ಈ ಇಬ್ಬರು ನಟರು ಅಲ್ಲು ಅರ್ಜುನ್ ಸ್ಫೂರ್ತಿ

Recommended Video

ಅಲ್ಲು ಅರ್ಜುನ್ ಜೀವನದಲ್ಲಿ ಇವರಿಬ್ಬರು ತುಂಬಾ ಇಂಪಾರ್ಟೆಂಟ್

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಅಲ ವೈಕುಂಠಪುರಮುಲೋ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆದಿದೆ.

ಈ ಚಿತ್ರದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತನಗೆ ಸ್ಫೂರ್ತಿ ನೀಡಿದ ನಟರ ಬಗ್ಗೆ ಮಾತನಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ನನಗೆ ದೊಡ್ಡ ಸ್ಫೂರ್ತಿ ಎಂದಿದ್ದಾರೆ.

''ಚಿರಂಜೀವಿ ರವರ ನಂತರ ನಾನು ತುಂಬ ತುಂಬ ತುಂಬ ಅಭಿಮಾನಿಸುವ ನಟ ರಜನಿಕಾಂತ್. ಅವರು ನನಗೆ ದೊಡ್ಡ ಸ್ಫೂರ್ತಿ. ಅಂತಹ ರಜನಿಕಾಂತ್ ಅವರ ಸಿನಿಮಾ 'ದರ್ಬಾರ್' ಬಿಡುಗಡೆ ಆಗುತ್ತಿದೆ. ಆ ಸಿನಿಮಾಗೆ ಶುಭವಾಗಲಿ'' ಎಂದಿದ್ದಾರೆ.

Actor Allu Arjun Wishes For Darbar Movie

''ನಿರ್ದೇಶಕ ಮುರುಗದಾಸ್ ನನಗೆ ಬಹಳ ಇಷ್ಟ. ಅವರು ಮತ್ತು ರಜನಿಕಾಂತ್ ಸರ್ ಕಾಂಬಿನೇಶನ್ ನಲ್ಲಿ ದರ್ಬಾರ್ ಸಿನಿಮಾ ಬರುತ್ತಿದೆ. ಸಂಕ್ರಾಂತಿಗೆ ಆ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಆ ಸಿನಿಮಾ ಗೆಲ್ಲಲಿ.'' ಎಂದು ಅಲ್ಲು ಅರ್ಜುನ್ ವಿಶ್ ಮಾಡಿದ್ದಾರೆ.

'ಅಲ ವೈಕುಂಠಪುರಮುಲೋ' ಸಿನಿಮಾ ಜನವರಿ 12 ರಂದು ಬಿಡುಗಡೆ ಆಗುತ್ತಿದೆ. ಜನವರಿ 9 ರಂದು 'ದರ್ಬಾರ್' ಚಿತ್ರ ತೆರೆಗೆ ಬರುತ್ತಿದೆ. 'ದರ್ಬಾರ್' ತೆಲುಗಿನಲ್ಲಿಯೂ ಬಿಡುಗಡೆ ಆಗುತ್ತಿದ್ದು, ಎರಡು ಚಿತ್ರಗಳ ನಡುವೆ ಸ್ಪರ್ಧೆ ನಡೆಯಲಿದೆ. ತಮ್ಮ ಸಿನಿಮಾದ ಜೊತೆಗೆ ಬರುತ್ತಿರುವ 'ದರ್ಬಾರ್' ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಅಲ್ಲು ಅರ್ಜುನ್ ಕೇಳಿಕೊಂಡಿದ್ದಾರೆ.

More from Filmibeat

English summary
Actor Allu Arjun wishes for 'Darbar' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X