ಸೋದರ ಮಾವನನ್ನು ಕಳೆದುಕೊಂಡ ದುಃಖದಲ್ಲಿ ನಟ ಅಲ್ಲು ಅರ್ಜುನ್
ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಸೋದರ ಮಾವನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಲ್ಲು ಅರ್ಜುನ್ ಮಾವ ಮುತ್ತಮಸೆಟ್ಟಿ ರಾಜೇಂದ್ರ ಪ್ರಸಾದ್ ನಿನ್ನೆ ಮೃತಪಟ್ಟಿದ್ದಾರೆ. ರಾಜೇಂದ್ರ ಪ್ರಸಾದ್ ಸ್ವಗೃಹ ವಿಜಯವಾಡದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಟ ಅಲ್ಲು ಅರ್ಜುನ್ ಮತ್ತು ಪತ್ನಿ ಸ್ನೇಹಾ ಸೇರಿದಂತೆ ಇಡೀ ಕುಟುಂಬ ವಿಜಯವಾಡಕ್ಕೆ ತೆರಳಿದೆ.
ರಾಜೇಂದ್ರ ಪ್ರಸಾದ್, ಅಲ್ಲು ಅರ್ಜುನ್ ತಾಯಿಯ ಸಹೋದರ. ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡ ದುಃಖದಲ್ಲಿದ್ದ ಇಡೀ ಅಲ್ಲು ಕುಟುಂಬ ಹೈದರಾಬಾದ್ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ನಟ ಅಲ್ಲು ಅರ್ಜುನ್ ಮಾವನ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಅಲ್ಲು ತುಂಬ ಇಷ್ಟಪಡುತ್ತಿದ್ದ ವ್ಯಕ್ತಿ ರಾಜೇಂದ್ರ ಪ್ರಸಾದ್ ಎಂದು ಹೇಳಲಾಗುತ್ತಿದೆ.
ಕುಟುಂಬದ ಜೊತೆ ಮಾತ್ರವಲ್ಲದೆ ಮಾವ ರಾಜೇಂದ್ರ ಪ್ರಸಾದ್ ಅಲ್ಲು ಅರ್ಜುನ್ ಸಿನಿಮಾ ಜೀವನದಲ್ಲೂ ಜೊತೆಯಾಗಿದ್ದರು. ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಸಿನಿಮಾಗೂ ರಾಜೇಂದ್ರ ಪ್ರಸಾದ್ ಒನ್ ಆಫ್ ದಿ ನಿರ್ಮಾಪಕ ಆಗಿದ್ದರಂತೆ.

ಅಲ್ಲು ಸದ್ಯ ಅಲಾ ವೈಕುಂಟಪುರಂಲೋ ಸಿನಿಮಾ ಸಕ್ಸಸ್ ಖುಷಿಯಲ್ಲಿ ಇದ್ದರು. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಧೂಳ್ ಎಬ್ಬಿಸುತ್ತಿದೆ. ಇದರ ಜೊತೆಗೆ ಸದ್ಯ ಸೆಟ್ಟೇರಬೇಕಿರುವ ನಿರ್ದೇಶಕ ಸುಕುಮಾರ್ ಜೊತೆಗಿನ ಸಿನಿಮಾದ ಬ್ಯುಸಿಯಲ್ಲಿ ಇದ್ದರು. ಆದರೆ ದಿಢೀರ್ ಬಂದ ನಿಧನದ ಸುದ್ದಿ ಅಲ್ಲು ಕುಟುಂಬಕ್ಕೆ ಆಘಾತ ತಂದಿದೆ.


Click it and Unblock the Notifications











