ವೇದಿಕೆಯಲ್ಲೇ ನಿರೂಪಕಿ ಸುಮಾಗೆ ಕಿಸ್ ಕೊಟ್ಟ ನಟ; ವೀಡಿಯೋ ಫುಲ್ ವೈರಲ್

ವಿಕ್ರಂ ನಟಿಸಿರುವ 'ತಂಗಲಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗ್ತಿದೆ. ಈಗಾಗಲೇ ಸಿನಿಮಾ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರ್ತಿದೆ. ಕೆಜಿಎಫ್ ಗಣಿಯ ಸುತ್ತಾ ಈ ಸಿನಿಮಾ ಕಥೆ ಸುತ್ತಲಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಿನಿಮಾ ಪ್ರೀ ರಿಲೀಸ್ ಈವೆಂಟ್ ನಡೆಯಿತು. ನಟ ಚಿಯಾನ್ ವಿಕ್ರಂ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡಿದೆ. ಪಾ. ರಂಜಿತ್ ಈ ಪೀರಿಯಡ್ ಆಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ 'KGF' ಸರಣಿಗಿಂತ ವಿಭಿನ್ನ ಸಿನಿಮಾ ಇದು ಎಂದು ಚಿತ್ರತಂಡ ಹೇಳುತ್ತಾ ಬರುತ್ತಿದೆ.

Actor Daniel Caltagirone kissed anchor suma hand on-stage

ತಮಿಳುನಾಡು ಬಿಟ್ಟರೆ ತಮಿಳು ಸಿನಿಮಾಗಳಿಗೆ ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಮಾರ್ಕೆಟ್ ಇದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಅಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಸ್ಟುಡಿಯೋ ಗ್ರೀನ್, ನೀಲಂ ಪ್ರೊಡಕ್ಷನ್ಸ್, ಜಿಯೋ ಸ್ಟುಡಿಯೋಸ್ ಜಂಟಿಯಾಗಿ 'ತಂಗಲಾನ್' ಸಿನಿಮಾ ನಿರ್ಮಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕರ್ನಾಟಕದಲ್ಲಿ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ.

KGF ಗಣಿಯ ಹುಟ್ಟು, ಆ ಸಮಯದಲ್ಲಿ ಬ್ರಿಟೀಷರು ಅಲ್ಲಿನ ಬುಡಕಟ್ಟು ಜನರ ಮೇಲೆ ನಡೆಸಿದ ದೌರ್ಜನ್ಯ, ಅವರ ವಿರುದ್ಧ ಹೋರಾಟದ ಕಥೆ 'ತಂಗಲಾನ್' ಚಿತ್ರದಲ್ಲಿದೆ. ಚಿತ್ರದಲ್ಲಿ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ರೋಚಕವಾಗಿ ಸಿನಿಮಾ ಮೂಡಿ ಬಂದಿದೆ. ಚಿಯಾನ್ ವಿಕ್ರಂ ಲುಕ್ ನೋಡಿ ಕೆಲವರು ಹುಬ್ಬೇರಿಸಿದ್ದಾರೆ. ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಇನ್ನು ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಿರೂಪಕಿ ಸುಮಾಗೆ ಶಾಕ್ ಕಾದಿತ್ತು. ತಮ್ಮ ಲವಲವಿಕೆಯ ನಿರೂಪಣೆಯಿಂದ ಆಕೆ ಸದಾ ಗಮನ ಸೆಳೆಯುತ್ತಾರೆ. ಹಾಗಾಗಿ ದೊಡ್ಡ ದೊಡ್ಡ ಸಿನಿಮಾ ಕಾರ್ಯಕ್ರಮಗಳ ನಿರೂಪಣೆ ಜವಾಬ್ದಾರಿ ಆಕೆಗೆ ಸಿಗುತ್ತದೆ. 'ತಂಗಲಾನ್' ವೇದಿಕೆಯಲ್ಲಿ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಇದ್ದಕ್ಕಿದಂತೆ ಸುಮಾ ಕೈಗೆ ಮುತ್ತಿಟ್ಟಿದ್ದಾರೆ. ಇದರಿಂದ ಒಂದು ಕ್ಷಣ ಶಾಕ್ ಆಗಿದ್ದ ಸುಮಾ ಬಳಿಕ ತಮಾಷೆಯಾಗಿ ಅದನ್ನು ತಿಳಿಗೊಳಿಸಿದ್ದಾರೆ.

Actor Daniel Caltagirone kissed anchor suma hand on-stage

ಚಿತ್ರತಂಡದವರೆಲ್ಲಾ ವೇದಿಕೆ ಮೇಲೆ ಬಂದು ಸಿನಿಮಾ ಬಗ್ಗೆ ಮಾತನಾಡಿದ್ದರು. ಅದೇ ರೀತಿ ಡೇನಿಯಲ್ ವೇದಿಕೆ ಏರಿದ್ದರು. ಈ ವೇಳೆ ಸುಮಾ ಆತನಿಗೆ ಒಂದಷ್ಟು ತೆಲುಗು ಸಾಲುಗಳನ್ನು ಹೇಳಿಕೊಟ್ಟರು, ಅದನ್ನು ಹೇಳಿ ಡೇನಿಯಲ್ ಚಪ್ಪಾಳೆ ಗಿಟ್ಟಿಸಿದರು. ಈ ವೇಳೆ ಸುಮಾ ಶೇಕ್ ಹ್ಯಾಂಡ್ ಮಾಡಿ ಆತನನ್ನು ಬೀಳ್ಕೊಡಲು ಹೊರಟರು. ಆಗ ಡೇನಿಯಲ್ ಆಕೆಯ ಕೈಗೆ ಮುತ್ತು ಕೊಟ್ಟಿದ್ದಾರೆ.

ಸುಮಾ ಇದ್ದಕ್ಕಿದಂತೆ ಒಂದು ಕ್ಷಣ ಅವಕ್ಕಾದರು. ಬಳಿಕ ಅಯ್ಯೋ, ರಾಜಾ(ಪತಿ ರಾಜು ಕನಕಾಲ) ನಮ್ಮ ಸಹೋದರ ಇವರು. ರಾಖಿ ಹಬ್ಬ ಬರುತ್ತಿದೆ. 'ಅಣ್ಣಯ್ಯ' ಎಂದು ಹಾಡು ಹಾಡಿ ತಮಾಷೆಯಾಗಿ ಅದಕ್ಕೆ ಸುಖಾಂತ್ಯ ಹಾಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

ಲಂಡನ್ ಮೂಲದ ನಟ ಡೇನಿಯಲ್ ಕ್ಯಾಲ್ಟಗಿರೋನ್ 'ದಿ ಬೀಚ್', ಲಿಪ್‌ಸ್ಟಿಕ್ಕಾ, 'ಕನ್‌ವೀನಿಯನ್ಸ್', 'ಸ್ಮೋಕಿಂಗ್ ಗನ್ಸ್', 'ದಿ ಫಾಲ್' 'ಎಲಿಮಿನೇಟರ್ಸ್', 'ಡೆವಿಲ್' ಸೇರಿದಂತೆ ಒಂದಷ್ಟು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ತಂಗಲಾನ್' ಆತನ ಮೊದಲ ಭಾರತೀಯ ಸಿನಿಮಾ ಆಗಿದೆ.

More from Filmibeat

English summary
Anchor suma shocked when actor kissed her hand on Thangalaan event stage;
Read more about: telugu hollywood anchor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X