'ಅಲಾ ವೈಕುಂಠಪುರಂಲೋ' ಸಕ್ಸಸ್: ತಿಮ್ಮಪ್ಪನ ದರ್ಶನ ಪಡೆದ ಅಲ್ಲು ಮತ್ತು ಚಿತ್ರತಂಡ
ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ 'ಅಲಾ ವೈಕುಂಟಪುರಂಲೋ' ಸಿನಿಮಾ ಸೂಪರ್ ಹಿಟ್ ಆದ ಸಂತದಲ್ಲಿ ಇದ್ದಾರೆ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ದೇಶ ವಿದೇಶದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೆ ಖುಷಿಯಲ್ಲಿ ಅಲ್ಲು ಅರ್ಜುನ್ ಕುಟುಂಬ ಮತ್ತು ಚಿತ್ರತಂಡದ ಜೊತೆ ದೇವರ ದರ್ಶನಕ್ಕೆ ತೆರಳಿದ್ದಾರೆ.
ಹೌದು, ಇತ್ತೀಚಿಗೆ ಅಲ್ಲು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪತಿ ಸ್ನೇಹಾ ರೆಡ್ಡಿ ಮತ್ತು ಮಗಳ ಜೊತೆ ತಿಮ್ಮಪ್ಪನ ದರ್ಶನಕ್ಕೆ ತೆರಳಿದ ಅಲ್ಲುಗೆ ನಿರ್ದೇಶಕ ತ್ರಿವಿಕ್ರಂ ಸಾಥ್ ನೀಡಿದರು. ತಿಮ್ಮನ ದರ್ಶನಕ್ಕೆ ತೆರಳಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬನ್ನಿ ನೋಡಿದ ಅಭಿಮಾನಿಗಳು ಫೋಟೋಗಾಗಿ ಮುಗಿಬೀಳುತ್ತಿದ್ದರು.
ಈ ಹಿಂದೆ ನಟ ಮಹೇಶ್ ಬಾಬು ಕೂಡ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದರು. 'ಸರಿಲೇರು ನೀಕೆವ್ವರು' ಸಿನಿಮಾ ಸೂಪರ್ ಹಿಟ್ ಆದ ಸಂತಸಕ್ಕೆ ಮಹೇಶ್ ಬಾಬು ಕುಟುಂಬದ ಜೊತೆ ತೆರಳಿದ್ದರು. ಜೊತೆಗೆ ಸಿನಿಮಾ ತಂಡ ಕೂಡ ಸಾಥ್ ನೀಡಿತ್ತು. ಈಗ ಅಲ್ಲು ಅರ್ಜುನ್ ಕೂಡ ಭೇಟಿ ನೀಡಿದ್ದಾರೆ.

ಟಾಲಿವುಡ್ ನಲ್ಲಿ ಮಹೇಶ್ ಬಾಬು ಮತ್ತು ಅಲ್ಲು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಿದ್ದಾರೆ. ಎರಡು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಸಿನಿಮಾ ಕಲೆಕ್ಷನ್ ವಿಚಾರವಾಗಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಿದ್ದಾರೆ. ಆದರೆ ನಟರಿಬ್ಬರು ಯಾವುದಕ್ಕೂ ತಲೆಕೆಸಿಕೊಳ್ಳದೆ ಸಿನಿಮಾ ಸಕ್ಸಸ್ ನ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











