twitter
    For Quick Alerts
    ALLOW NOTIFICATIONS  
    For Daily Alerts

    ಅತ್ಯಾಚಾರಿಗಳನ್ನು ಗಲ್ಲಿಗೇರಿಸಬಾರದು ಎಂದ ಪವನ್ ಕಲ್ಯಾಣ್ ವಿರುದ್ಧ ಭುಗಿಲೆದ್ದ ಆಕ್ರೋಶ

    |

    ಹೈದರಾಬಾದ್ ನಲ್ಲ ನಡೆದ ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ತೆಲುಗು ನಟ ಮತ್ತು ಜನಸೇನ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನೀಡಿದ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಮಟ್ಟಕ್ಕೆ ಹೋಗಬಾರದು, ಆರೋಪಿಗಳನ್ನು ಗಲ್ಲಿಗೇರಿಸಲು ನನ್ನ ಸಹಮತ ಇಲ್ಲ ಎಂದು ಹೇಳಿದ್ದಾರೆ.

    ಪವನ್ ಹೇಳಿಕೆ ಖಂಡಿಸಿ ಅನೇಕರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದ್ದಾರೆ. ಪವನ್ ಕಲ್ಯಾಣ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ, ಇದು ಮಹಿಳೆಯರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯಾಗಿದೆ ಎಂದು ಅನೇಕರು ಆಕ್ರೋಶ ಹೊರಹಾಕಿತ್ತಿದ್ದಾರೆ. ಇಡೀ ದೇಶವೆ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ ಪವನ್ ಕಲ್ಯಾಣ್ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಭಿಮಾನಿಗಳಿಗೆ ನಿರಾಸೆ ಮಾಡಿದ ಪವನ್ ಕಲ್ಯಾಣ್!ಅಭಿಮಾನಿಗಳಿಗೆ ನಿರಾಸೆ ಮಾಡಿದ ಪವನ್ ಕಲ್ಯಾಣ್!

    ಇತ್ತೀಚಿಗೆ ಪವನ್ ಕಲ್ಯಾಣ್ ಜನಸೇನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ "ಸಹೋದರಿ ಪಶು ವೈದ್ಯೆ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಇಡೀ ದೇಶವೆ ಒತ್ತಾಯಿಸುತ್ತಿದೆ. ಆದರೆ ನನ್ನ ಪ್ರಕಾರ ಜನ ಯಾಕೆ ಇಷ್ಟು ತೀವ್ರ ಮಟ್ಟಕ್ಕೆ ಯೋಚಿಸುತ್ತಿದ್ದಾರೆ. ಈ ರೀತಿಯ ಘಟನೆಗಳ ಸಂದರ್ಭದಲ್ಲಿ ಗಲ್ಲಿಗೇರಿಸುವಂತ ಬೇಡಿಕೆಗಳನ್ನು ಮಾಡಬಾರದು" ಎಂದು ಹೇಳಿದ್ದಾರೆ.

    Actor and Politician Pawan Kalyan Against Death Penalty for Rapists

    "ಯಾರನ್ನು ಕೊಲ್ಲುವ ಹಕ್ಕು ನಮಗೆ ಇಲ್ಲ. ಆರೋಪಿಗಳನ್ನು ಗಲ್ಲಿಗೇರಿಸುವ ಅಗತ್ಯವಿಲ್ಲ. ಅವರಿಗೆ ಕಬ್ಬಿಣದ ಸರಳುಗಳಿಂದ ಹೊಡೆದು ಶಿಕ್ಷೆಕೊಡಬೇಕು. ಸಿಂಗಾಪುರ ಮಾದರಿಯಲ್ಲಿ ಶಿಕ್ಷೆ ವಿಧಿಸಬೇಕು. ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಒತ್ತಾಯಿಸುವುದು ತಪ್ಪು" ಎಂದು ಹೇಳಿದ್ದಾರೆ.

    ಪವನ್ ಹೇಳಿಕೆಗೆ ಭಾರಿ ವಿರೋದ ವ್ಯಕ್ತವಾಗುತ್ತಿದೆ. ವೈ ಎಸ್ ಆರ್ ಪಿ ಕಾಂಗ್ರೇಸ್ ಮುಖ್ಯಸ್ಥ ಮಾತನಾಡಿ ಪವನ್ ಹೇಳಿಕೆ ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತಿದೆ, ಇಡೀ ದೇಶವೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದರೆ ಅವರು ಈ ರೀತಿಯ ಬೇಜಾವಾಬ್ದಾರಿಯುತ ಹೇಳಿಕೆ ನೀಡುವುದು ತಪ್ಪು ಎಂದು ಹೇಳಿದ್ದಾರೆ.

    ಇನ್ನು ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವೆ ಪವನ್ ಕಲ್ಯಾಣ್ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಅನೇಕ ರಾಜಕೀಯ ವ್ಯಕ್ತಿಗಳು ಮತ್ತು ನೆಟ್ಟಿಗರು ಪವನ್ ಹೇಳಿಕೆಯನ್ನು ವಿರೋಧಿಸಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

    English summary
    Pawan Kalyan Against Death Penalty for veterinary Rape accused.
    Thursday, December 5, 2019, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X