For Quick Alerts
  ALLOW NOTIFICATIONS  
  For Daily Alerts

  'ಆಚಾರ್ಯ' ಸಿಕ್ರೇಟ್ ರಿವೀಲ್‌ ಮಾಡಿದ ಸಿದ್ದ!

  |

  ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರ ಪ್ರತಿ ಹಂತದಲ್ಲೂ ನಿರೀಕ್ಷೆ ಮೂಡಿಸಿಕೊಂಡು ಬಂದಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ಕಾಣಿಸಿಕೊಂಡಿದ್ದಾರೆ. ಅಪ್ಪ- ಮಗನ ಜುಗಲ್ ಬಂದಿ ನೋಡಲು ಸಿನಿರಸಿಕರು ಕಾತುರರಾಗಿದ್ದಾರೆ.

  ಆಚಾರ್ಯ ಸಿನಿಮಾದಲ್ಲಿ ಅಪ್ಪ- ಚಿರಂಜೀವಿ ಜೊತೆಗೆ ಮಗ ರಾಮ್‌ ಚರಣ್ ತೇಜ ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ಇಬ್ಬರ ಲುಕ್‌ ಕೂಡ ಈಗಾಗಲೇ ರಿಲೀಸ್ ಆಗಿದೆ. ಜೊತೆಗೆ ಚಿತ್ರದ ಟೀಸರ್ ಮತ್ತು ಹಾಡುಗಳು ಸಿನಿಮಾದ ಬಗ್ಗೆ ಸಣ್ಣ ಸಣ್ಣ ಸುಳಿವು ಬಿಟ್ಟು ಕೊಟ್ಟಿವೆ.

  ಈಗ ಚಿತ್ರದ ಅತಿ ಮುಖ್ಯ ಪಾತ್ರ ಸಿದ್ದ. ಸಿದ್ದನ ಪಾತ್ರದಲ್ಲಿ ನಟ ರಾಮ್ ಚರಣ್ ತೇಜ ಅಬ್ಬರಿಸಿದ್ದಾರೆ. ಈ ಪಾತ್ರದಲ್ಲಿ ರಾಮ್‌ಚರಣ್ ಅಬ್ಬರ ಹೇಗೆ ಇರಲಿದೆ ಎನ್ನುವುದರ ಪರಿಚಯ ಮಾಡಿ ಕೊಟ್ಟಿದೆ ಹೊಸ ಆ್ಯಕ್ಷನ್ ಟೀಸರ್.

  ಆ್ಯಕ್ಷನ್ ಮೂಡ್‌ನಲ್ಲಿ ರಾಮ್‌ ಚರಣ್ ತೇಜ!

  ಆ್ಯಕ್ಷನ್ ಮೂಡ್‌ನಲ್ಲಿ ರಾಮ್‌ ಚರಣ್ ತೇಜ!

  ಆಚಾರ್ಯದ ರಾಮ್ ಚರಣ್ ಪಾತ್ರದ ಆ್ಯಕ್ಷನ್ ಟೀಸರ್ ಬಿಡುಗಡೆ ಮಾಡಿದೆ ಚಿತ್ರ ತಂಡ. ಈ ಸಿನಿಮಾದಲ್ಲಿ ರಾಮ್ ಚರಣ್ ಸಿದ್ದನಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ಚರಣ್ ನಕ್ಸಲೈಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಟೀಸರ್‌ನಲ್ಲಿ ರಾಮ್‌ಚರಣ್ ಪಾತ್ರ ಸಂಪೂರ್ಣವಾಗಿ ರಿವೀಲ್ ಆಗಿದೆ.

  ಸಂಭಾಷಣೆಯ ಮೂಲಕ ಗಮನ ಸೆಳೆದ ಟೀಸರ್!

  ಸಂಭಾಷಣೆಯ ಮೂಲಕ ಗಮನ ಸೆಳೆದ ಟೀಸರ್!

  ಟೀಸರ್‌ನಲ್ಲಿರುವ ರಾಮ್‌ ಚರಣ್ ಅವರ ಸಂಭಾಷಣೆ ಆಕರ್ಷಕವಾಗಿದೆ. ಟೀಸರ್‌ನ ಕೊನೆಯಲ್ಲಿ, ಚಿರತೆಯ ಮರಿಯು ಕೊಳದ ಬಳಿ ನೀರು ಕುಡಿಯುತ್ತಿರುತ್ತದೆ. ಹಾಗೆ ಅದರ ತಾಯಿ ಚಿರತೆಯು ಮರಿ ಹಿಂದೆ ಬರುತ್ತದೆ. ಅದೇ ರೀತಿ ರಾಮ್‌ ಚರಣ್ ನೀರು ಕುಡಿಯುತ್ತಿರುವಾಗ ತಂದೆ ಚಿರಂಜೀವಿ ಅವರ ಹಿಂದೆ ಬರುತ್ತಾರೆ.

  ಅಪ್ಪ-ಮಗನನ್ನು ಚಿರತೆಗೆ ಹೋಲಿಕೆ!

  ಅಪ್ಪ-ಮಗನನ್ನು ಚಿರತೆಗೆ ಹೋಲಿಕೆ!

  ಈ ದೃಶ್ಯ ಸಿನಿಮಾದಲ್ಲಿ ಅಪ್ಪ ಮಗ ಇಬ್ಬರು ಒಟ್ಟಿಗೆ ಹೋರಾಡುತ್ತಾರೆ ಎನ್ನುವ ಸೂಚನೆ ಕೊಟ್ಟಿದೆ. ಇಲ್ಲಿ ರಾಮ್‌ ಚರಣ್ ಆ್ಯಕ್ಷನ್‌ ಹೇಗೆ ಇರಲಿದೆ ಎನ್ನುವುದರ ಪರಿಚಯ ಆಗಿದೆ. ಜೊತೆಗೆ ಸಿದ್ದನ ಲವ್‌ ಕಹಾನಿಯನ್ನು ಸೇರಿಸಲಾಗಿದೆ. ರಾಮ್‌ಚರಣ್‌ಗೆ ನಾಯಾಕಿ ಆಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.

  ಆಚಾರ್ಯ ಬಿಡುಗಡೆಗೆ ಮುಹೂರ್ತ ಫಿಕ್ಸ್!

  ಆಚಾರ್ಯ ಬಿಡುಗಡೆಗೆ ಮುಹೂರ್ತ ಫಿಕ್ಸ್!

  ಆಚಾರ್ಯ ಸಿನಿಮಾ ಮುಂದಿನ ವರ್ಷ ಫೆಬ್ರವರಿ 4 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಪ್ರಕಟಿಸಿದೆ.

  ಸುರೇಕ್ ಕೊನಿಡೇಲ ಪ್ರಸ್ತುತಪಡಿಸಿದ್ದು, ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಇನ್ನು ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಚಿರಂಜೀವಿಗೆ ಜೋಡಿಯಾಗಿದ್ದಾರೆ.

  English summary
  Acharya Teaser Out: Ram Charan's role as Siddha in Chiranjeevi, know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X