ನಾಗಾರ್ಜುನ ಮನೆಯಲ್ಲಿ ಆಮೀರ್ ಖಾನ್; ನಾಗ ಚೈತನ್ಯ-ಸಾಯಿ ಪಲ್ಲವಿ ಜೊತೆ ಡಿನ್ನರ್ ಪಾರ್ಟಿ

ಬಾಲಿವುಡ್ ಖ್ಯಾತ ನಟ ಮಿಸ್ಟರ್ ಪರ್ಫೆಕ್ಷನ್ ಅಮೀರ್ ಖಾನ್ ಇತ್ತೀಚಿಗಷ್ಟೆ ಸೌತ್ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ಆಮೀರ್ ಖಾನ್ ತೆಲುಗಿನ ಖ್ಯಾತ ನಟ ನಾಗಾರ್ಜುನ ಪತ್ರ ನಾಗ ಚೈತನ್ಯ ನಟನೆಯ ಲವ್ ಸ್ಟೋರಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹಾಜರಿದ್ದರು. ಆಮೀರ್ ಖಾನ್ ಎಂಟ್ರಿ ಸಿನಿಮಾತಂಡಕ್ಕೆ ಸಂತಸದ ಜೊತೆಗೆ ಮತ್ತಷ್ಟು ಬಲ ಬಂದಿತ್ತು.

ಅಂದಹಾಗೆ ಆಮೀರ್ ಖಾನ್ ಅಕ್ಕಿನೇನಿ ಕುಟುಂಬದ ಜೊೆತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವತಃ ಆಮೀರ್ ಖಾನ್ ಅವರೇ ಫೋನ್ ಮಾಡಿ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುವಂತೆ ಚೈ ಬಳಿ ಕೇಳಿಕೊಂಡಿದ್ದರು ಎಂದು ನಾಗ ಚೈತನ್ಯ ಬಹಿರಂಗ ಪಡಿಸಿದ್ದರು.

ಇದೀಗ ನಾಗಾರ್ಜುನ ಮನೆಯಲ್ಲಿ ಆಮೀರ್ ಖಾನ್ ಪಾರ್ಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಮೀರ್ ಖಾನ್ ನಾಗಾರ್ಜುನ ಮನೆಗೂ ಭೇಟಿ ಕೊಟ್ಟಿದ್ದರು. ಆಮೀರ್ ಖಾನ್ ಭೇಟಿ ಅಕ್ಕಿನೇನಿ ಕುಟುಂಬದ ಸಂತಸ ಹೆಚ್ಚಿಸಿದೆ. ಅಂದಹಾಗೆ ಪಾರ್ಟಿಯಲ್ಲಿ ನಾಗ ಚೈತನ್ಯ, ನಾಗಾರ್ಜುನ ಜೊತೆ ಸಾಯಿ ಪಲ್ಲವಿ ಮತ್ತು ನಿರ್ದೇಶಕ ಶೇಖರ್ ಕಮ್ಮುಲ ಕೂಡ ಭಾಗಿಯಾಗಿದ್ದರು.

Aamir Khan visits Nagarjuna house, enjoy dinner party with Naga Chaitanya and Sai Pallavi

ಅಂದಹಾಗೆ ಫೋಟೋದಲ್ಲಿ ಸಮಂತಾ ಗೈರು ಎದ್ದು ಕಾಣುತ್ತಿದೆ. ನಾಗ ಚೈತನ್ಯರಿಂದ ಸಮಂತಾ ದೂರ ಆಗಿದ್ದಾರೆ ಎನ್ನುವ ವದಂತಿಗೆ ಈ ಫೋಟೋ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಲವ್ ಸ್ಟೋರಿ ಸಿನಿಮಾತಂಡ ಮತ್ತು ಅಕ್ಕಿನೇನಿ ಕುಟುಂಬದ ಜೊತೆ ಆಮೀರ್ ಖಾನ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಆಮೀರ್ ಖಾನ್, ನಾಗ್ ಚೈತನ್ಯ ಅವರನ್ನು ಹಾಡಿ ಹೊಗಳಿದ್ದರು. ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ನಡೆದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಆಮೀರ್ ಖಾನ್, "ನಾನು ನಾಗ ಚೈತನ್ಯ ಅವರ ಪೋಷಕರಿಗೆ ಏನನ್ನಾದರು ತಿಳಿಸಲು ಬಯಸಿದ್ದೆ ಆದರೆ ನೇರವಾಗಿ ಬಂದು ಅವರ ಕುಟುಂಬಕ್ಕೆ ಹೇಳಲು ನಿರ್ಧರಿಸಿದೆ. ಚೈ ಒಬ್ಬ ಉತ್ತಮ ನಟ ಮಾತ್ರವಲ್ಲ, ಹೃದಯವಂತ. ಲವ್ ಸ್ಟೋರಿ ಟ್ರೈಲರ್ ನೋಡಿ, ಸಿನಿಮಾ ಕೂಡ ನೋಡುತ್ತೇನೆ" ಎಂದು ಹೇಳಿದ್ದರು.

ಅಂದಹಾಗೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಸಿನಿಮಾ ಸೆಪ್ಟಂಬರ್ 24ರಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ಮತ್ತು ಹಾಡಿನ ಮೂಲಕ ಅಭಿಮಾನಿಗಳ ಹೆಚ್ಚಿಸಿದ್ದ ಲವ್ ಸ್ಟೋರಿ ಸಿನಿಮಾ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ.

More from Filmibeat

English summary
Bollywood Actor Aamir Khan visites to Nagarjuna house, enjoyed dinner party with Naga Chaitanya and Sai Pallavi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X