ಬಾಲಿವುಡ್ ಸ್ಟಾರ್ ನಟ ಆರ್‌ಆರ್‌ಆರ್ ಸಿನಿಮಾದಲ್ಲಿ?
ತೆಲುಗಿನ ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ನಲ್ಲಿ ಈಗಾಗಲೇ ಇಬ್ಬರು ಸ್ಟಾರ್ ನಟರು ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಈಗ ಮತ್ತೊಬ್ಬ ಸ್ಟಾರ್ ನಟ ಆರ್‌ಆರ್‌ಆರ್ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್‌ನ ನಟ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಅವರುಗಳು ಆರ್‌ಆರ್ಆರ್ ಸಿನಿಮಾದಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಇನ್ನೊಬ್ಬ ಸ್ಟಾರ್ ಬಾಲಿವುಡ್ ನಟ ಆರ್‌ಆರ್‌ಆರ್ ತಂಡವನ್ನು ಸೇರಿಕೊಳ್ಳುವ ಸಧ್ಯತೆ ದಟ್ಟವಾಗಿದೆ.
ನಟ ಅಮೀರ್ ಖಾನ್ ಅನ್ನು ರಾಜಮೌಳಿ ಸಂಪರ್ಕಿಸಿದ್ದು, ಸಿನಿಮಾದಲ್ಲಿ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನನು ಪರಿಚಯಿಸುವ ಹಿನ್ನೆಲೆ ಧ್ವನಿ ನೀಡಲು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಅಮೀರ್ ಖಾನ್, ಸಿನಿಮಾಗಳಲ್ಲಿ ಅತಿಥಿ ಪಾತ್ರ ನಿರ್ವಿಸುವುದು ಬಹು ಅಪರೂಪ. ಶಾರುಖ್ ಖಾನ್ ಕೋರಿಕೆಯನ್ನೇ ಮನ್ನಿಸಿರಲಿಲ್ಲ ಅಮೀರ್ ಖಾನ್. ಶಾರುಖ್ ಖಾನ್, ಸಲ್ಮಾನ್ ಖಾನ್ ರವುಗಳು ಕೇಳಿಕೊಂಡಾಗಲು ಅಮೀರ್ ಖಾನ್ ಅತಿಥಿ ಪಾತ್ರ ಮಾಡಿರಲಿಲ್ಲ. ಈಗ ತೆಲುಗು ಸಿನಿಮಾಕ್ಕೆ ಹಿನ್ನೆಲೆ ಧ್ವನಿ ನೀಡಲು ಒಪ್ಪಿಕೊಂಡಿದ್ದರ ಬಗ್ಗೆ ಚಿತ್ರರಂಗದಲ್ಲಿಯೇ ಅನುಮಾನಗಳು ವ್ಯಕ್ತವಾಗುತ್ತಿದೆ.
Recommended Video
ಆರ್ಆರ್ಆರ್ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಆಯಾ ಭಾಷೆಗಳಲ್ಲಿ ಆಯಾ ಭಾಷೆಯ ಸ್ಟಾರ್ ನಟರುಗಳಿಂದ ಪಾತ್ರ ಪರಿಚಯಕ್ಕಾಗಿ ಹಿನ್ನೆಲೆ ಧ್ವನಿ ನೀಡಿಸುವ ಪ್ರಯತ್ನ ರಾಜಮೌಳಿ ಮಾಡುತ್ತಿದ್ದಾರೆ.


Click it and Unblock the Notifications











