ಬಿಗ್‌ಬಾಸ್ ವಿನ್ನರ್ ಅಭಿಜಿತ್ ಗೆ ಸಿಕ್ಕಿತು ಭರ್ಜರಿ ಆಫರ್
ತೆಲುಗು ಬಿಗ್‌ಬಾಸ್ 4 ಈಗಷ್ಟೆ ಮುಗಿದಿದ್ದು, ಅಭಿಜಿತ್ ದುದ್ದಲ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅತಿ ಹೆಚ್ಚು ಬಾರಿ ನಾಮಿನೇಟ್ ಆಗಿದ್ದರೂ ಸಹ ಜನರ ಪ್ರೀತಿ ಸಂಪಾದಿಸಿ ಶೋ ನಲ್ಲಿ ಉಳಿದುಕೊಂಡಿದ್ದ ಅಭಿಜಿತ್ ಕೊನೆಗೆ ಗೆಲುವು ಸಂಪಾದಿಸಿದ್ದಾರೆ.
ಬಿಗ್‌ಬಾಸ್ ಗೆದ್ದವರಿಗೆ ಸಾಕಷ್ಟು ಅವಕಾಶಗಳು ಸಿಗುವುದು ಸಾಮಾನ್ಯವೇ. ಅಂತೆಯೇ ಅಭಿಜಿತ್ ಅನ್ನು ಸಹ ಹಲವು ಅವಕಾಶಗಳು ಹುಡುಕಿ ಬರುತ್ತಿವೆ.
ನಟರಾಗಿ ಸಿನಿಮಾರಂಗಕ್ಕೆ ಬಂದಿದ್ದ ಅಭಿಜಿತ್ ದೊಡ್ಡ ಯಶಸ್ಸನ್ನೇನೂ ಕಂಡಿರಲಿಲ್ಲ, ಆದರೆ ಈಗ ಬಿಗ್‌ಬಾಸ್‌ನಿಂದ ಅವರ ಅದೃಷ್ಟ ಬದಲಾದಂತಿದೆ. ದೊಡ್ಡ ನಿರ್ಮಾಣ ಸಂಸ್ಥೆಯಿಂದಲೇ ಆಫರ್ ಒಂದು ಅಭಿಜಿತ್ ಅನ್ನು ಹುಡುಕಿ ಬಂದಿದೆ ಎನ್ನಲಾಗುತ್ತಿದೆ.

ಅಭಿಜಿತ್ ಅವರ ಹೊಸ ಸಿನಿಮಾ ಜನವರಿಯಲ್ಲಿ ಘೋಷಣೆ ಆಗಲಿದೆ ಎನ್ನಲಾಗುತ್ತಿದ್ದು, ಅಕ್ಕಿನೇನಿ ನಾಗಾರ್ಜುನ ಅವರ ಪ್ರೊಡಕ್ಷನ್ ಹೌಸ್‌ನಿಂದಲೇ ಈ ಸಿನಿಮಾ ನಿರ್ಮಾಣವಾಗಲಿದೆ.
ಎಂಟು ವರ್ಷದ ಹಿಂದೆ ಅಭಿಜಿತ್ 'ಲೈಫ್ ಈಸ್ ಬ್ಯೂಟಿಫುಲ್' ಹೆಸರಿನ ಸಿನಿಮಾ ಮಾಡಿದ್ದರು. ಸಿನಿಮಾ ಗಮನ ಸೆಳೆದಿತ್ತಾದರೂ ಅಭಿಜಿತ್‌ಗೆ ಹೆಚ್ಚಿನ ಆಫರ್‌ಗಳು ಬರಲಿಲ್ಲ. ಬಿಗ್‌ಬಾಸ್‌ನಲ್ಲಿಯೇ ಅಭಿಜಿತ್ ಹೇಳಿದ್ದಂತೆ, 'ಕ್ರಿಕೆಟ್‌ನಲ್ಲಿ ಎರಡು ಇನ್ನಿಂಗ್ಸ್‌ಗಳಿದ್ದಂತೆ ಜೀವನದಲ್ಲೂ ಎರಡು ಇನ್ನಿಂಗ್ಸ್‌ಗಳಿರುತ್ತವೆ, ನನ್ನ ಎರಡನೇ ಇನ್ನಿಂಗ್ಸ್ ಇನ್ನಷ್ಟೆ ಆರಂಭವಾಗಬೇಕಿದೆ' ಎಂದಿದ್ದರು.
ಅಂತೆಯೇ ಅಭಿಜಿತ್‌ಗೆ ಹೊಸ ಸಿನಿಮಾ ದೊರೆತಿದ್ದು, ಎಂಟು ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗೆ ಅಭಿಜಿತ್ ಇಳಿಯಲಿದ್ದಾರೆ.


Click it and Unblock the Notifications











