For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಿನಿಮಾದ ಟೈಟಲ್ ರಿವೀಲ್: ಬಾಯಿತಪ್ಪಿ ಚಿತ್ರದ ಹೆಸರು ಹೇಳಿದ ಮೆಗಾಸ್ಟಾರ್

  |

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಅಂದಮೇಲೆ ಕ್ರೇಜ್ ಸಿಕ್ಕಾಪಟ್ಟೆ ಇರುತ್ತೆ. ಇತ್ತೀಚಿಗಷ್ಟೆ ಸೈರಾ ನರಸಿಂಹ ರೆಡ್ಡಿ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಿರಂಜೀವಿ ಈಗ 152ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿರಂಜೀವಿ 152ನೇ ಸಿನಿಮಾಗೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

  ಅಂದ್ಹಾಗೆ ಚಿರಂಜೀವಿ ಹೊಸ ಚಿತ್ರದ ಟೈಟಲ್ ಏನು ಎನ್ನುವುದು ಬಹಿರಂಗವಾಗಿರಲಿಲ್ಲ. ಟೈಟಲ್ ಏನಾಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೆ ಚಿರಂಜೀವಿ ಬಾಯಿತಪ್ಪಿ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಚಿರು ಬಾಯಿಂದ ದಿಢೀರನೆ ಚಿತ್ರದ ಶೀರ್ಷಿಕೆ ಬಹಿರಂಗವಾಗಿರುವುದು ಚಿತ್ರತಂಡಕ್ಕೆ ನಿರಾಸೆ ಮೂಡಿಸಿದೆ. ಹಾಗಾದರೆ ಸಿನಿಮಾ ಟೈಟಲ್ ಏನು? ಮುಂದೆ ಓದಿ..

  ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!

  'ಓ ಪಿಟ್ಟಿ ಕಥಾ' ಸಮಾರಂಭದಲ್ಲಿ ಭಾಗಿಯಾಗಿದ್ದ ಮೆಗಾಸ್ಟಾರ್

  'ಓ ಪಿಟ್ಟಿ ಕಥಾ' ಸಮಾರಂಭದಲ್ಲಿ ಭಾಗಿಯಾಗಿದ್ದ ಮೆಗಾಸ್ಟಾರ್

  ಇತ್ತೀಚಿಗೆ ಮೆಗಾಸ್ಟಾರ್ ಚಿರಂಜೀವಿ, ಚಂದ್ರು ಮುದ್ದು ನಿರ್ದೇಶನದ 'ಓ ಪಿಟ್ಟಿ ಕಥಾ' ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರವೊಂದಕ್ಕೆ ಗೆಸ್ಟ್ ಆಗಿ ಆಗಮಿಸಿದ್ದರು. ಈ ಸಮಾರಂಭದಲ್ಲಿ ಮೆಗಾಸ್ಟಾರ್ 'ಓ ಪಿಟ್ಟಿ ಕಥಾ' ಸಿನಿಮಾದ ಬಗ್ಗೆ ಮಾತನಾಡುತ್ತ, ತನ್ನ ಹೊಸ ಸಿನಿಮಾದ ಟೈಟಲ್ ಅನ್ನು ಬಾಯಿತಪ್ಪಿ ಹೇಳಿದ್ದಾರೆ. ಚಿರು ಟೈಟಲ್ ರಿವೀಲ್ ಮಾಡಿದ್ದು ನೋಡಿ ಒಮ್ಮೆ ಎಲ್ಲರಿಗೂ ಅಚ್ಚರಿಯಾಯಿತು.

  ಚಿರಂಜೀವಿ ಸಿನಿಮಾ ಟೈಟಲ್ ಏನು?

  ಚಿರಂಜೀವಿ ಸಿನಿಮಾ ಟೈಟಲ್ ಏನು?

  ಕಾರ್ಯಕ್ರಮದಲ್ಲಿ ಮಾತನಾಡುತ್ತ ಚಿರಂಜೀವಿ ತನ್ನ ಹೊಸ ಸಿನಿಮಾದ ಟೈಟಲ್ 'ಆಚಾರ್ಯ' ಎಂದು ಹೇಳಿದ್ದಾರೆ. ಇಂಟ್ರಸ್ಟಿಂಗ್ ಆಗಿರುವ ಟೈಟಲ್ ಕೇಳಿ ಚಿರು ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಅಂದ್ಹಾಗೆ ಆಚಾರ್ಯ ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿದೆ. ಆದರೆ ಚಿತ್ರತಂಡ ಇದುರೆಗೂ ಚಿತ್ರದ ಟೈಟಲ್ ಅನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.

  ಚಿರಂಜೀವಿ ಹೊಸ ಚಿತ್ರದಲ್ಲಿ ಸರ್ಪ್ರೈಸ್ ನೀಡಿದ ರಾಮ್ ಚರಣ್!ಚಿರಂಜೀವಿ ಹೊಸ ಚಿತ್ರದಲ್ಲಿ ಸರ್ಪ್ರೈಸ್ ನೀಡಿದ ರಾಮ್ ಚರಣ್!

  ತಂಡದ ಬಳಿ ಕ್ಷಮೆ ಕೇಳಿದ ಚಿರಂಜೀವಿ

  ತಂಡದ ಬಳಿ ಕ್ಷಮೆ ಕೇಳಿದ ಚಿರಂಜೀವಿ

  ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳಾದರು ಚಿತ್ರತಂಡ ಟೈಟಲ್ ಅನ್ನು ರಿವೀಲ್ ಮಾಡದೆ ಗುಟ್ಟಾಗಿ ಕಾಪಾಡಿಕೊಂಡು ಬಂದಿತ್ತು. ಚಿರಂಜೀವಿ ಬಾಯಿಂದನೆ ಬಹಿರಂಗವಾಗಿರುವುದ ಚಿತ್ರಡಕ್ಕೆ ಕೊಂಚ ಬೇಸರವೊಂಟು ಮಾಡಿದೆ. ದೊಡ್ಡ ಕಾರ್ಯಕ್ರಮ ಮಾಡಿ ಟೈಟಲ್ ಅನನ್ನು ಅದ್ಧೂರಿಯಾಗಿ ರಿವೀಲ್ ಮಾಡಬೇಕು ಎಂದುಕೊಂಡಿದ್ದ ತಂಡಕ್ಕೆ ನಿರಾಸೆಯಾಗಿದ್ದರಿಂದ ಚಿರಂಜೀವಿ ಮಾಡಿದ ತಪ್ಪಿಗೆ ಚಿತ್ರತಂಡ ಬಳಿ ಕ್ಷಮೆ ಕೇಳಿದ್ದಾರಂತೆ.

  ಮೆಗಾಸ್ಟಾರ್ ಚಿರಂಜೀವಿ ಕಣ್ಣಲ್ಲಿ ನೀರು ತರಿಸಿದ 'RX100' ನಟ ಕಾರ್ತಿಕೇಯಮೆಗಾಸ್ಟಾರ್ ಚಿರಂಜೀವಿ ಕಣ್ಣಲ್ಲಿ ನೀರು ತರಿಸಿದ 'RX100' ನಟ ಕಾರ್ತಿಕೇಯ

  ಚಿರುಗೆ ತ್ರೀಷಾ ನಾಯಕಿ

  ಚಿರುಗೆ ತ್ರೀಷಾ ನಾಯಕಿ

  ಸದ್ಯ ಚಿರಂಜೀವಿ ಅಂಡ್ ಟೀಂ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಅಡ್ಡಾದಿಂದ ಚಿರಂಜೀವಿ ಲುಕ್ ರಿವೀಲ್ ಆಗಿದೆ. ಚಿರಂಜೀವಿ ಮಧ್ಯವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಕ್ಸಲೀಯ ಸಮಾಜ ಸುಧಾರಕನಾಗಿ ಬದಲಾಗುವ ಪಾತ್ರವಂತೆ. ಚಿರುಗೆ ನಾಯಕಿಯಾಗಿ ತ್ರಿಷಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಖಳ ನಟನಾಗಿ ಸೋನು ಸೂದ್ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Telugu Actor Chiranjeevi next movie title Acharya. He accidentally revealed his movie next movie title. This movie Is directed by Koratala Shiva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X