For Quick Alerts
  ALLOW NOTIFICATIONS  
  For Daily Alerts

  ಮತ್ತೆ ಅಭಿಮಾನಿ ಕಪಾಳಕ್ಕೆ ಹೊಡೆದ ನಟ ಬಾಲಕೃಷ್ಣ

  |

  ಸಿನಿಮಾಗಳಲ್ಲಿ ವಿಲನ್‌ಗಳ ಮೇಲೆ ದರ್ಪ ತೋರಿಸುವ ಹೀರೋಗಳು ನಿಜ ಜೀವನದಲ್ಲೂ ತಾವು 'ಹೀರೋ'ಗಳೇ ಎಂಬಂತೆ ವರ್ತಿಸುವ ಕೆಲವು ಉದಾಹರಣೆಗಳು ದೊರಕುತ್ತವೆ. ತೆಲುಗು ಚಿತ್ರರಂಗದಲ್ಲಿ ಇಂಥಹವು ಹೆಚ್ಚು.

  ತೆಲುಗು ಚಿತ್ರರಂಗದಲ್ಲಿ ಅದರಲ್ಲಿಯೂ ಬಾಲಕೃಷ್ಣ ಇಂಥಹಾ ಅಂಹಕಾರದ ವರ್ತನೆಯಿಂದ ಆಗಾಗ್ಗೆ ಸುದ್ದಿಗೆ ಬರುತ್ತಲೇ ಇರುತ್ತಾರೆ. ಇದೀಗ ಅಭಿಮಾನಿಯೊಬ್ಬನ ಮೇಲೆ ಕೈಮಾಡಿ ಮತ್ತೆ ಸುದ್ದಿಗೆ ಬಂದಿದ್ದಾರೆ ಬಾಲಕೃಷ್ಣ.

  ನಿನ್ನೆ (ಮಾರ್ಚ್ 6) ಟಿಡಿಪಿ ಪಕ್ಷದ ಕಾರ್ಯಕ್ರಮಕ್ಕೆಂದು ತೆರಳಿದ್ದ ಬಾಲಕೃಷ್ಣ, ಅಲ್ಲಿ ಅಭಿಮಾನಿಯೊಬ್ಬರ ಕಪಾಳಕ್ಕೆ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಯಾಗಿತ್ತು.

  ಹಿಂದುಪುರದಲ್ಲಿ ನಡೆದಿರುವ ಘಟನೆ

  ಹಿಂದುಪುರದಲ್ಲಿ ನಡೆದಿರುವ ಘಟನೆ

  ಶಾಸಕರೂ ಆಗಿರುವ ಬಾಲಕೃಷ್ಣ ಮರ್ಚ್ 6 ರಂದು ಹಿಂದುಪುರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು. ಈ ಸಮಯ ಮುಖಂಡರೊಬ್ಬರ ಮನೆಗೆ ಭೇಟಿ ನೀಡಿದ್ದರು ಬಾಲಕೃಷ್ಣ. ಈ ಸಮಯ ಬಾಲಕೃಷ್ಣ ಅಭಿಮಾನಿಯೊಬ್ಬ ಮೊಬೈಲ್‌ನಲ್ಲಿ ಬಾಲಕೃಷ್ಣ ಅವರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಇದನ್ನು ನೋಡುತ್ತಿದ್ದ ಗರಂ ಆದ ಬಾಲಕೃಷ್ಣ ಅಭಿಮಾನಿ ಬಳಿಗೆ ಹೋಗಿ ಕಪಾಳಕ್ಕೆ ಹೊಡೆದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ ಆತನ ಬಳಿ ಹೋಗಿ ಮತ್ತೊಮ್ಮೆ ಕಪಾಳಕ್ಕೆ ಹೊಡೆದು ಆತನನ್ನು ಅಲ್ಲಿಂದ ಹೊರಗೆ ದಬ್ಬಿದ್ದಾರೆ.

  ಸಖತ್ ವೈರಲ್ ಆಗಿದೆ ವಿಡಿಯೋಗಳು

  ಸಖತ್ ವೈರಲ್ ಆಗಿದೆ ವಿಡಿಯೋಗಳು

  ಬಾಲಕೃಷ್ಣ ಹೀಗೆ ಅಭಿಮಾನಿಗೆ ಹೊಡೆದಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಟಿವಿಗಳಲ್ಲಿ ಸಹ ಪ್ರಸಾರವಾಗಿ ವಿಪಕ್ಷಗಳು ಬಾಲಕೃಷ್ಣ ಅವರ ವರ್ತನೆಯನ್ನು ಕಠುವಾಗಿ ಟೀಕಿಸಿವೆ. ಬಾಲಕೃಷ್ಣ ಈ ರೀತಿ ವರ್ತಿಸುತ್ತಿರುವುದು ಇದು ಮೊದಲೇನೂ ಅಲ್ಲ.

  ಬಾಲಕೃಷ್ಣ ಹೊಡೆದಿದ್ದು ಸಂತೋಶವಾಗಿದೆ ಎಂದ ಅಭಿಮಾನಿ

  ಬಾಲಕೃಷ್ಣ ಹೊಡೆದಿದ್ದು ಸಂತೋಶವಾಗಿದೆ ಎಂದ ಅಭಿಮಾನಿ

  ಇದಾದ ಬಳಿಕ ಇಂದು ಬಾಲಕೃಷ್ಣ ಅವರಿಂದ ಹೊಡೆತ ತಿಂದ ಅಭಿಮಾನಿ ವಿಡಿಯೋ ಒಂದನ್ನು ಮಾಡಿದ್ದು, ಬಾಲಕೃಷ್ಣ ಅವರು ನನಗೆ ಹೊಡೆದಿದ್ದರಿಂದ ನನಗೆ ಸಂತಸವೇ ಆಗಿದೆ ಎಂದಿದ್ದಾರೆ. 'ಅಂದು ಅವರು ಸಾಕಷ್ಟು ಸುಸ್ತಾಗಿದ್ದರು, ಹಾಗಾಗಿ ಅವರಿಗೆ ಬೇಗ ಕೋಪ ಬಂತು. ಬಾಲಕೃಷ್ಣ ಅವರು ಯಾರ ಕೈ ಸಹ ಕುಲುಕುವುದಿಲ್ಲ ಆದರೆ ನನ್ನನ್ನು ಮುಟ್ಟಿಕೊಂಡರು' ಎಂದಿದ್ದಾನೆ ಆ ಅಂಧ ಅಭಿಮಾನಿ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada
  ನಿರ್ಮಾಪಕರ ಮೇಲೆ ಗುಂಡು ಹಾರಿಸಿದ್ದ ಬಾಲಕೃಷ್ಣ

  ನಿರ್ಮಾಪಕರ ಮೇಲೆ ಗುಂಡು ಹಾರಿಸಿದ್ದ ಬಾಲಕೃಷ್ಣ

  ಈ ಮೊದಲು ಸಹ ಹಲವು ಬಾರಿ ಬಾಲಕೃಷ್ಣ ಅವರು ಚಿತ್ರ ತೆಗೆಸಿಕೊಳ್ಳಲು ಬಂದ ಅಭಿಮಾನಿಗಳ ಮೇಲೆ ಕೈಎತ್ತಿದ್ದಾರೆ. ಕೆಟ್ಟ-ಕೆಟ್ಟ ಪದಗಳನ್ನು ಬಳಸಿ ಬೈಯ್ಯುವ ವಿಡಿಯೋಗಳು ಸಹ ವೈರಲ್ ಆಗಿದ್ದವು. ಅದಕ್ಕೂ ಮುನ್ನಾ ತಮ್ಮ ಸಿನಿಮಾದ ನಿರ್ಮಾಪಕ ಬಿ.ಸುರೇಶ್ ಹಾಗೂ ಅವರ ಸಹಾಯಕನ ಮೇಲೆ 2004 ರಲ್ಲಿ ತಮ್ಮದೇ ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ್ದರು. ಅದೃಷ್ಟವಶಾತ್ ಇಬ್ಬರೂ ಬದುಕುಳಿದರು.

  English summary
  Telugu actor Balakrishna slapped his fan in Hindupura. A fan try to take pictures of Balakrishna and he angrily slapped him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X