100 ಕೋಟಿ ಬೆಲೆಯ ಬಂಗಲೆಯ ಒಡೆಯ ಅಲ್ಲು ಅರ್ಜುನ್!
ಸಿನಿಮಾ ಮಂದಿ ಅಂದರೆ ಹಾಗೆ. ಅವರು ತಮ್ಮ ಜೀವನ ಶೈಲಿಯ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರು ಹಾಕಿಕೊಳ್ಳುವ ಬಟ್ಟೆಗಳಿಂದ ಹಿಡಿದು, ಕಾರು, ಮನೆ ಎಲ್ಲದರಲ್ಲಿಯೂ ವಿಶೇಷತೆ ಇರುತ್ತದೆ. ಅದನ್ನು ತಿಳಿಯುವ ಅವರನ್ನು ಫಾಲೋ ಮಾಡುವವರಿಗೂ ಕೂಡ ಅಷ್ಟೇ ಆಸಕ್ತಿ ಇರುತ್ತದೆ. ಪುಷ್ಪ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ ಸಿಕ್ಕಾಪಟ್ಟೆ ಹೈಪ್ ಹುಟ್ಟು ಹಾಕಿದ್ದಾರೆ. ಹಾಗಿದ್ದರೆ ಅಲ್ಲು ಅರ್ಜುನ್ ಬಗ್ಗೆ ಒಂದಷ್ಟು ಆಸಕ್ತಿಕರ ಸಂಗತಿಗಳು ಇಲ್ಲಿವೆ. ಮುಂದೆ ಓದಿ.
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ನಟ ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಅಂತಲೇ ಹೆಸರುವಾಸಿ. ಅಲ್ಲು ಸದಾ ವಿಭಿನ್ನ ಸ್ಟೈಲ್‌ನಿಂದಲೇ ಸದ್ದು ಮಾಡುತ್ತಿರುತ್ತಾರೆ. ಅಲ್ಲು ಅರ್ಜುನ್ ಹೊಸ ಸಿನಿಮಾ ಬರ್ತಿದೆ ಅಂದರೆ ಸಾಕು ಅವರ ಸ್ಟೈಲ್ ಬಗ್ಗೆಯೇ ಹೆಚ್ಚಿನ ನಿರೀಕ್ಷೆಗಳು ಮೂಡುತ್ತವೆ.
ಈ ಸ್ಟೈಲಿಶ್ ಸ್ಟಾರ್ ಸೈಫ್ ಸ್ಟೈಲ್ ಬಗ್ಗೆ ಕುತೂಹಲಕಾರಿ ಮಾಹಿತಿ ಒಂದು ಹರಿದಾಡುತ್ತಿದೆ. ಅಲ್ಲು ಅರ್ಜುನ್ ಮನೆ ಎಷ್ಟು ಬೆಲೆಯುಳ್ಳದ್ದು ಎನ್ನುವ ಬಗ್ಗೆ ಮಾಹಿತಿ ಹೊರ ಬಂದಿದೆ. ಇತ್ತೀಚೆಗೆ ತಮ್ಮ ಐಶಾರಾಮಿ ವ್ಯಾನಿಟಿ ವ್ಯಾನ್ ಮೂಲಕ ಸದ್ದು ಮಾಡಿದ್ದರು. ಈಗ ಮನೆಯ ವಿಚಾರದಲ್ಲಿ ಸುದ್ದಿ ಆಗುತ್ತಿದ್ದಾರೆ.

100 ಕೋಟಿ ಮನೆಯಲ್ಲಿ ಅಲ್ಲು ಅರ್ಜುನ್ ವಾಸ!
ನಟ ಅಲ್ಲು ಅರ್ಜುನ್ ಅವರ ಮನೆಯನ್ನು ಒಂದಷ್ಟು ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವೂ ಕೂಡ ನೋಡಿರುತ್ತೀರಿ. ಫೋಟೋಗಳಲ್ಲಿ ಇದೊಂದು ಐಶಾರಾಮಿ ಬಂಗಲೆ ಎನ್ನುವುದು ಗೊತ್ತಾಗುತ್ತದೆ. ಆದರೆ ಈ ಬಂಗಲೆ ನಿರ್ಮಾಣ ಬೆಲೆಯನ್ನು ಕೇಳಿದರೆ ಶಾಕ್ ಆಗುತ್ತದೆ. ಯಾಕೆಂದರೆ ಅಲ್ಲು ಅರ್ಜುನ್ ಮನೆ ಬರೋಬ್ಬರಿ 100 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆಯಂತೆ. ನೂರು ಕೋಟಿ ಬೆಲೆಯ ಭವ್ಯ ಬಂಗಲೆಯಲ್ಲಿ ಅಲ್ಲು ಅರ್ಜುನ್ ಕುಟುಂಬ ವಾಸ ಇದೆ.

ಎರಡು ಎಕರೆ ಜಾಗದಲ್ಲಿ ಭವ್ಯ ಬಂಗಲೆ!
ಹೈದ್ರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಲ್ಲು ಅರ್ಜುನ್ ಮನೆ ಇದೆ. ಇದನ್ನು ಮನೆ ಎಂದು ಹೇಳಲು ಆಗುವುದಿಲ್ಲ. ಬಂಗಲೆ ಎಂದೇ ಹೇಳಬೇಕು. ಅಷ್ಟು ದೊಡ್ಡದಾಗಿ ಇದೆ ಅಲ್ಲು ಮನೆ. ಎರಡು ಎಕರೆಯ ವಿಶಾಲವಾದ ಜಾಗದಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡಲಾಗಿದೆ. ಈ ಮನೆಯಲ್ಲಿ ಅಲ್ಲು ಅರ್ಜುನ್ ಪತ್ನಿ, ಮಕ್ಕಳೊಂದಿಗೆ ವಾಸ ಇರುತ್ತಾರೆ. ಮನೆಯನ್ನು ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ವಿಶೇಷ ಎಂದರೆ ಈ ಬಂಗಲೆಯನ್ನು ಹೆಸರಾಂತ ಆರ್ಕಿಟೆಕ್ಟ್ ಆಮೀರ್ ಶರ್ಮಾ ನಿರ್ಮಾಣ ಮಾಡಿದ್ದಾರೆ.

ಕೋಟಿ ಬೆಲೆಯ ಕಾರು, ವ್ಯಾನಿಟಿ ವ್ಯಾನ್!
ಅಲ್ಲು ಅರ್ಜುನ್ ಮನೆಗೆ 100 ಕೋಟಿ. ಅವರ ಲೈಫ್ ಸ್ಟೈಲ್ ಕೂಡ ಹಾಗೆ ಇದೆ. ಅಲ್ಲು ಅರ್ಜುನ್ ಕಾರುಗಳು ಕೋಟಿ ಕೋಟಿ ಬೆಲೆ ಬಾಳುತ್ತವೆ. ಸದ್ಯಕ್ಕೆ ಅಲ್ಲು ಅರ್ಜುನ್ ಬಳಿ ಇರುವ ಹೆಚ್ಚು ದುಬಾರಿ ಕಾರು ಎಂದರೆ. 1.74 ಕೋಟಿಯ ರೇಂಜ್ ರೋವರ್ ಕಪ್ಪು ಕಾರು. ಜೊತೆಗೆ 1.2 ಕೋಟಿ ಬೆಲೆಯ ಎಕ್ಸ್ ಜೆ ಎಲ್ ಕಾರು ಕೂಡ ಇದೆ. ಇದರ ಜೊತೆಗೆ 7 ಕೋಟಿ ಬೆಲೆ ಬಾಳುವ ವ್ಯಾನಿಟಿ ವ್ಯಾನ್ ಇದೆ. ವ್ಯಾನಿಟಿ ವ್ಯಾನ್ ಅತ್ಯಂತ ಐಶಾರಾಮಿಯಾಗಿದೆ.

ಖಾಸಗಿ ಜೆಟ್ ವಿಮಾನ ಹೊಂದಿರುವ ಅಲ್ಲು ಅರ್ಜುನ್!
ಅಲ್ಲು ಅರ್ಜುನ್ ಕೇವಲ ಕೋಟಿ ಬೆಲೆಯ ಕಾರುಗಳಿಗೆ ಮಾತ್ರ ಸೀಮಿತ ಆಗಿಲ್ಲ. ಬದಲಿಗೆ ಅಲ್ಲು ಅರ್ಜುನ್ ಪ್ರೈವೆಟ್ ಜೆಟ್ ಮಾಲಿಕತ್ವ ಹೊಂದಿದ್ದಾರೆ. ಫ್ಯಾಮಿಲಿ ಟ್ರಿಪ್ ಮತ್ತು ಬ್ಯುಸಿನೆಸ್ ಟ್ರಿಪ್‌ಗಳಿಗಾಗಿ ಅಲ್ಲು ಅರ್ಜುನ್ ಈ ಜೆಟ್ ವಿಮಾನ ಬಳಸುತ್ತಾರೆ. ಈ ವಿಚಾರಗಳು ಅಲ್ಲು ಅರ್ಜುನ್ ಐಶಾರಾಮಿ ಬದುಕಿಗೆ ನಿದರ್ಶನ ಆಗಿವೆ. ಇನ್ನು ಇತ್ತೀಚೆಗೆ ರಿಲೀಸ್ ಆದ ಪುಷ್ಪ ಚಿತ್ರದ ಸಕ್ಸಸ್ ಅಲ್ಲು ಅರ್ಜುನ್ ಮಾರ್ಕೆಟ್ ಮತ್ತು ಬೇಡಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.


Click it and Unblock the Notifications











