ನೃತ್ಯ ನಿರ್ದೇಶಕನ ಪ್ರಾಣವನ್ನೇ ಕಸಿದ ಎಸಿ, ಮಲಗಿದ್ದ ವ್ಯಕ್ತಿ ಮತ್ತೆ ಮೇಲೇಳಲಿಲ್ಲ..!

ಮನುಷ್ಯನ ಬದುಕು ನೀರಿನ ಮೇಲೆ ಗುಳ್ಳೆ ಇದ್ದಂತೆ. ಬದುಕಿನಲ್ಲಿ ಯಾವತ್ತು ಏನು ಬೇಕಾದರೂ ಆಗಬಹುದು. ಸಾವು ಯಾವುದೇ ರೂಪದಲ್ಲಿ ಕೂಡ ಬರಬಹುದು. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ತೆಲುಗು ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ಹಂತ ಹಂತವಾಗಿ ಬೆಳೆಯುತ್ತಿದ್ದ 38 ವರ್ಷದ ವ್ಯಕ್ತಿಯ ಪ್ರಾಣವನ್ನು ಏರ್ ಕಂಡೀಷನರ್ ಬಲಿ ಪಡೆದ ದುರಂತ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೌದು, ತೆಲುಗು ಚಿತ್ರರಂಗದ ನೃತ್ಯ ನಿರ್ದೇಶಕ ವೀರೆಂದರ್ ರೆಡ್ಡಿ ಹೈದರಾಬಾದ್‌ನ ಪುಷ್ಪಲಗುಡದ ಶ್ರೀರಾಮನಗರ ಕಾಲೋನಿಯಲ್ಲಿರುವ ಕುತುಬ್ ಆರ್ಕೆಡ್ ಅಪಾರಟ್ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದರು. ಪ್ಲಾಟ್ ನಂಬರ್ 301ರಲ್ಲಿ ವಾಸ ಮಾಡುತ್ತಿದ್ದ ವೀರೇಂದರ್ ರೆಡ್ಡಿ ಎಂದಿನಂತೆ ತಮ್ಮ ಕೋಣೆಯಲ್ಲಿ ಮಂಗಳವಾರ ರಾತ್ರಿ ಎಸಿ ಆನ್ ಮಾಡಿ ಮಲಗಿದ್ದರು.

ac-short-circuit-claims-life-of-38-year-old-choreographer-veerender-reddy-while-he-slept

ಆದರೆ ಮಧ್ಯರಾತ್ರಿ 2-30ರ ಸುಮಾರು ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡಿತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ದಟ್ಟವಾದ ಹೊಗೆ ಆವರಿಸಿಕೊಂಡಿತು. ಬಟ್ಟೆ ಮತ್ತು ಪೀಠೋಪಕರಣಗಳೆಲ್ಲವೂ ಸುಟ್ಟು ಹೋದವು.

ಮನೆಯಲ್ಲಿ ಹರಡಿದ ಹೊಗೆಯನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮತ್ತು ಅಗ್ನಿ ಶಾಮ ದಳಕ್ಕೆ ಮಾಹಿತಿಯನ್ನು ನೀಡಿದರು. ಆದರೆ ಸ್ಥಳಕ್ಕೆ ಪೊಲೀಸರು ತಲುಪಿ ಮನೆಯೊಳಗೆ ಹೋದಾಗ ವೀರೇಂದರ್ ರೆಡ್ಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಸಿಪಿಆರ್ ಮಾಡಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡ ಹೊಗೆ ದೇಹದೊಳಗೆ ಹೋದ ಕಾರಣ
ವೀರೇಂದರ್ ರೆಡ್ಡಿ ಸಾವನ್ನಪ್ಪಿದರು.

ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವೇನು ಎನ್ನುವುದರ ಕುರಿತು ವಿದ್ಯುತ್ ಇಲಾಖೆಗೆ ವಿವರಣೆಯನ್ನು ಕೇಳಿದ್ದಾರೆ. ತನಿಖೆಯನ್ನು ನಡೆಸುತ್ತಿದ್ದಾರೆ.

More from Filmibeat

English summary
In the early hours of Wednesday, a tragic fire broke out at a residence in Sriramnagar Colony, Puppalaguda, within the Narsingi Police Station limits. A 38-year-old choreographer, who was asleep at the time, sadly lost his life after an air conditioner reportedly short-circuited, sparking the blaze.
Read more about: death tollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X