದು ಹೇಳಿದರು. ಬಳಿಕ ಮಾತು ಮುಂದುವರೆಸಿ ಆಮೀರ್ ನನ್ನ ಸಿನಿಮಾ ನೋಡಿ ಪ್ರಭಾವಿತರಾಗಿದ್ದರು. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಆ ಪಾತ್ರಕ್ಕೆ ನಾನು ಸೂಕ್ತ ಎಂದು ಭಾವಿಸಿದ್ದರು" ಎಂದು ನಾಗ್ ಬಹಿರಂಗ ಪಡಿಸಿದ್ದಾರೆ.

ಚಿತ್ರದಲ್ಲಿ ನಾಗ ಚೈತನ್ಯ ಆಮೀರ್ ಖಾನ್ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರಕ್ಕೆ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಚಿತ್ರದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ.

ಬಹುನಿರೀಕ್ಷೆಯ ಈ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಆಮೀರ್ ಖಾನ್ ಚಿತ್ರದ ಬಗ್ಗೆ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿಂದಿನ ಸಿನಿಮಾದ ಸೋಲಿನಿಂದ ಕಂಗೆಟ್ಟಿರುವ ಆಮೀರ್ ಖಾನ್ ಈ ಸಿನಿಮಾ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಾರಾ ಎಂದು ಕಾದುನೋಡಬೇಕು.

ಇನ್ನು ನಟ ನಾಗ ಚೈತನ್ಯ ತೆಲುಗಿನಲ್ಲಿ ಲವ್ ಸ್ಟೋರಿ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ನಾಕಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು, ಟೀಸರ್ ಮತ್ತು ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಿನಿಮಾ ಸೆಪ್ಟಂಬರ್ 24ರಂದು ತೆರೆಮೇಲೆ ಬರಲು ಸಜ್ಜಾಗಿದೆ.

More from Filmibeat

English summary
Bollywood Actor Aamir Khan personally called Naga Chaitanya For offerto Laal Singh Chaddha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X