"ನಿತ್ಯಾನಂದ ಬಳಿ ಹೋಗಿ ನನ್ನ ಮಕ್ಕಳನ್ನು ವಾಪಸ್ ಕಳ್ಸು ಅಂತ ಆವಾಜ್ ಹಾಕ್ದೆ.. ಆದ್ರೆ ಅವನು, ನನ್ನ ಮಕ್ಕಳು"...

By ಫಿಲ್ಮಿಬೀಟ್ ಡೆಸ್ಕ್

"ನನ್ನ ಇಬ್ಬರು ಹೆಣ್ಣುಮಕ್ಕಳು ಗಂಡಂದಿರಿಗೆ ಡಿವೋರ್ಸ್ ಕೊಟ್ಟು ನಿತ್ಯಾನಂದನ ಆಶ್ರಮ ಸೇರಿದ್ದಾರೆ. ಅವರು ವಾಪಸ್ ಬರಲೇ ಇಲ್ಲ ಎನ್ನುವ ಹಿರಿಯ ನಟ ಅಶೋಕ್ ಕುಮಾರ್ ಮಾತುಗಳು ಈಗ ಸಖತ್ ವೈರಲ್ ಆಗುತ್ತಿದೆ. ನಟಿ ರಂಜಿತಾ ಮಾತ್ರ ನಿತ್ಯಾನಂದನ ಮಾಯೆಯಲ್ಲಿ ಬಿದ್ದಿದ್ದಾಳೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಆಕೆಯ ಅಕ್ಕನ ಕಥೆ ಅಚ್ಚರಿ ಮೂಡಿಸಿದೆ.

ಇಬ್ಬರು ಹೆಣ್ಣು ಮಕ್ಕಳು ಹೀಗೆ ಏಕಾಏಕಿ ಹೋಗಿ ನಿತ್ಯಾನಂದನ ಆಶ್ರಮ ಸೇರಿಕೊಂಡಿದ್ದಾರಾ? ಹೊರ ಪ್ರಪಂಚ, ಕುಟುಂಬಸ್ಥರ ಸಂಪರ್ಕವೇ ಇಲ್ಲದೇ ಬದುಕುತ್ತಿದ್ದಾರಾ? ಎಂದು ಕೆಲವರು ಕೇಳುತ್ತಿದ್ದಾರೆ. ಇನ್ನು ತನ್ನ ಕುಟುಂಬವೇ ನನಗೆ ಶತ್ರು ಆಗಿಬಿಡ್ತು ಎಂದು ನಟ ಅಶೋಕ್‌ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳ ಜೀವನ ಹೀಗಾಯ್ತಲ್ಲ ಎಂದು ಪತ್ನಿ ಕೂಡ ಅದೇ ಕೊರಗಿನಲ್ಲಿ ಕೊನೆಯುಸಿರು ಎಳೆದಳು ಎಂದು ಹೇಳಿದ್ದಾರೆ. ತೆಲುಗಿನ ಸುಮನ್ ಟಿವಿ ಯೂಟ್ಯೂಬ್ ಸಂದರ್ಶನದ ವೇಳೆ ಮಕ್ಕಳನ್ನು ನೆನೆದು ಅಶೋಕ್‌ ಕುಮಾರ್ ಭಾವುಕರಾಗಿದ್ದಾರೆ.

Actor Ashok Kumar asked Nithyananda to send his daughter Ranjitha back

ಮದುವೆ ಆಗಿ ಅಮೆರಿಕಾದಲ್ಲಿ ನೆಲೆಸಿದ್ದ ಅಶೋಕ್‌ ಕುಮಾರ್ ಹಿರಿಯ ಮಗಳು ನಿರ್ಮಲಾ ನಿತ್ಯಾನಂದ ಪ್ರವಚನ ಕೇಳಲು ಹೋಗುತ್ತಿದ್ದಳಂತೆ. ಅಕ್ಕನನ್ನು ನೋಡಲು ರಂಜಿತಾ ಆಗಾಗ್ಗೆ ಅಮೆರಿಕಾಗೆ ಹೋಗುತ್ತಿದ್ದಳು. ಅಕ್ಕನ ಜೊತೆ ತಾನು ಕೂಡ ನಿತ್ಯಾನಂದನ ಆಶ್ರಮಕ್ಕೆ ಹೋಗಲು ಆರಂಭಿಸಿದ್ದಳು. ನಂತರ ಬಿಡದಿ ಆಶ್ರಮಕ್ಕೆ ಹೋಗಲು ಪ್ರಾರಂಭಿಸಿದ್ದಾಗಿ ಅಶೋಕ್ ಕುಮಾರ್ ಹೇಳಿದ್ದಾರೆ. ಕೊನೆಗೆ ಇಬ್ಬರು ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದ್ದಾಗಿ ತಿಳಿಸಿದ್ದಾರೆ.

ಆಶ್ರಮಕ್ಕೆ ಹೋಗಿ ಗಲಾಟೆ

ನಟ ಅಶೋಕ್‌ ಕುಮಾರ್ ಆರಂಭದಲ್ಲಿ ಮಕ್ಕಳು ಆಶ್ರಮಕ್ಕೆ ಹೋಗಿ ಬರುತ್ತಿದ್ದಾರೆ ಅಷ್ಟೇ ಎಂದುಕೊಂಡಿದ್ದರು. ಯಾವಾಗ ಅಲ್ಲೇ ಇರಲು ಆರಂಭಿಸಿದರೋ, ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಹೋಗಿ ಆಶ್ರಮ ಸೇರಿಬಿಟ್ಟರೋ ಆಗ ಶಾಕ್ ಆಗಿದೆ. ಹೇಗಾದರೂ ಮಾಡಿ ಮತ್ತೆ ಮಕ್ಕಳಾದ ನಿರ್ಮಾಲಾ ಹಾಗೂ ರಂಜಿತಾಳನ್ನು ಮನೆಗೆ ವಾಪಸ್ ಕರೆದುಕೊಂಡು ಬರಬೇಕು ಎಂದುಕೊಂಡಿದ್ದಾರೆ. ಇದೇ ಕಾರಣಕ್ಕೆ ನಿತ್ಯಾನಂದನ ಆಶ್ರಮಕ್ಕೆ ಹೋಗಿ ಗಲಾಟೆ ಮಾಡಿದ್ದಾರೆ"

Actor Ashok Kumar asked Nithyananda to send his daughter Ranjitha back

ನಿನ್ನನ್ನು ನೋಡಿ ನಾಚಿಕೆ ಎಂದೆ

"ನಾನು ಆಶ್ರಮಕ್ಕೆ ಹೋಗುತ್ತಿದ್ದಂತೆ ಬನ್ನಿ ಬನ್ನಿ. ನನಗೆ ನಿಮ್ಮನ್ನು ನೋಡಿ ತುಂಬಾ ಖುಷಿ ಆಗುತ್ತಿದೆ. ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದ ಹೇಳಿದ. "ನನಗೆ ನಿನ್ನ ಬಗ್ಗೆ ಹೆಮ್ಮೆ ಇಲ್ಲ, ನಿನ್ನನ್ನು ನೋಡಿ ನಾಚಿಕೆ ಆಗುತ್ತಿದೆ ಎಂದು ಹೇಳಿದೆ. ಬಳಿಕ ನಮ್ಮ ಇಬ್ಬರು ಹೆಣ್ಣ ಮಕ್ಕಳನ್ನು ಯಾಕೆ ಇಲ್ಲಿ ಸೇರಿಸಿಕೊಂಡಿದ್ದೀಯಾ, ಅವರನ್ನು ನನ್ನೊಟ್ಟಿಗೆ ವಾಪಸ್ ಕಳ್ಸು ಎಂದೆ. ಅದಕ್ಕೆ ಆತ ಅವರು ಬಂದರೆ ಕರೆದುಕೊಂಡು ಹೋಗಿ ಎಂದ"

ರಂಜಿತಾ, ನಿರ್ಮಲಾ ಬರಲ್ಲ ಅಂದಿದ್ದೇಕೆ?

ತಂದೆ ಅಶೋಕ್ ಕುಮಾರ್ ಹೋಗಿ ಕರೆದರೂ ರಂಜಿತಾ, ನಿರ್ಮಲಾ ಮನೆಗೆ ವಾಪಸ್ ಬರಲು ಒಪ್ಪಲಿಲ್ಲವಂತೆ. "ನಮಗೆ ಮೋಕ್ಷ ಸಿಕ್ಕಿದೆ. ನಮಗೆ ಇಲ್ಲಿ ಬಹಳ ಆನಂದ ಸಿಗುತ್ತಿದೆ. ನಾವು ಬಹಳ ಸಂತೋಷವಾಗಿ ಇದ್ದೇವೆ" ಎಂದು ಹೇಳಿದರು. ಆ ನಂತರ ನನ್ನ ಜೊತೆ ಫೋನ್‌ನಲ್ಲಿ ಮಾಡಿ ಕೂಡ ಮಾತನಾಡಲಿಲ್ಲ. "ಮುಂಬೈನಲ್ಲಿರುವ ನನ್ನ ಚಿಕ್ಕ ಮಗಳಿಗೆ ಆಗಾಗ ಮೆಸೇಜ್ ಮಾಡುತ್ತಾರಂತೆ. ತಾವು ಆಶ್ರಮದಲ್ಲಿ ಸಂತೋಷವಾಗಿ ಇರೋದಾಗಿ ಹೇಳ್ತಾರಂತೆ" ಎಂದು ಅಶೋಕ್ ಕುಮಾರ್ ತಿಳಿಸಿದ್ದಾರೆ.

More from Filmibeat

English summary
Actor Ashok Kumar asked Nithyananda to send his daughter Ranjitha back. He Says what happend later. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X