For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಕಾರ್ಮಿಕರಿಗೆ ಮೆಗಾಸ್ಟಾರ್ ಚಿರಂಜೀವಿಯಿಂದ ಉಚಿತ ಕೊರೊನಾ ಲಸಿಕೆ

  |

  ದೇಶದೆಲ್ಲೆಡೆ ಕೊರೊನಾ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಮತ್ತೊಂದೆಡೆ ಜನ ಕೊರೊನಾ ಲಸಿಕೆಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

  ಉಚಿತ ಕೊರೊನಾ ಲಸಿಕೆ ಮತ್ತಿ ಔಷಧಿಗಳನ್ನು ಪೂರೈಸ್ತಿದ್ದಾರೆ ಮೆಗಾಸ್ಟಾರ್ | Filmibeat Kannada

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾರಂಗದಲ್ಲಿ ಕೆಲಸ ಮಾಡುವವರಿಗೆ ಉಚಿತ ಕೊರೊನಾ ಲಸಿಕೆ ನೀಡಲು ಮುಂದಾಗಿದ್ದಾರೆ. ಅಪೋಲೋ ಫೌಂಡೇಶನ್ ಜೊತೆ ಸೇರಿ ಈ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಉಚಿತ ಕೊರೊನಾ ಲಸಿಕೆ ಮತ್ತು ರಿಯಾಯಿತಿ ದರದಲ್ಲಿ ಔಷಧಿಗಳನ್ನು ಪೂರೈಸಲು ರೆಡಿಯಾಗಿದ್ದಾರೆ.

  ಪ್ರಕಾಶ್ ರಾಜ್ ನಟನೆ ಮೆಚ್ಚಿ ಅಭಿನಂದಿಸಿದ ಚಿರಂಜೀವಿಪ್ರಕಾಶ್ ರಾಜ್ ನಟನೆ ಮೆಚ್ಚಿ ಅಭಿನಂದಿಸಿದ ಚಿರಂಜೀವಿ

  ಒಂದು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಸಿನಿಮಾ ಕಾರ್ಮಿಕರು ಮತ್ತು ಸಿನಿಮಾ ಪತ್ರಕರ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ವ್ಯಾಕ್ಸಿನ್ ಪಡೆಯಬಹುದು. ಈ ಬಗ್ಗೆ ಸ್ವತಃ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ.

  ಕಳೆದ ವರ್ಷ ಕೂಡ ಕೊರೊನಾ ಸಮಯದಲ್ಲಿ ನಟ ಚಿರಂಜೀವಿ ಸಾಕಷ್ಟು ಸಹಾಯ ಮಾಡಿದ್ದರು. ತಮ್ಮ ಚಾರಿಟಿಯಿಂದ ಸಿನಿ ಕಾರ್ಮಿಕರ ಬೆನ್ನಿಗೆ ನಿಂತಿದ್ದರು. ಅಗತ್ಯ ವಸ್ತುಗಳನ್ನು ನೀಡಿದ್ದರು. ತಮ್ಮ ಕಾರ್ಯವನ್ನು ಈ ವರ್ಷವೂ ಮುಂದುವರೆಸಿದ್ದು, ಉಚಿತ ಕೊರೊನಾ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

  ಚಿರಂಜೀವಿ ಈ ಮಹತ್ವದ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಮೆಗಾಸ್ಟಾರ್ ಆಚಾರ್ಯ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೀಗ ಹೆಚ್ಚಾದ ಕೊರೊನಾದಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ.

  English summary
  Actor Chiranjeevi announces free covid vaccine for film workers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X