'ಆಚಾರ್ಯ' 2ನೇ ದಿನದ ಬಾಕ್ಸಾಫೀಸ್ ರಿಪೋರ್ಟ್: ಚಿರಂಜೀವಿಗೆ ಸೋಲಿನ ಸೂಚನೆ!
ಸದ್ಯ ತೆಲುಗಿನಲ್ಲಿ 'ಆಚಾರ್ಯ' ಚಿತ್ರದ ರಿಲೀಸ್ ಆಗಿದೆ. ಆದರೆ ಚಿತ್ರದ ಬಗ್ಗೆ ಸದ್ದಿಲ್ಲ. ರಾಮ್ ಚರಣ್ ಇತ್ತೀಚೆಗೆ RRR ಚಿತ್ರದಲ್ಲಿ ಅಬ್ಬರಿಸಿದ್ದರು. ಈ ಮೂಲಕ ಮತ್ತೊಂದು ಸೂಪರ್ ಹಿಟ್ ಚಿತ್ರದಲ್ಲಿ ಅಭಿನಯಿಸಿದ ಖ್ಯಾತಿ ಪಡೆದರು. RRR ಚಿತ್ರದ ನಂತರ 'ಆಚಾರ್ಯ' ಚಿತ್ರದಲ್ಲಿ ತಂದೆ ಚಿರಂಜೀವಿ ಜೊತೆಗೆ ನಟ ರಾಮ್ ಚರಣ್ ಅಭಿನಯಿಸಿದ್ದಾರೆ. ಅಪ್ಪ ಮಗನ ಕಾಂಬಿನೇಶನ್ ಚಿತ್ರ ಸಾಕಷ್ಟು ಕುತೂಹಲ ಹುಟ್ಟು ಹಾಕಿತ್ತು. ಆದರೆ ಚಿತ್ರ ಅಂದುಕೊಂಡ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಬಾಕ್ಸಾಫೀಸ್ ಕೂಡ ಡಲ್ ಆಗಿದೆ.
ಏಪ್ರಿಲ್ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಗ್ ಒಪನಿಂಗ್ ಪಡೆದುಕೊಳ್ಳುವಲ್ಲಿ ಚಿತ್ರ ವಿಫಲವಾಗಿದೆ. 'ಆಚಾರ್ಯ' ಚಿತ್ರದ 2 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ಇಲ್ಲಿದೆ.
'ಆಚಾರ್ಯ' ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಮೊದಲದಿನ ಉತ್ತಮ ಓಪನಿಂಗ್ ಪಡೆದಿಲ್ಲ, ಎರಡನೆ ದಿನ ವಾರಾಂತ್ಯ ಬಂದರೂ ಕೂಡ ಚಿತ್ರದ ಕಲೆಕ್ಷನ್ ಮಾತ್ರ ಹೆಚ್ಚಾಗಿಲ್ಲ. 'ಆಚಾರ್ಯ' ಚಿತ್ರ ಎರಡನೆ ದಿನಕ್ಕೆ ಒಟ್ಟಾರೆ ವಿಶ್ವಾದ್ಯಂತ ಕಲೆಕ್ಷನ್ 49 ಕೋಟಿ ಮುಟ್ಟಿದೆ.

ಆಚಾರ್ಯ ಎಡರನೆ ದಿನದ ಕಲೆಕ್ಷನ್ ರಿಪೋರ್ಟ್!
'ಆಚಾರ್ಯ' ಚಿತ್ರಕ್ಕೆ ಒಟ್ಟು 132 ಕೋಟಿ ರೂ. ಬಂಡವಾಳ ಹೂಡಲಾಗಿದೆ. ಆರಂಭದ ಎರಡು ದಿನದ ಕಲೆಕ್ಷನ್ ಗಮನಿಸಿದರೆ ಹಾಕಿದ ಬಂಡವಾಳ ಹಿಂಪಡೆಯಲು ಹೆಚ್ಚು ಸಮಯ ಬೇಕಾಗುವ ಸಾಧ್ಯತೆ ಇದೆ. ದಿನ ಗಳೆದಂತೆ ಸಿನಿಮಾಗಳ ಕಲೆಕ್ಷನ್ ಕಡಿಮೆ ಆಗುವುದು ಸಾಮಾನ್ಯ ಹಾಗಾಗಿ 'ಆಚಾರ್ಯ' ಫ್ಲಾಪ್ ಸಿನಿಮಾ ಎನಿಸಿಕೊಳ್ಳುವ ಸಾಧ್ಯತೆಯೂ ಇದೆ. ವಾರಂತ್ಯದಲ್ಲಿ ಸಿನಿಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೆ ಸಿನಿಮಾಕ್ಕೆ ಹಾಕಿದ ಬಂಡವಾಳವೂ ಬರದೆ ಆಗಬಹುದು.

ಕೊರಟಾಲ ಶಿವ ನಿರ್ದೇಶನಕ್ಕೆ ಕಳಂಕ!
'ಆಚಾರ್ಯ' ಕೊರಟಾಲ ಶಿವ ನಿರ್ದೇಶನದ ಆ್ಯಕ್ಷನ್ ಚಿತ್ರ ಇದು. ರಾಮ್ ಚರಣ್ ತೇಜ ಮತ್ತು ಚಿರಂಜೀವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಸೋನು ಸೂದ್ ಮತ್ತು ಇತರರು ಇದ್ದಾರೆ. ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ದೊಡ್ಡ, ದೊಡ್ಡ ಕಲಾವಿದರನ್ನು ಇಟ್ಟುಕೊಂಡು ಮಾಡಲಾಗಿದೆ. ಆದರೆ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ಎಡವಿದೆ.

ಆಚಾರ್ಯ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ!
'ಆಚಾರ್ಯ'ನ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. 'ಸಿದ್ಧ'ನ ಪಾತ್ರದಲ್ಲಿ ರಾಮ್ ಚರಣ್ ತೇಜ ಅಬ್ಬರಿಸಿದ್ದಾರೆ.ಧರ್ಮಸ್ಥಲಿ ಊರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ಪಾತ್ರಗಳು ಹೋರಾಡುತ್ತವೆ, ಇಡೀ ಚಿತ್ರದಲ್ಲಿ ಚಿರಂಜೀವಿ ಸ್ಟೈಲ್ ಮತ್ತು ಅಪ್ಪ ಮಗನ ಡ್ಯಾನ್ಸ್ ಮಾತ್ರ ಎಂಜಾಯ್ ಮಾಡಬಹುದು.

ಚಿರಂಜೀವಿ ಫ್ಯಾನ್ಸ್‌ಗೆ ಅಸಮಾಧಾನ!
'ಆಚಾರ್ಯ' ಚಿತ್ರ ಮೆಗಾ ಫ್ಯಾಮಿಲಿ ಫ್ಯಾನ್ಸ್‌ಗೂ ಕೂಡ ಅಸಮಾಧಾನ ತಂದಿದೆ. 'ಆಚಾರ್ಯ' ವಿಶ್ವದಾದ್ಯಂತ 2,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ನಾಲ್ಕು ದಿನಗಳ ಹಿಂದೆಯೇ ಚಿತ್ರದ ಬುಕ್ಕಿಂಗ್ ಶುರುವಾಗಿದೆ. ಅದರೂ ಚಿತ್ರದ ಬುಕ್ಕಿಂಗ್ ಬಗ್ಗೆಯೂ ಜನ ಹೆಚ್ಚಿನ ಆಸಕ್ತಿ ತೋರಿಲ್ಲ.


Click it and Unblock the Notifications











