ಅಲಾ ವೈಕುಂಠಪುರಂಲೋ ಸಕ್ಸಸ್: ಮುಂಬೈಯಲ್ಲಿ ಮನೆ ಖರೀದಿಸಲು ಅಲ್ಲು ಪ್ಲಾನ್
Recommended Video

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಲಾ ವೈಕುಂಠಪುರಂಲೋ ಸಿನಿಮಾ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ದೇಶ ವಿದೇಶದಿಂದ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್ ಆಗಿದೆ. ಬಾಕ್ಸ್ ಆಫೀನಲ್ಲಿ ಧೂಳ್ ಎಬ್ಬಿಸಿರುವ ಅಲಾ ವೈಕುಂಠಪುರಂಲೋ ಚಿತ್ರ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿ ಬಂದಿರುವ ಅಲಾ ವೈಕುಂಠಪುರಂಲೋ ಚಿತ್ರದಲ್ಲಿ ಅಲ್ಲುಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಂಡಿದ್ದರು. ಇಬ್ಬರ ಕಾಂಬಿನೇಷನ್ ಚಿತ್ರಪ್ರಿಯರ ಹೃದಯಗೆದ್ದಿದ್ದು, ಚಿತ್ರದ ಹಾಡುಗಳು ಸಹ ಸೂಪರ್ ಆಗಿವೆ. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಚಿತ್ರತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ.
ಸಕ್ಸಸ್ ನ ಖುಷಿಯಲ್ಲಿರು ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಹೌದು, ಅಲ್ಲು ಮುಂಬೈನಲ್ಲಿ ಮನೆ ಖರೀದಿಸುವ ಪ್ಲಾನ್ ಮಾಡಿದ್ದಾರಂತೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಲ್ಲು ಮುಂಬೈನಲ್ಲಿ ಮನೆ ಖರೀದಿಸಬೇಕು ಎಂದು ಹೇಳಿದ್ದರು.

ನನಗೆ ಮುಂಬೈ ಅಂದರೆ ತುಂಬ ಇಷ್ಟ. ನಾನು ಜನರನ್ನು ಭೇಟಿ ಮಾಡಲು ಮುಂಬೈ ಬರುತ್ತೇನೆ. ಆದರೆ ನನಗೆ ಮುಂಬೈನಲ್ಲಿ ಯಾವುದೇ ಮನೆ ಇಲ್ಲ. ಹಾಗಾಗಿ ನಾನು ಮುಂಬೈನಲ್ಲಿ ಮನೆ ಖರೀದಿಸುವ ಪ್ಲಾನ್ ಮಾಡುತ್ತಿದ್ದೀನಿ" ಎಂದು ಹೇಳಿದ್ದಾರೆ. ಇತ್ತೀಚಿಗೆ ಅಲ್ಲು ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು. ಮನೆ ಖರೀದಿಸಿದ ನಂತರ ಅಲ್ಲು ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಅಲ್ಲು ಅರ್ಜುನ್ ಮುಂದಿನ ಸಿನಿಮಾದ ಸುಕುಮಾರ್ ಜೊತೆ ಮಾಡುತ್ತಿದ್ದಾರೆ. ಮುಂದಿನ ಸಿನಿಮಾದ ಬಗ್ಗೆ ಹೆಚ್ಚು ರಿವೀಲ್ ಮಾಡದ ಅಲ್ಲು ಸದ್ಯ ಎಆರ್ ಮುರುಗದಾಸ್ ಜೊತೆಯು ಸಿನಿಮಾ ಮಾಡಲಿದ್ದಾರಂತೆ. ಎರಡು ಸಿನಿಮಾವನ್ನು ಒಟ್ಟಿಗೆ ಚಿತ್ರೀಕರಣ ಮಾಡಲಿದ್ದಾರಂತೆ.


Click it and Unblock the Notifications











