For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್-ಪೂಜಾ ಹೆಗ್ಡೆಯ ಸುಂದರ ಪ್ರೇಮ ಕಾವ್ಯ!

  |

  ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ಹಲವು ಕಾರಣಕ್ಕೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದಂತೆಯೇ ಚಿತ್ರದ ಕುತೂಹಲಕಾರಿ ವಿಚಾರಗಳನ್ನು ಚಿತ್ರ ತಂಡ ಹಂಚಿಕೊಳ್ಳುತ್ತಾ ಇದೆ.

  ರಾಧೆ ಶ್ಯಾಮ್‌ಗಾಗಿ ಕಾಯುತ್ತಿದ್ದವರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಸದ್ಯ ರಿಲೀಸ್‌ ಆಗಿರುವ ಹಾಡಿನ ಟೀಸರ್. ಈ ಟೀಸರ್‌ ಸಿನಿಮಾದ ಮೇಲೆ ಮತ್ತು ಪ್ರಭಾಸ್ ಹಾಗು ಪೂಜಾ ಹೆಗ್ಡೆ ಪಾತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ.

  ಚಿತ್ರದಲ್ಲಿ ಪ್ರಭಾಸ್‌ ಹಾಗು ಪೂಜಾ ಹೆಗ್ಡೆ ಹೇಗೆ ಕಾಣಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಟೀಸರ್ ಮತ್ತೊಂದು ಉದಾಹರಣೆ ಆಗಿದೆ.

  ರಾಧೆಗಾಗಿ ಹಾಡಿದ ಶ್ಯಾಮ!

  ರಾಧೆಗಾಗಿ ಹಾಡಿದ ಶ್ಯಾಮ!

  ರಾಧೆಶ್ಯಾಮ್‌ ಚಿತ್ರ ಒಂದು ಸುಂದರ ಪ್ರೇಮಕಾವ್ಯ ಎನ್ನುವುದು ಈಗಾಲೇ ಗೊತ್ತಾಗಿದೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಮತ್ತು ಹಾಡುಗಳು ಈ ರಾಧೆ ಶ್ಯಾಮ್‌ ಇಬ್ಬರ ಪ್ರೇಮ್‌ ಕಹಾನಿ ಬಗ್ಗೆ ಸಾರಿ ಸಾರಿ ಹೇಳುತ್ತಿವೆ. ಈಗ ಈ ಸಾಲಿಗೆ 'ಆಶಿಕಿ ಆಗಯಿ' ಹಾಡು ಕೂಡ ಸೇರಿಕೊಂಡಿದೆ.

  ಸದ್ಯ ಆಶಿಕಿ ಹಾಡಿನ ಸಣ್ಣ ತುಣುಕು ರಿಲೀಸ್‌ ಆಗಿದೆ. ಈ ಹಾಡಿನಲ್ಲಿ ಕೇವಲ ಎರಡು ದೃಶ್ಯದ ತುಣುಕುಗಳನ್ನು ಮಾತ್ರ ಸೇರಿಸಿದೆ ಚಿತ್ರ ತಂಡ. ಮೊದಲನೆಯದಾಗಿ ನಟಿ ಪೂಜಾ ಹೆಗ್ಡೆ ರೈಲಿನಿಂದ ಇಳಿಯುವುದು, ಆಕೆಗಾಗಿ ನಟ ಪ್ರಭಾಸ್ ಬೈಕ್‌ ಬಳಿ ಕಾದಿರುವುದು. ನಂತರ ಬೀಚ್ ಬಳಿಯಲ್ಲಿ ಇರುವ ದೃಶ್ಯಗಳನ್ನು ಮಾತ್ರ ಟೀಸರ್‌ನಲ್ಲಿ ಬಿಟ್ಟು ಕೊಡಲಾಗಿದೆ. ಜೊತೆಗೆ 'ಏ ಹಮೇ ಆಶಿಕೀ... ಆಗಯಿ..' ಎನ್ನುವ ಒಂದೇ ಒಂದು ಸಾಲಿನ ಸಾಹಿತ್ಯ ಮಾತ್ರ ಇದೆ.

  36 ಸೆಕೆಂಡಿನ ಟೀಸರ್‌ನಲ್ಲಿ ರಾಧೆ ಶ್ಯಾಮನ ಪ್ರೇಮ ಕಾವ್ಯ!

  36 ಸೆಕೆಂಡಿನ ಟೀಸರ್‌ನಲ್ಲಿ ರಾಧೆ ಶ್ಯಾಮನ ಪ್ರೇಮ ಕಾವ್ಯ!

  ಕೇವಲ 36 ಸೆಕೆಂಡಿನ ಈ ಟೀಸರ್‌ನಲ್ಲಿ ರಾಧೆ ಶ್ಯಾಮನ ಪ್ರೇಮ ಕಾವ್ಯ ಅನಾವರಣಗೊಂಡಿದೆ. ಈ ಚಿತ್ರ ಸಂಪೂರ್ಣವಾಗಿ ಒಂದು ಮ್ಯೂಜಿಕಲ್‌ ಪ್ರೇಮ್‌ ಕಹಾನಿ. ಹಾಗಾಗಿ ಚಿತ್ರದ ಸಾಲು ಸಾಲು ಹಾಡುಗಳು ರಿಲೀಸ್ ಆಗುತ್ತಿವೆ. ಇದೀಗ ರಿಲೀಸ್‌ ಆಗಿರುವ ಆಶಿಕಿ ಹಾಡಿನ ಟೀಸರ್‌ ಕೂಡ ಹೆಚ್ಚಿನ ಗಮನ ಸೆಳೆದಿದೆ.

  ಸಾಲು ಸಾಲು ಅಪ್ಡೇಟ್ ಕೊಡುತ್ತಿರುವ ರಾಧೆಶ್ಯಾಮ್!

  ಸಾಲು ಸಾಲು ಅಪ್ಡೇಟ್ ಕೊಡುತ್ತಿರುವ ರಾಧೆಶ್ಯಾಮ್!

  ರಾಧೆ ಶ್ಯಾಮ್ ಚಿತ್ರದ ಅಪ್ಡೇಟ್‌ಗಾಗಿ ಪ್ರಭಾಸ್‌ ಅಭಿಮಾನಿಗಳು ಮತ್ತು ಪ್ರೇಕ್ಷಕರು ಕಾಯುತ್ತಿದ್ದರು. ಪ್ರಭಾಸ್‌ ಹುಟ್ಟು ಹಬ್ಬಕ್ಕೆ ಒಂದು ಟೀಸರ್‌ ಮಾತ್ರ ರಿಲೀಸ್‌ ಆಗಿತ್ತು. ಆದರೆ ಅದು ಪ್ರಭಾಸ್‌ ಅಭಿಮಾನಿಗಳಿಗೆ ಸಾಕಾಗಿಲ್ಲ. ಹಾಗಾಗಿ ಟ್ರೇಲರ್ ಅಥವಾ ಹಾಡು ರಿಲೀಸ್‌ಗಾಗಿ ಪ್ರಭಾಸ್‌ ಅಭಿಮಾನಿಗಳು ಕಾಯುತ್ತಾ ಇದ್ದರು. ಈಗ ಚಿತ್ರ ತಂಡ ಚಿತ್ರದ ಸಾಲು ಸಾಲು ಹಾಡುಗಳನ್ನು ರಿಲೀಸ್‌ ಮಾಡಲು ಸಿದ್ಧವಾಗಿದೆ.

  ಡಿಸೆಂಬರ್ 1ರಂದು ಆಶಿಕಿ ಪೂರ್ತಿ ಹಾಡು ರಿಲೀಸ್!

  ಡಿಸೆಂಬರ್ 1ರಂದು ಆಶಿಕಿ ಪೂರ್ತಿ ಹಾಡು ರಿಲೀಸ್!

  2022 ಜನವರಿ 14ಕ್ಕೆ ರಾಧೆ ಶ್ಯಾಮ್‌ ಚಿತ್ರದ ರಿಲೀಸ್ ದಿನಾಂಕ ನಿಗದಿ ಆಗಿದೆ. ಆದರೆ ಅದನ್ನೂ ಮುನ್ನ ಚಿತ್ರದ ಹಲವು ಕಂಟೆಂಟ್‌ಗಳ ಮೂಲಕ ನಿರೀಕ್ಷೆ ದುಪ್ಪಟ್ಟ ಮಾಡುವ ಯೋಜನೆಯಲ್ಲಿದೆ ಚಿತ್ರ ತಂಡ. ಅಂತೆಯೇ ಸದ್ಯ ರಿಲೀಸ್‌ ಆಗಿರುವ ಚಿತ್ರದ ಹಾಡಿನ ಟೀಸರ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಈ ಡಿಸೆಂಬರ್ 1ರಂದು ತೆರೆಗೆ ಬರಲಿದೆ. ಟೀಸರ್‌ ನೋಡಿದರವರು ಪೂರ್ತಿ ಹಾಡು ನೋಡಲು ಕಾಯುತ್ತಲಿದ್ದಾರೆ.

  English summary
  Aashiqui Aa Gayi Song Glimps out from Prabhas Starerr Radhe Shyam!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X